ಸಖಿ ನೆನ್ನೆ ಅವಳು ಬಂದಿದ್ದಳು

ಸಖಿ ನೆನ್ನೆ ಅವಳು ಬಂದಿದ್ದಳು

ಕವನ

ಸಖಿ ನೆನ್ನೆ ಅವಳು ಬಂದಿದ್ದಳು

ನೀನಿರುವಾಗಲೂ ಅವಳು ಬಂದಿದ್ದರೂ

ನೆನ್ನೆ ಬಹಳ ಸುಂದರವಾಗಿದ್ದಳು... 

 

ನೀನಿರುವಾಗ ಆಗಷ್ಟೇ ಈಗಷ್ಟೇ

ಎಂದು ಬಂದು ಹೋಗುತ್ತಿದ್ದವಳು..

ನೆನ್ನೆ ಬಹಳ ಹೊತ್ತಾದರೂ ಹೊರಡಲೇ ಇಲ್ಲ...

 

ಅವಳು ಬರುವಳೆಂದರೆ ನನಗೆ

ಅದೇನೋ ಸಂತಸ ಸಂಭ್ರಮ ಉಲ್ಲಾಸ

ಅವಳ ನೋಡಿದರೆ ಮರೆಯುವೆ ನಾ ಬೇರೆಲ್ಲವನ್ನ..

 

ನೆನ್ನೆ ಅವಳೊಡನೆ ಕಳೆದ ಸಂಜೆ

ನೀನಿರದ ವೇದನೆಯನ್ನು ಕೆಲ ಕಾಲ ಮರೆಸಿತು

ಗೊತ್ತೇ ನಿನಗೆ ಅವಳ್ಯಾರೆಂದು??

 

ಅವಳೇ ಅವಳೇ ಈ ಇಳೆಯ ತಣಿಸಲು

ಬಾನಿಂದ ಬುವಿಗೆ ಬಂದ "ಮಳೆ"

ನನ್ನ ಮನಕೆ ತಂಪನ್ನಿತ್ತ  ಮುತ್ತಿನ "ಮಳೆ"  

Comments