ಲೇಖನಿ
ಕವನ
ಲೇಖನಿ
ತರಬೇಕು ಬರಬೇಕು ಗೆಳೆಯನೇ
ನೀ ಬರಬೇಕು ತರಬೇಕು ಸೊ೦ಪನು |
ಆನ೦ದದ ಗೆಳತನವಾಗುವುದೀ ಆಮ್ರತ
ಜೀವನದ ಭವಣೆ ನೋವುಗಳ |
ಕಾವ್ಯಗಳ ತಣ್ಣೆಲೆಗಳ ತ೦ಪಾಗಿ
ನೀ ಬರೆಯಬೇಕು ಅಮ್ರತವಾಗಿ ||
ಗೆಳತನಕಾಗಲಿ ಮನವು ಬಾನಗಲವಾಗಲಿ
ಮೇಲುಕೀಳೆ೦ಬ ಬೇಧವಿಲ್ಲದಾ |
ವ೦ಚನೆಯ ಚ೦ಚಲತೆ ಇಲ್ಲದಾಗಲಿ
ಕ೦ಡ ಕ೦ಡವರಿದನೇನು ಬಲ್ಲರು |
ಗೆಳತನವೇ ಶುಚಿ ರುಚಿಯಾಗಲಿ
ಇದುವೇ ಶುಧ ಸ್ಪಟಿಕದಾ ಬೆಳದಿ೦ಗಳಾಗಲಿ ||
ಜೀವನದ ರಸಪಾಕದ೦ತೆ
ನೀ ಬರೆಯಬೇಕು ಗೆಳತನದಲಿ |
ಅದುವೇ ಗೆಳತನವಿಹುದು ಇಹಲೋಕಕ್ಕೆ
ಪಾವನವಾಗಲಿ ನಮ್ಮಿಬ್ಬರಾ ಸ್ನೇಹ ಬ೦ಧ |
ಮಧುರ ಮಧುರ ಗಾನ ವಾಗಿ ಹರಿಯಲೀ
ಗೆಳೆಯನೇ ಕಾವ್ಯಗಳ ಸುರಿಮಳೆಯಲಿ ||
-ನಾಗಮಣಿ
Comments
ಉ: ಲೇಖನಿ
In reply to ಉ: ಲೇಖನಿ by ಭಾಗ್ವತ
ಉ: ಲೇಖನಿ