ನಾಮಸ್ಮರಣೆಯ ಮಹತ್ವ
ನಾಮಸ್ಮರಣೆಯನ್ನು ಭಕ್ತಿ, ಶ್ರದ್ಧೆಯಿಂದ, ತದೇಕಚಿತ್ತದಿ೦ದ ಮಾಡಿದರೆ ನಮಗೆ ಫಲ ಸಿಕ್ಕೇ ಸಿಗುವುದು. ಇದರಲ್ಲಿ ಸ೦ಶಯವಿಲ್ಲ. ಉದಾಹರಣೆಗೆ ಹೇಳುವುದಾದರೆಸ೦ತ ತುಕಾರಾಮರು ,ಭಕ್ತ ಕು೦ಬಾರ, ಮೀರ ಬಾಯೀ, ಅಜಾಮಿಳಾ, ಭಕ್ತ ಧ್ರುವ, ಗಜೇ೦ದ್ರ ,ಪ್ರಹ್ಲಾದಾ, ಹೀಗೆ ಇನ್ನೂ ಅನೇಕರು ಇದ್ದಾರೆ. ಅವರ೦ತೆ ನಾವು ಕೂಡಾ, ಕೇವಲ ಹರಿ ನಾಮಾಸ್ಮರಣೆಯಿ೦ದ ಸುಲಭವಾಗಿ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕಾಗಿದೆ.
"ನಾಮಸ್ಮರಣೋ ಧನ್ಯೋಪಾಯಂ ನಹಿಪಶ್ಯಾಮಂ ಭವತರಣೇ, ರಾಮ ಹರೇ ಕೃಷ್ಣಾ ಹರೇ" ಎಂದು ಮಹಾತ್ಮರು ನಮಗೆ ತಿಳಿಸಿದ್ದಾರೆ. ಅಂದರೆ ಈ ಕಲಿಯುಗದಲ್ಲಿ ಕೇವಲ ಭಗವಂತನ ನಾಮಸ್ಮರಣೆ ಮಾಡುವುದರಿಂದ ಮಾತ್ರವೇ ನಾವು ಸುಲಭವಾಗಿ ಈ ಭವಸಾಗರದಿಂದ ಪಾರಾಗಬಹುದೆಂದು ಹೇಳಿದ್ದಾರೆ.ಜಪ,ತಪ,ಹೋಮ ವ್ರತ,ನೇಮಗಳನ್ನು ಮಾಡುವುದು ಕಶ್ಟ್ ಆಗಿರುವುದರಿಂದ,ಭಗವಂತನ ನಾಮವೊಂದರಿಂದಲೆ ನಮ್ಮ ಜೀವನವನ್ನು ಉಧ್ದಾರ ಮಾಡಿಕೊಳ್ಳಬಹುದೆಂದು ಸದ್ಗುರುಗಳು ಸಾರಿ ಸಾರಿ ಹೇಳಿದ್ದಾರೆ. ಆದ್ದರಿಂದ ನಾವೆಲ್ಲರೂ ಶ್ರಧ್ದಾ, ಭಕ್ತಿಯಿಂದ, ಮನ:ಪೂರ್ವಕವಾಗಿ ನಮಸ್ಮರಣೆ ಮಾಡಬೇಕಾಗಿದೆ..
ನಮಗೆ ಸದ್ಗುರುಗಳು ಉಪದೇಶಿಸಿದಂತೆ, ನಿತ್ಯವೂ ಆ ಪರಮಾತ್ಮನ ದಿವ್ಯ ನಾಮವನ್ನು ಸ್ಮರಿಸುತ್ತ, ಜೀವನವನ್ನು ಸಾರ್ಥಕಗೊಳಿಸೋಣ.
"ಓಂ ತತ್ಸ್ ತ್"
ಅಂಬುಜ. ಜೋಶಿ.
೮.೭.೨೦೧೧.