ನನ್ನ ಹೆಸರಿನ - ಪುರಾಣ
ನನಗೆ ಅಪ್ಪ ಅತ್ಯಂತ ಪ್ರೀತಿಯಿಂದ ಇಟ್ಟ ಹೆಸರು ಗಾರ್ಗಿ. ಸಾಹಿತ್ಯದ ವಿದ್ಯಾರ್ಥಿಯಾದ ಅವರು ಓದಿನ ದಿನಗಳಲ್ಲೇ, ತನ್ನ ಮಗುವೊಂದಕ್ಕೆ ಇಡಬೇಕೆಂದು ನಿರ್ಧರಿಸಿ ಇಟ್ಟ ಹೆಸರಿದು.
ಈ ಹೆಸರೇ ನನ್ನ ಇತ್ತೀಚಿನವರೆಗೂ ಕಾಡುತ್ತಿರುವುದು. ನಾನು ಚಿಕ್ಕವಳಿದ್ದಾಗ, ಮನೆಗೆ ಬರುವ ಹಿರಿಯರಿಗೆಲ್ಲ ಮನೆಯ ಮಗುವಿನ ಹೆಸರು ಕೇಳುವ ವಾಡಿಕೆ. ( ಈಗಲೂ ಇದೆ ).ನನಗದು ಕಂಟಕ. ಗಾರ್ಗಿ ಎಂದು ಸರಿಯಾಗಿ ಉಚ್ಚರಿಸಲು ಬರುತ್ತಿರಲಿಲ್ಲ. ನಾನು ಕಷ್ಟ ಪಟ್ಟು ಸರಿಯಾಗಿ ಉಚ್ಚರಿಸಿದರೂ ಅಪರೂಪದ ಹೆಸರದ್ದಾರಿಂದ ಪುನಃ ಕೇಳುತ್ತಿದ್ದರು. ಈ ವಯಸ್ಸಾದ ಅಜ್ಜಂದೀರು ಬಂದರಂತೂ ಮುಗಿಯಿತು ನನ್ನ ಕಥೆ . ಅವರಿಗೆ ಕಿವಿ ಕೇಳದು, ನಂಗೆ ಪದೇ ಪದೇ ಹೇಳಲು ಭಯ. ಮನೆಯಲ್ಲಿ ಅಪ್ಪ ಅಥವ ಅಮ್ಮನ ಸಹಾಯ ನನ್ನಜ್ಜಿ ಇಂದಿಗೂ ಅಪ್ಪನ ಬೈಯ್ಯುವುದನ್ನು ಬಿಟ್ಟಿಲ್ಲ, ' ಎಂತೆಂತದೋ ಹೆಸರಿಟ್ಟಿದ್ದಾನೆ ಲಕ್ಷ್ಮಿ , ಗೌರಿ ಅಂತ ಲಕ್ಷಣವಾಗಿ ಹೆಸರಿಡದೆ ' ಎಂದು.
ಇನ್ನು ಇದರ ಕಾಟ ಸ್ಕೂಲು - ಕಾಲೇಜ್ ಗಳಲ್ಲಂತು ಹೇಳತೀರದು. ಎಲ್.ಕೆ. ಜಿ ಮತ್ತು ಯೂ.ಕೆ .ಜಿ ಯಲ್ಲಿ ಮತ್ತದೇ ತೊಂದರೆ ಉಚ್ಚರಣೆಯದ್ದು ಆದರೆ ಸ್ವಲ್ಪ ಸುಧಾರಿಸಿದ್ದೆ ಇನ್ನು ಸ್ವಲ್ಪ ದೊಡ್ಡವಳಾದ ಮೇಲೆ ಹೆಸರಿನ ಅರ್ಥವೇನು...? ಯಾಕೆ ಇಟ್ಟದ್ದು ..? ಯಾರು ಇಟ್ಟದ್ದು ..? ನಿಮ್ಮ ಮತ ಯಾವುದು..? ಇಂತ ಪ್ರೆಶ್ನೆಗಳು .
ನನ್ನ ಹೆಸರಿನ ಬಗ್ಗೆ ಖುಷಿ ಎನಿಸಿದ್ದು , ನಾನು ಹೈಸ್ಕೂಲ್ ನಲ್ಲಿ. 'ಹೆಚ್ ' ತನಕ ವಿಭಾಗಗಳು ಇದ್ದ ಆ ಶಾಲೆಯಲ್ಲಿ , ೨-೩ ಜನ ಇದ್ದರೆ ಒಂದೇ ಹೆಸರಿನವರು ಅಶ್ವಿನಿ 'ಎ ', ಅಶ್ವಿನಿ 'ಬಿ ' ಎಂದು ಹೆಸರಿನ ಜೊತೆ ವಿಭಾಗ ವನ್ನು ಸೇರಿಸಿ ಕರೆಯಲಾಗುತ್ತಿತ್ತು. ನನ್ನ ಹೆಸರಿನ ಮತ್ತೊಬ್ಬರಾರೂ ಇಲ್ಲದ್ದರಿಂದ ಅದು ಗಾರ್ಗಿ ಎಂದಷ್ಟೇ ಉಳಿದುಕೊಂಡಿತು.
ಇನ್ನು ಪಿ.ಯೂ. ಸಿ ಮುಗಿಸಿ ಕೌನ್ಸಿಲಿಂಗ್ ಬಂದಾಗಿನ ಸಮಯ. ನಾನು ಅಪ್ಪ ಅದೇ ಮೊದಲ ಬಾರಿಗೆ ಬಂದಿದ್ದು. ನನ್ನ ಸರಿದಿಗಾಗಿ ಕಾಯುತ್ತ ಅಪ್ಪನೊಂದಿಗೆ ಕುಳಿತಿದ್ದೆ. ಕರೆಯುವಾತ ಜಾರ್ಜ್, ಜಾರ್ಜ್ ಎಂದು ಅರಚುತ್ತಿದ್ದ , ನನ್ನ ಹೆಸರನ್ನು ಹಾಗೆ ಕರೆಯಬುದೆಂಬ ಊಹೆಯೂ ಇಲ್ಲದ ನಾನು ಮಂಡ್ಯ ಪಿ .ಇ .ಸ್ ನಲ್ಲಿ ಯಾವ ಸೀಟ್ ಇದೆ ( ಇಲ್ಲದಿದ್ದರೆ ಅಪ್ಪ ಅಮ್ಮನನ್ನು ಬಿಟ್ಟು ಬರಬೇಕೆಂಬ ಚಿಂತೆ) ಎಂಬುದರಲ್ಲಿ ಮುಳುಗಿದ್ದೆ. ರಾನ್ಕಿಂಗ್ ನೋಡಿದ ಅಪ್ಪ ಇದು ನಿನ್ನದಲ್ಲವೆ...? ಎಂದಾಗ ತಡಬಡಾಯಿಸಿ ಎದ್ದು ಓಡಿದ್ದೆ.
ನಂತರ ಇಂಜಿನಿಯರಿಂಗ್ ಕಾಲೇಜ್, ಉತ್ತರ ಭಾರತೀಯರಿಗಿದು ಪರಿಚಿತ ಹೆಸರಂತೆ ಹಾಗಾಗಿ ಏನೂ ಕೇಳಲಿಲ್ಲ. ಚಿಂಕಿಗಳ ಚಿತ್ರ - ವಿಚಿತ್ರ ಹೆಸರುಗಳನ್ನು ಕೇಳಿದ್ದವರು ಅಷ್ಟಾಗಿ ನನ್ನ ಹೆಸರಿನ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ' ವೆಲ್ಕಮ್ ಪಾರ್ಟಿ' ದಿನ ನಮ್ಮ ಜಾತಕವನ್ನೆಲ್ಲ ಜಾಲಾಡಿದರು. ಒಬ್ಬಳಂತೂ, ಗಾರ್ಗಿ ಯಜ್ಞಾವಲ್ಕನ ಹೆಂಡತಿ ಎಂದು ವಾದ ಮಾಡಿದಳು, ಆಕೆ ಸೀನಿಯರ್ ಆದ್ದರಿಂದ ಜಾಸ್ತಿ ಮಾತನಾಡದೆ ಕೆಳಗಿಳಿಯುವಂತೆ ನನಗೆ ಸೂಚಿಸಲಾಯಿತು. ಕೇಳದ ನಾನು ಮೈತ್ರೆಯೀ ಅವನ ಹೆಂಡತಿ, ಗಾರ್ಗಿ ಅವನೊಂದಿಗೆ ಚರ್ಚೆ ಮಾಡಿದವಳು, ವೈಚಾಕ್ನುವಿನ ಮಗಳು, ಎಂದೋ ಅಪ್ಪ ಹೇಳಿಕೊಟ್ಟಿದ್ದನ್ನು ಚಾಚುತಪ್ಪದೇ ಹೇಳಿ, ನಮ್ಮ ವಿಭಾಗದಲ್ಲಿ ಪ್ರಸಿದ್ದಳಾಗಿದ್ದೆ ( ನೋಟೆಡ್ ಆಗಿದ್ದೆ , ಸೀನಿಯರ್ ಗೆ ಎದುರು ಮಾತನಾಡಿದೆ ಎಂದು).
ಇದು ಅಪ್ಪ ಆಸೆಪಟ್ಟು ಇಟ್ಟ ಹೆಸರಾದ್ದರಿಂದ ಅವರಿಗೆ ಇದನ್ನು ಕತ್ತರಿಸಿದರೆ ಅಸಾಧ್ಯ ಕೋಪ ಬರುತ್ತದೆ. ನನ್ನ ಹೆಸರಿರುವುದೇ ಎರಡುವರೆ ಅಕ್ಷರ ಅದನ್ನೂ ತುಂಡರಿಸಿ ರಾಗವಾಗಿ ' ಗಾರೂ ' ಎಂದು ಕರೆಯುತ್ತಾರೆ. ಗಾರ್ಗಿ , ಮೈತ್ರೇಯಿ , ಘೋಷ , ಲೋಪಮುದ್ರ ಎನ್ನುವ ನಾಲ್ಕು ಹೆಸರುಗಳಲ್ಲಿ ಗಾರ್ಗಿ ಎನ್ನುವ ಹೆಸರಿಗೆ ಧೃಡತೆ, ಗಟ್ಟಿತನ ಜಾಸ್ತಿ ( ಅಪ್ಪನ ಪ್ರಕಾರ ) ಎಂದು ಇಟ್ಟಿದ್ದಾರೆ. ಅದನ್ನೇ ಅವರ ಮುಂದೆ ಗಾರೂ ಎಂದರೆ ಅಪ್ಪನ ಕಣ್ಣು ಕೆಂಪಾಗುತ್ತದೆ.
ನನ್ನ ಹೆಸರಿನ ತಾಪತ್ರಯ ಇಂದಿಗೂ ನನ್ನನ್ನು ಬಿಟ್ಟಿಲ್ಲ , ಕರ್ನಾಟಕ ಸರ್ಕಾರ ಕೊಟ್ಟಿರುವ ' ಪಡಿತರ ಚೀಟಿ' ಯಲ್ಲಿ ಗಾಯಿತ್ರಿ ಎಂದಿದೆ. ಇನ್ನು ಕೇಂದ್ರ ಸರ್ಕಾರ ಕೊಟ್ಟಿರುವ ಚುನಾವಣೆ ಗುರುತಿನ ಚೀಟಿಯಲ್ಲಿ ' ರಾಗಿಣಿ ' ಎಂದಿದೆ. ಅದನ್ನು ಬದಲಾಯಿಸಲು ಅಪ್ಪ ಸಂಬಂಧಪಟ್ಟ ಇಲಾಖೆಗಳಿಗೆ ಹೋಗುತ್ತಲೇ ಇದ್ದಾರೆ. ಇಷ್ಟೆಲ್ಲಾ ನೆನಪದ್ದಾದದ್ದು ಅಪ್ಪ ಹತ್ತನೇ ತರಗತಿ ಅಂಕಪಟ್ಟಿ ಎಲ್ಲಿದೆ ಅಂತ ಕೇಳಲು ಕರೆ ಮಾಡಿದ್ದಕ್ಕೆ. ( ಹೆಸರು ಸರಿಪಡಿಸಲು ಅದು ಪುರಾವೆ ). ಅಂಕಪಟ್ಟಿಗಳು ಆಫೀಸ್ ತಿಜೋರಿಯಲ್ಲಿ ಭದ್ರವಾಗಿವೆ ಈಗ ಪಡೆಯಲಾಗುವುದಿಲ್ಲ.
Rating
Comments
ಉ: ನನ್ನ ಹೆಸರಿನ - ಪುರಾಣ
In reply to ಉ: ನನ್ನ ಹೆಸರಿನ - ಪುರಾಣ by thesalimath
ಉ: ನನ್ನ ಹೆಸರಿನ - ಪುರಾಣ
In reply to ಉ: ನನ್ನ ಹೆಸರಿನ - ಪುರಾಣ by gargi bhat
ಉ: ನನ್ನ ಹೆಸರಿನ - ಪುರಾಣ
ಉ: ನನ್ನ ಹೆಸರಿನ - ಪುರಾಣ
In reply to ಉ: ನನ್ನ ಹೆಸರಿನ - ಪುರಾಣ by Chikku123
ಉ: ನನ್ನ ಹೆಸರಿನ - ಪುರಾಣ
ಉ: ನನ್ನ ಹೆಸರಿನ - ಪುರಾಣ
In reply to ಉ: ನನ್ನ ಹೆಸರಿನ - ಪುರಾಣ by partha1059
ಉ: ನನ್ನ ಹೆಸರಿನ - ಪುರಾಣ
In reply to ಉ: ನನ್ನ ಹೆಸರಿನ - ಪುರಾಣ by gargi bhat
ಉ: ನನ್ನ ಹೆಸರಿನ - ಪುರಾಣ
In reply to ಉ: ನನ್ನ ಹೆಸರಿನ - ಪುರಾಣ by Indushree
ಉ: ನನ್ನ ಹೆಸರಿನ - ಪುರಾಣ
ಉ: ನನ್ನ ಹೆಸರಿನ - ಪುರಾಣ
In reply to ಉ: ನನ್ನ ಹೆಸರಿನ - ಪುರಾಣ by vani shetty
ಉ: ನನ್ನ ಹೆಸರಿನ - ಪುರಾಣ
ಉ: ನನ್ನ ಹೆಸರಿನ - ಪುರಾಣ
In reply to ಉ: ನನ್ನ ಹೆಸರಿನ - ಪುರಾಣ by gopaljsr
ಉ: ನನ್ನ ಹೆಸರಿನ - ಪುರಾಣ
ಉ: ನನ್ನ ಹೆಸರಿನ - ಪುರಾಣ
In reply to ಉ: ನನ್ನ ಹೆಸರಿನ - ಪುರಾಣ by venkatb83
ಉ: ನನ್ನ ಹೆಸರಿನ - ಪುರಾಣ
ಉ: ನನ್ನ ಹೆಸರಿನ - ಪುರಾಣ
In reply to ಉ: ನನ್ನ ಹೆಸರಿನ - ಪುರಾಣ by prasannakulkarni
ಉ: ನನ್ನ ಹೆಸರಿನ - ಪುರಾಣ