ಸಾಕ್ಷಿ ಬೇಕಿಲ್ಲ
ಕವನ
ಮಾತೇಕೆ ಮೌನಕ್ಕೆ?
ಮೌನವೇ ಮಾತಾದಾಗ,
ಮಾತು, ಮೌನ
ಮೌನ, ಮಾತು.
ಹುಟ್ಟಿನೊಳಗೆ ಸಾವಡಗಿರುವಾಗ,
ಸಾವಿಗೆ ಹುಟ್ಟು
ಹುಟ್ಟಿಗೆ ಸಾವು,
ನಿಲುಕದ ಅ೦ತರ, ನಿರ೦ತರ.
ನಾಳೆ ನಿನ್ನೆಗೆ ಹೊಸತು
ನಿನ್ನೆ ಮೊನ್ನೆಗೆ ಹೊಸತು,
ನಿನ್ನೆಯಿರದೆ ನಾಳೆ ಬರುವ೦ತಿಲ್ಲ
ಹೊಸತು ಹಳೆಯದಾದೆ೦ತೆಲ್ಲ, ಹೊಸದೆ೦ಬುದಿಲ್ಲ.
ನೀರು ನೀರನೆ ನು೦ಗಿ
ಮರವು ಮರವನೆ ಸುಡಲು
ಹಸಿವು ಹಸಿವನು ದಹಿಸುವ ಕಾಲ
ಬರವ ಬರುವಿಗೆ ಮತ್ತೆ ಸಾಕ್ಷಿ ಬೇಕಿಲ್ಲ, ಸಾಕ್ಷಿ ಬೇಕಿಲ್ಲ.
Comments
ಉ: ಸಾಕ್ಷಿ ಬೇಕಿಲ್ಲ
In reply to ಉ: ಸಾಕ್ಷಿ ಬೇಕಿಲ್ಲ by nagamani.nayak
ಉ: ಸಾಕ್ಷಿ ಬೇಕಿಲ್ಲ