ಮನೆ ಎಂದರೆ ಅದು ಬರಿ ಮನೆಯಲ್ಲ + ಶ್ರೀ ಪ್ರಸನ್ನರಿಂದ ರಚಿತ ಚಿತ್ರದೊಂದಿಗೆ

ಮನೆ ಎಂದರೆ ಅದು ಬರಿ ಮನೆಯಲ್ಲ + ಶ್ರೀ ಪ್ರಸನ್ನರಿಂದ ರಚಿತ ಚಿತ್ರದೊಂದಿಗೆ

 

 

 

 

 

 

 

 

 

 

 

 

 

 

[ನನ್ನ ಕವನಕ್ಕೆ ಶ್ರೀ ಪ್ರಸನ್ನರವರು ಪ್ರೀತಿಯಿಂದ ಬರೆದುಕೊಟ್ಟಿರುವ ಚಿತ್ರ]

 

ಮನೆ ಎಂದರೆ ಅದು ಬರಿ ಮನೆಯಲ್ಲ

 

 

ಮನೆ ಎಂದರೆ ಅದು ಬರಿ ಮನೆಯಲ್ಲ
ಕಲ್ಲು ಕಬ್ಬಿಣದಿ ಕಟ್ಟಡ ಕಟ್ಟಿ ಬಣ್ಣ ಹಚ್ಚಿ ಮೆರಗು ಕಟ್ಟಿದ
ಸ್ಥೂಲ ರೂಪದ ಮನೆಯಲ್ಲ|

ಮನೆ ಎಂದರೆ ಅದು ಬರಿ ಮನೆಯಲ್ಲ
ಭಾವನೆಯ ಕಲ್ಲು ಕಟ್ಟಡ ಕಟ್ಟಿ ನೆಮ್ಮದಿಯ ಬಣ್ಣ ಹಚ್ಚಿದ
ಸೂಕ್ಷ್ಮ ರೂಪದ ಮನೆಯದು ಅಮೂರ್ತ ರೂಪ|

ವಂಶದ ಹಿರಿಯರ ಹರಕೆಯೆ ಮನೆಯ ಚಾವಣಿ
ಚಾವಣಿ ಸೋರಿದರೇನು ಬಿಡಿ ತೇಪೆ ಹಚ್ಚಿದರಾಯ್ತು|

ಮಕ್ಕಳೂ ತೋರುವ ಗೌರವ ಪ್ರೀತಿಯದುವೆ ಮನೆಗೆ ಬಣ್ಣ
ಬಣ್ಣ ತೇಲಿದರೇನು ಬಿಡಿ  ಮಕ್ಕಳಲ್ಲವೆ! ಬಣ್ಣ ಹಚ್ಚಿದರಾಯ್ತು|

ದೊಡ್ಡವರ ಅಕ್ಕರೆ ಪ್ರೀತಿಯದುವೆ ಮನೆಯ ಗೋಡೆ
ಗೋಡೆ ಬಿರುಕಾದರೇನು ಬಿಡಿ ಅಳತೆ ಹಿಡಿದು ಗೋಡೆ ಕಟ್ಟಿದರಾಯ್ತು|

ಮನೆಯ ಸದಸ್ಯರ ಪರಸ್ಪರ ನಂಬಿಕೆಯೆ ಮನೆಗೆ ಅಡಿಪಾಯ
ಎಚ್ಚರ ಕಲ್ಲೊಂದು ಸಡಲಿದರು ಮನೆಯೆ ಕುಸಿದು ಬಿದ್ದೀತು|

ಮನೆ ಎಂದರೆ ಅದು ಬರಿ ಮನೆಯಲ್ಲ
ನಂಬಿಕೆಯ ಅಡಿಗಲ್ಲಿನ ಮೇಲೆ ಪ್ರೀತಿ ಅಕ್ಕರೆಯೆಂಬ ಗೋಡೆ ಕಟ್ಟಿದ
ಗೌರವ ಪ್ರೀತಿಯ ಬಣ್ಣ ಹಚ್ಚಿದ ಹಿರಿಯರ ಹರಕೆಯ ಚಾವಣಿ ಹೊದೆದ
ಭಾವನೆಗಳು ಮಡುಗಟ್ಟಿದ ಅಮೂರ್ತ ರೂಪ ಸೂಕ್ಷ್ಮ ರೂಪ|

Rating
Average: 3 (2 votes)

Comments