ನಮಗೆ ಏಕೆ ಈ ಸೌಂದರ್ಯಪ್ರಜ್ಞೆ ಇಲ್ಲ?
ಕವಿಮನಸ್ಸಿಗೆ ಸಂತೋಷಪಡಲು ಹೂತ( ಹೂ ಬಿಟ್ಟ ) ಹುಣಸೀಮರವೂ ಸಾಕು ಅಂತ ವರಕವಿ ಬೇಂದ್ರೆ ಹೇಳುತ್ತಾರೆ. ಸ್ವಿಜರ್ಲೆಂಡಿನಲ್ಲಿ ಹೆಚ್ಚೂ ಕಡಿಮೆ ಎಲ್ಲ ಕಿಟಕಿಗಳಲ್ಲಿ ಮಾಡುಗಳಲ್ಲಿ ಹಸಿರು ಎಲೆಗಳ ನಡುವೆ ಕೆಂಪು ಹೂಗಳನ್ನು ನೋಡಬಹುದು. ನಮಗೆ ಏಕೆ ಈ ಸೌಂದರ್ಯಪ್ರಜ್ಞೆ ಇಲ್ಲ? ಅದಕ್ಕೇನು ಹೆಚ್ಚು ಖರ್ಚು ಬೇಕಿಲ್ಲವಲ್ಲ ? ಮುಂಬೈಯ ಪ್ರಮುಖಭಾಗವಾದ ಭಾಗವಾದ ಚರ್ಚ್ ಗೇಟ್ , ಕಫೇ ಪರೇಡ್, ನಾರಿಮನ್ ಪಾಯಿಂಟ್ ಗಳಲ್ಲಿ ಎಷ್ಟೆಷ್ಟೋ ಪ್ರತಿಷ್ಠಿತ ಕಚೇರಿಗಳಿವೆ. ಎಲ್ಲರೂ ಸಾಕಷ್ಟು ಗಿಡಗಳನ್ನೂ ಹಚ್ಚಿದ್ದಾರೆ. ಆದರೆ ಒಂದಾದರೂ ಹೂ ಕಾಣುವುದಿಲ್ಲ. ನಮ್ಮ ಜನ ಹರಿದುಕೊಂಡು ಹೋಗುತ್ತಾರೆ ಎಂಬ ಕಾರಣದಿಂದ ಹೂವಿನ ಗಿಡಗಳನ್ನು ಹಚ್ಚಿಲ್ಲ ಅಂತ ಕಾಣುತ್ತದೆ!
Comments
ಉ: ನಮಗೆ ಏಕೆ ಈ ಸೌಂದರ್ಯಪ್ರಜ್ಞೆ ಇಲ್ಲ?