ಹಜಾರೆ ಹೋರಾಟ "ಐತಿಹಸಿಕ" ಅಲ್ಲ; "ಪೌರಾಣಿಕ"!
ಸರ್ವವ್ಯಪೀ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿ ದೇಶವನ್ನೆಬ್ಬಿಸಿದ ಧೀರ ಅಣ್ಣಾ ಹಜಾರೆ. ಆದರೀಗ ಈ ಜಾಗೃತಿಯೇ ಜಾಡುತಪ್ಪಿದಂತೆನಿಸುತ್ತಿದೆ.
ನಾಗರಿಕ ಸಮಾಜದ ‘ಸುರರು’, ರಾಜಕೀಯ ಸಮಾಜದ ‘ಅಸುರರು’, ದೇಶದ ಪ್ರಜಾಸತ್ತೆ ಎಂಬ ಮೌಢ್ಯದ ಕಡಲ ಕಡೆಯ ಹೊಟಿದ್ದಾರೆ; ಜನಲೋಕಪಾಲ ಮಸೂದೆಯೆಂಬ ಮಂದರ ಪರ್ವತ; ವಾಸುಕಿಯಾಗಿ ಸುತ್ತಿ ಮೈ ಸವೆಸಿಕೊಳ್ಳಲು ಮುಗ್ಧ ಮಹಾಜನತೆ... ಸದ್ಯಕ್ಕಂತೂ ವೃಷಭಾವತಿಯ ಬುದ್ಬುಧದಂತೆ ಹಾಲಾಹಲ ಹುಟ್ಟಿದೆ.... ಪುರಾಣದ ಕತೆ ಹೀಗೇ ಮುಂದುವರೆದೀತು. ಲೊಕಪಾಲ ಬಂದರೂ, ಬರದಿದ್ದರೂ ಅದು ನಮ್ಮ ಪ್ರಜಸತ್ತೆಗೆ ಅಮೃತವಂತೂ ಆಗಲಾರದು!
ಭ್ರಷ್ಟಾಚಾರದ ಗಂಗೋತ್ರಿಯನ್ನು ಮುಟ್ಟದೆ, ಸರಕಾರಿ ಕಚೇರಿ ಜವಾನ-ಗುಮಾಸ್ತರಿಂದ ಹಿಡಿದು ಪ್ರಧಾನಮಂತ್ರಿ ಮತ್ತು ನ್ಯಾಯಾಂಗ ಮುಖ್ಯಸ್ಥರವರೆಗಿನ ಲಂಚದ ಫಲಾನುಭವಿಗಳನ್ನು ಒಬ್ಬೊಬ್ಬರನ್ನಾಗಿ ಹಿಡಿದು ಬಗ್ಗುಬಡಿಯಬೇಕೆಂಬ ಛಲ, ನಾಗರಿಕ ಸಮಾಜದ್ದು, ಪರಶುರಾಮ ಕೊಡಲಿ ಹಿಡದು ಕ್ಷತ್ರಿಯರೆಲ್ಲರ ಸಂಹಾಕ್ಕೆ ಹೊರೆಟಂತೆ! ಆದರೆ ಭ್ರಷ್ಟಾಚರದ ಹುಟ್ಟು ಇರುವುದಾದರೂ ಎಲ್ಲಿ? ಜಾತಿ-ಮತ ರಾಜಕೀಯದಲ್ಲಿ; ಛಿದ್ರೀಕರಣ-ತುಷ್ಟಿಕರಣದಲ್ಲಿ; ಇಂಥಾ ಗುಂಪುಗುಳಿಗಳು ಅಷ್ಟಷ್ಟೇ ವೋಟು ಗೆದ್ದರೂ ಮಂತ್ರಿ-ಮುಖಂಡರಾಗುವ ಪ್ರಜಾಸತ್ತಾ ಸನ್ನಿವೇಶದಲ್ಲಿ! ಈ ವಾಸ್ತವ ನಾಗರಿಕ ಸಮಾಜದವರಿಗೇಕೆ ಕಾಣುತ್ತಿಲ್ಲ? ಅಥವಾ ಅವರೇಕೆ ನೋಡುವುದಿಲ್ಲ?!
ಗೆಲ್ಲುವವರು, ವ್ಯಾಪಕವಾಗಿ, ಕ್ಷೇತ್ರದ ಶೇ. ೫೧+ ಮತಪಡೆಯಲೇಬೇಕೆಂದಾದರೆ, ಆ ನೈಜ ಜನದೇಶವನ್ನು, ಹಣ, ಹೆಂಡ, ತೋಳ್ಬಲದ ಬಲಾತ್ಕಾರದಿಂದ ಕಸಿದುಕೊಳ್ಳಲಾಗುವುದಿಲ್ಲ. ಅಂಥವರು ಅನಿವಾರ‍್ಯವಾಗಿ ಬಹುಮತದ ಹಿತಕ್ಕೆ ಗಮನ ಕೊಡಲೇಬೇಗುತ್ತದೆ; ವಿರೊಧಿಸುವವರು ಸಹ, ಆಣೆ-ಪ್ರಮಾಣ, ಸುಳ್ಳು ಕಡತ, ಬ್ಲಾಕ್‌ಮೇಲ್ ತಂತ್ರಜ್ಞಾನ ಬಿಟ್ಟು ತಾರ್ಕಿಕವಾಗಿ-ತಾತ್ತ್ವಿಕವಾಗಿಯೇ ವರ್ತಿಸಬೇಕಾಗುತ್ತದೆ.
ಅಣ್ಣಾ ಹಜಾರೆ & ಕೋ, ಕ್ಷುದ್ರ ರಾಜಕೀಯದೊಂದಿಗಿನ ಅಸಫಲ ಹೋರಾಟದ ಬದಲು ಇಂತಹ ಅರಿವಿನ ಕ್ರಾಂತಿಯಲ್ಲಿ ತೊಡಗಿದರೆ ಪ್ರಜಾಸತ್ತೆ ಕೃತಜ್ಞವಾಗಲಾರದೇ?
Comments
ಉ: ಹಜಾರೆ ಹೋರಾಟ "ಐತಿಹಸಿಕ" ಅಲ್ಲ; "ಪೌರಾಣಿಕ"!
In reply to ಉ: ಹಜಾರೆ ಹೋರಾಟ "ಐತಿಹಸಿಕ" ಅಲ್ಲ; "ಪೌರಾಣಿಕ"! by manju787
ಉ: ಹಜಾರೆ ಹೋರಾಟ "ಐತಿಹಸಿಕ" ಅಲ್ಲ; "ಪೌರಾಣಿಕ"!