'ನೀ ಮರೆಯಾದರೂ ಮರೆಯಲಾಗದು ನಿನ್ನ'
ಕವನ
ನೀ ಮರೆಯಾದರೂ ಮರೆಯಲಾಗದು ನಿನ್ನ.ಮರೆಯಲೇಬೇಕೆಂದರೇ ಹೋಗಬೇಕಷ್ಟೇ ಪ್ರಾಣ.
ಆ ದೂರಬೆಟ್ಟವ ಮುಟ್ಟಿ ಬರೋ ತಂಗಾಳಿಗೆ ನಿನ್ನದೇ ಕಂಪಿದೆ.
ಆ ಮರದಿ ಬಿರಿದ ಸಂಪಿಗೆಯು ನಿನ್ನದೇ ನಕಲೆನಿಸಿದೆ.
ಆ ಮೋಡ,ಈ ಮಂಜು
ಮುಂಜಾನೆಯ ಚಳಿ ಬಂದು ನಿನ್ನ ನೆನಪಾಗಿಸಿದೆ. ಮಳೆನಿಂತು ಹೊಗೆಯಾಡುವ ಮಣ್ಣಿಗೆ ನಿನ್ನದೇ ಘಮಲಿದೆ.
ನೀ ಮರೆಯಾದರೂ ಮರೆಯಲಾಗದು ನಿನ್ನ,ಮರೆಯ ಬೇಕೆಂದರೇ ಹೋಗಬೇಕಷ್ಟೇ ಪ್ರಾಣ