window ದಿಂದ ಕಂಡ ಹಿಂಡು ಹಿಂಡಿನ ದೃಶ್ಯಗಳು
ಕವನ
ನೀರು ಬತ್ತಿದ ನದಿಗಳು
ಬಿದ್ದಿಲ್ಲ ವರುಣನ ಕಂಗಳು
ತುಂಬಿ ಹರಿಯುತಿಹ ತೊರೆಗಳು
ಹಲವೆಡೆ ಕಂಡವಿಂಡು ಕುರಿಗಳು
ನೆಲದಲಾಸೆ ಬಿತ್ತುತಿಹ ರೈತರು|1|
ನಮ್ಮಲ್ಲಿ ತೆಂಗಂತೆ ಇಲ್ಗುಂಪು ತಾಳೆ
ಕಟ್ಟಿದ ಮಡಕೆ ಕೊಡುವುದು ಕಳ್ಳು ನಾಳೆ
ಎಣ್ಣೆ ತೆಗೆವ ಬದಲೀ ಎಣ್ಣೆ ಕುಡಿವ ಜನ
ಇವರ ಬಯಕೆಯೂ ಒಳ್ಳೆ ಬಾಳೆ|2|
ರೈಲೇರಲು ಬಂದ ಮ್ಯಾಂಗನೀಸ್ore
ಕೃಷಿಯೊಂದಿಗೆ ಕಾರ್ಖಾನೆಯು ಜೋರು
ಹಲವೆಡೆ ಇಣುಕೋ ಮಂದಿರ ಮಸೀದಿ
ಗಳಲ್ಲದಿಹುದು ಹಸಿರು, ಜನರು|3|
ಹಾಳು ಬಿದ್ದ ಹಲ ಮನೆ, ದಾರಿ , ಸೇತ್ವೆ
ಹಲವಾರು ಗಣಿಗಳೆತ್ತರದ ಗುಡ್ಡೆ
ಹಲವಸಿರು ಸೊಬಗು,ಬೆಟ್ಟಗುಡ್ಡ
ನೋಡಿ ತಣಿಯಿತೆನ್ನ ಕಣ್ಣ ಗುಡ್ಡೆ