ಇಂದಿನ ರಾಜಕೀಯ........
"ಜನ ಸೇವೆ ಜನಾರ್ಧನ ಸೇವೆ" ಬಾಯಿ ಮಾತು ಮಾತ್ರ
ರಾಜಕೀಯ ಎನ್ನುವುದು ಹಣ ಮಾಡುವ ಸೂತ್ರ
ದುಡ್ಡೆ ದೊಡ್ಡಪ್ಪ ಅನ್ನೊ ಇವರಿಗೆ ಇಲ್ಲ ಕುಲ-ಗೋತ್ರ
ವಿಧಾನಸೌಧ ತವರಿದ್ದಂತೆ ತಿಂದುಂಡು ಮಲಗುವ ಛತ್ರ
ಕೈ ಮುಗಿದು ಓಟು ಕೇಳಲು ಬರುವಾಗ ಕಾಲು ನಡಿಗೆ
ಆಕಸ್ಮಾತ್ ಗೆದ್ದು ಬಂದರೆ ಓಟು ಹಾಕಿದವ ಕಾಲಿನ ಅಡಿಗೆ
ಕ್ಶೇತ್ರ ತಿರುಗಲು ಬೇಕು ಐಶಾರಾಮಾದ ಕಾರು
ಜನಸೇವೆಯ ಜನಾರ್ಧನನಿಗೆ ಸಾಯಂಕಾಲ ಲೇಡಿಸ್ ಬಾರು
ಸರಕಾರದಲ್ಲಿ ಮಿನಿಸ್ಟ್ರಾದ್ರೆ ಹೊಡಿತು ಅನ್ನಿ ಲಾಟ್ರಿ
ಸರಕಾರ ಬೀಳೊದ್ರೊಳಗೆ ಮಾಡ್ಕೊತಾನೆ ಕೋಟಿ ಕೋಟಿ
ಭೂಮಿ, ಚಿನ್ನ, ಸಂಪತ್ತು ಒಂದರ ಮೇಲೊಂದು ಹಗರಣ
ಕೋರ್ಟು-ಕಛೇರಿಗಳೆಲ್ಲ ಇವರಿಗೆ ಆಯಾಸ ತೀರಿಸುವ ತಾಣ
ನೀ ಕಳ್ಳ - ನಾ ಸಾಚಾ ಎಂದು ಬೆಟ್ಟು ಮಾಡುವ ಜಾತಿ
ಇವರ ಕಾಳಗ ನೋಡಿ-ನೋಡಿ ನಾಡಿನ ಜನರ ಪಜೀತಿ
ದೇವರ ಹೆಸರಲ್ಲಿ ಆಣೆ ಹಾಕಲು ಇವರಿಗಿಲ್ಲ ನಾಚಿಕೆ
ನಾಡಿನ ಕಾನೂನು ವ್ಯವಸ್ಥೆ ಮೇಲೆ ಇವರದೇ ದಬ್ಬಾಳಿಕೆ
ಜರಾಸಂಧ, ಕೀಚಕರ ಕೈಯಲ್ಲಿ ಗಾಂಧಿಯ ಕನಸಿನ ರಾಮರಾಜ್ಯ
ಭ್ರಷ್ಟಾಚಾರ ಇಲ್ಲದಿರೆ ನಾವು ಉಳಿಯೊದಿಲ್ಲ ಎನ್ನುವ ರಾವಣರಾಜ್ಯ
ಪಕ್ಶ-ವಿಪಕ್ಶಗಳ ಕಾದಾಟದಲ್ಲಿ ನಾಡಿನ ಮಾನ ಹರಾಜು
ನಾಡಿನ ಏಳಿಗೆ ಮರೆತು ಇವರದೇನಿದು ಮುಗಿಯಲಾರದ ಮೋಜು
Comments
ಉ: ಇಂದಿನ ರಾಜಾಕೀಯಾ.....
In reply to ಉ: ಇಂದಿನ ರಾಜಾಕೀಯಾ..... by ಭಾಗ್ವತ
ಉ: ಇಂದಿನ ರಾಜಾಕೀಯಾ.....
ಉ: ಇಂದಿನ ರಾಜಕೀಯ........
ಉ: ಇಂದಿನ ರಾಜಕೀಯ........
ಉ: ಇಂದಿನ ರಾಜಕೀಯ........
ಉ: ಇಂದಿನ ರಾಜಕೀಯ........
In reply to ಉ: ಇಂದಿನ ರಾಜಕೀಯ........ by ನಂದೀಶ್ ಬಂಕೇನಹಳ್ಳಿ
ಉ: ಇಂದಿನ ರಾಜಕೀಯ........