ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
ಸಂಪದದಲ್ಲಿ ನಾನು ಬರೆಯತೊಡಗಿದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ. ನನ್ನ ಬ್ಲಾಗ್ ಬರವಣಿಗೆಯಲ್ಲಿ ಸಂಪದಿಗರು ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಹೇಳಲು ಸಂತೋಷವಾಗುತ್ತೆ. ಸುಭಾಷಿತಗಳನ್ನು ಅನುವಾದ ಮಾಡುವ ಒಂದು ಹವ್ಯಾಸವನ್ನೇ ಇದು ನನ್ನಲ್ಲಿ ಹುಟ್ಟಿಸಿತು ಎಂದರೆ ತಪ್ಪಿಲ್ಲ! ಹೀಗೆ ಹಿಂದೆ ನಾನು ಮಾಡಿರುವ ಸುಭಾಷಿತಗಳಲ್ಲಿ ಆಯ್ದ ಕೆಲವು ಸುಭಾಷಿತ ಅನುವಾದಗಳು ಒಂದು ಪುಸ್ತಕವಾಗಿ ಸದ್ಯದಲೇ ಹೊರಬರಲಿದೆ ಎಂಬ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ.
ಪುಸ್ತಕದ ಬಿಡುಗಡೆ ಜುಲೈ ೧೬ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜೊತೆಯಲ್ಲೇ ನನ್ನ ಶ್ರೀಮತಿ ಪೂರ್ಣಿಮಾಳ ಕಥಾಸಂಕಲನವೊಂದು ಕೂಡ ಬಿಡುಗಡೆ ಆಗುತ್ತಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ.
ಈ ಸಂತಸವನ್ನು ಇನ್ನೂ ಹೆಚ್ಚಿಸಲು ನೀವು ತಪ್ಪದೇ ಬರಬೇಕು, ನಮ್ಮೊಂದಿಗೆ ಇರಬೇಕು. ಸಂಪದಿಗರನ್ನೆಲ್ಲ ನೋಡಲು, ಮಾತಾಡಲು ನನಗೆ ಒಂದು ಒಳ್ಳೇ ಅವಕಾಶ ಇದು. ಬರುತ್ತೀರಲ್ಲ?
ಹಲವು ಬ್ಲಾಗ್ ಗೆಳೆಯರಿಗೆ ಮಿಂಚಂಚೆ ಕಳಿಸಿರುವೆನಾದರೂ, ಕೆಲವರ ಮಿಂಚಂಚೆ ವಿಳಾಸ ಇರದೆಯೋ, ಇಲ್ಲವೇ ಕಣ್ತಪ್ಪಿನಿಂದಲೋ ನಿಮಗೆ ತಲುಪಿಲ್ಲದಿದ್ದರೆ ದಯವಿಟ್ಟು ಇದನ್ನೇ ನನ್ನ ಕರೆಯೋಲೆಯೆಂದು ತಿಳಿಯಬೇಕೆಂದು ಕೋರಿಕೆ.
ಕಾರ್ಯಕ್ರಮದಂದು ನಿಮ್ಮನ್ನು ಭೇಟಿಯಾಗಲು ನಾನು ಕಾದಿರುತ್ತೇನೆ. ದಯವಿಟ್ಟು ಬನ್ನಿ.
-ಹಂಸಾನಂದಿ
Rating
Comments
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
In reply to ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ by abdul
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
In reply to ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ by shivaram_shastri
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
In reply to ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ by ananthesha nempu
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ
In reply to ಉ: ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ by shreekant.mishrikoti