ಈ ಮಣ್ಣು ನಮ್ಮದು..ಈ ಭೂಮಿ ನಮ್ಮದು..
ಕರ್ನಾಟಕ ರಾಜ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ವರ್ಷದ "highest production of coarse cereals" ಪ್ರಶಸ್ತಿ ಸಿಕ್ಕಿದೆ. ರೈತರಿಗೆ ಶುಭಾಶಯಗಳು ಮತ್ತು ಬಿ.ಜೆ.ಪಿ. ಸರ್ಕಾರಕ್ಕೆ ಶುಭಾಶಯಗಳು. ಸರ್ಕಾರಕ್ಕೂ ಯಾಕೆಂದರೆ ಈ ಕ್ರೆಡಿಟ್ BJP ಸರ್ಕಾರ ತೆಗೆದುಕೊಂಡಿದೆ. ಇರಲಿ ಬಿಡಿ- ಒಳ್ಳೆಯ ಮಳೆ ಬಂದರೂ ಕ್ರೆಡಿಟ್ ಸರ್ಕಾರವೇ ತೆಗೆದುಕೊಳ್ಳುವುದು..
ರೈತರಿಗೆ ಸೇರಿದ ಫಲವತ್ತಾದ ಭೂಮಿಯನ್ನು-ರಸ್ತೆ ಮಾಡಲು, ಕಾರ್ಖಾನೆಗಳಿಗೆ, ವಿಮಾನ ಇಳಿಯಲು ಹತ್ತಲು ವಶಪಡಿಸಿಕೊಳ್ಳದೇ ಇದ್ದರೆ ಇನ್ನಷ್ಟು ಬೆಳೆ ಬೆಳೆಯಬಹುದಿತ್ತು.
ಕರ್ನಾಟಕದಲ್ಲಿ ನದಿಗಳಿಗೆ ಕೊರತೆ ಇಲ್ಲ. http://waterresources.kar.nic.in/river_systems.htm
ಹಳ್ಳಿ ಹಳ್ಳಿಯಲ್ಲಿರುವ ಕೆರೆಗಳನ್ನೂ ಸೈಟ್ ಮಾಡದೇ, ಹೂಳೆತ್ತಿ, ಚೆನ್ನಾಗಿ ನೋಡಿಕೊಂಡರೆ, ಈ ಪ್ರಶಸ್ತಿ ವರ್ಷವರ್ಷವೂ ನಮಗೇ ದಕ್ಕುವುದು.
ಈ ಸರ್ಕಾರದ ಮುಖ್ಯಮಂತ್ರಿ ರೈತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರ ಆಳ್ವಿಕೆಯ ಸಮಯದಲ್ಲೇ ಬೀದರ್‌ನಿಂದ ಮೈಸೂರವರೆಗೆ ರೈತರು "ತಮ್ಮ ಭೂಮಿಗಾಗಿ" (ಇನ್ನೊಬ್ಬರದಲ್ಲ) ರಸ್ತೆಗಿಳಿದು ಹೋರಾಡುವುದು,ಆಮರಣಾಂತ ಉಪವಾಸ ಮಾಡಬೇಕಾಗಿ ಬಂದಿರುವುದು ಬೇಸರದ ಸಂಗತಿ. ಈ ಹೋರಾಟವನ್ನೇ ರೈತನ ಮಗ ಮುಖ್ಯಮಂತ್ರಿ "ಫ್ಯಾಶನ್" ಎನ್ನುವುದು ತೀರಾ ನಾಚಿಗೆಗೇಡಿನ ಸಂಗತಿ.
( http://en.wikipedia.org/wiki/POSCO ) ಗೆ ರೈತರ ಫಲವತ್ತಾದ ಭೂಮಿಯೇ ಯಾಕೆ ಬೇಕು? ಗದಗದ ಉಸ್ತುವಾರಿ ಮಂತ್ರಿ ಹಾಗೂ ಕರ್ನಾಟಕದ women and child welfare minister ಆಗಿರುವ ಸಿ.ಸಿ. ಪಾಟೀಲ್-ರೈತರಿಗೆ ಆ ಭೂಮಿಯ ಯೋಗ್ಯ ಬೆಲೆಯನ್ನು ತೋಂಟಾದಾರ್ಯ ಸ್ವಾಮೀಜಿಯ ಸಮ್ಮುಖದಲ್ಲೇ ಕೊಡಿಸುವ ಎಂದಿದ್ದಾರೆ. ರೈತರಿಗೆ ಯೋಗ್ಯಬೆಲೆಯನ್ನು ಕೊಟ್ಟು, ಅವರನ್ನು ಅಲ್ಲಿಂದ ಎಬ್ಬಿಸಿ, ಸ್ಟೀಲ್ ಧಣಿಗಳಿಗೆ ಆ ಭೂಮಿ ಒಪ್ಪಿಸಿದರೆ ಮುಗಿಯಿತಾ? ಇದು ಬೆಂಗಳೂರಿನ ಸೈಟ್ ವ್ಯಾಪಾರವಲ್ಲ. ಸುಮಾರು ವರ್ಷಗಳಿಂದ ಉಳುಮೆ ಬಿಟ್ಟು ಬೇರೇನೂ ಗೊತ್ತಿಲ್ಲದ ಆ ಹಳ್ಳಿ ರೈತರಿಗೆ ಅಷ್ಟೇ ಉತ್ತಮವಾದ ಭೂಮಿ, ಉಳಕೊಳ್ಳಲು ಮನೆ ಆ ಹಣದಲ್ಲಿ ಬೇರೆ ಕಡೆ ಸಿಗಬಹುದೇ? ದೇವನಹಳ್ಳಿಯಲ್ಲಿ ರೈತರನ್ನು ಎಬ್ಬಿಸಿ ವಿಮಾನ ನಿಲ್ದಾಣ ಮಾಡಿದರು. ರೈತರ ಸ್ಥಳ ಸ್ವಲ್ಪವೇ ತೆಗೆದುಕೊಂಡಿರಬಹುದು. ಸುತ್ತಮುತ್ತಲ ಸ್ಥಳಕ್ಕೆ ಬೆಲೆ ಬಂತು. ಸುತ್ತಮುತ್ತಲ ರೈತರು ಖಾಲಿಯಾಗಿ ಬಿಲ್ಡರ್‌ಗಳು ಲಗ್ಗೆಯಿಟ್ಟರು. ಅಲ್ಲಿನ ರೈತರು ಎಲ್ಲಿಗೆ ಹೋದರು,ಈಗ ಹೇಗಿದ್ದಾರೆ ಯಾರಿಗಾದರೂ ಗೊತ್ತಿದೆಯಾ? ದೇವನಹಳ್ಳಿ ವಿಮಾನನಿಲ್ದಾಣ ಲಾಭ ಎಂದಾದರೆ ತುಂಬಲಾರದ ನಷ್ಟ-ದೇವನ ಹಳ್ಳಿ ಮಣ್ಣಲ್ಲೇ ಬೆಳೆಯುವಂತಹ ವಿಶೇಷ ಹಣ್ಣು- "ದೇವನಹಳ್ಳಿ ಚಕ್ಕೋತಹಣ್ಣು" http://letstalkaboutthelaw.wordpress.com/2011/06/25/bangalore-international-airport-and-the-endemic-devenahalli-pomelo/ ಭೂಮಿ ಮತ್ತು ಹಣವೇ ಆಹಾರವಾಗಿರುವ ರಾಜಕಾರಣಿಗಳಿಗೆ ಹಣ್ಣು,ತರಕಾರಿ, ಬೆಳೆಗಳ ಬಗ್ಗೆ ಚಿಂತೆ ಇರದು ಬಿಡಿ..
ಇಷ್ಟಕ್ಕೂ POSCOದಿಂದ ಪರಿಸರಕ್ಕೆ ಏನೂ ಹಾನಿಯಾಗದು ಎಂದು ಯಾವ ಗ್ಯಾರಂಟಿ? ಅವರು ಕರ್ನಾಟಕದ ಒಳಿತಿಗಾಗಿ ಬಂದವರಲ್ಲ. ಕೋಟಿಗಟ್ಟಲೆ ಇನ್‌ವೆಸ್ಟ್ ಮಾಡಿದರೆ ಅದರ ಡಬಲ್ ಲಾಭ ಮಾಡುವುದೇ ಅವರ ಗುರಿ.
ಕಾರ್ಮಿಕರಿಗಾಗಲೀ ರೈತರಿಗಾಗಲೀ ದನಿ ಇಲ್ಲ. ಇದ್ದರೂ ಅದು ವಿಧಾನ ಸೌಧದವರೆಗೆ ತಲುಪುವುದಿಲ್ಲ. ರಾಜಕಾರಣಿಗಳ ಹಿಂದೆ ಮುಂದೆ ಸುತ್ತುವ ಪತ್ರಿಕೆಗಳಾಗಲೀ,ಟಿ.ವಿಯಾಗಲೀ ತಿರುಗಿಯೂ ನೋಡುವುದಿಲ್ಲ. ಅದೇ ರೈತರ ಬೆಂಬಲಕ್ಕೆ ದೇವೇಗೌಡರು, ಪೇಜಾವರಶ್ರೀಗಳು, ತೋಂಟದಾರ್ಯಶ್ರೀಗಳು ಬಂದಾಗ ಸರಕಾರ ಅದರಲ್ಲಿ ರಾಜಕೀಯ, ಜಾತಿಬಣ್ಣ ನೋಡುತ್ತದೆ. ಹೋರಾಟವನ್ನು ತನ್ನ ಕೈಯಲ್ಲಿರುವ ಪೋಲೀಸ್ ಬಲದಿಂದ ಗೆದ್ದುಬಿಡುವುದು.
ಕರ್ನಾಟಕ ಫಲ ಭರಿತ ಪುಣ್ಯಭೂಮಿ- http://www.mapsofindia.com/maps/karnataka/karnatakaagriculture.htm
ಕೈಗಾರಿಕೆಗಳೂ ಇರಲಿ..ಬರಲಿ.. ಆದರೆ ಇಲ್ಲಿನ ರೈತರನ್ನು ಜನರನ್ನು ಓಡಿಸೋ, ಪರಿಸರವನ್ನು ಹಾಳು ಮಾಡುವ ರಕ್ಕಸ ಕೈಗಾರಿಕೆಗಳಲ್ಲ..ಇಲ್ಲಿನ ನೆಲಜಲಕ್ಕೆ ಹೊಂದಿಕೊಳ್ಳುವಂತಹದ್ದು..
ಸದ್ಯಕ್ಕೆ "Global Agriculture Investors Meet" ನಡೆಯಲಿದೆಯಂತೆ. ಈ ಸರಕಾರದಲ್ಲಿ "Local"ಗಳು ಯಾರೂ ಇಲ್ಲವಾ!? ಮಾತೆತ್ತಿದರೆ ಮಾತೃಭೂಮಿ,ಸದಾವತ್ಸಲೆ ಎನ್ನುವ ಜನರೇ ಹೀಗಾದರೆ..
-ಗಣೇಶ.
(ಚಿತ್ರಕೃಪೆ- ಕರ್ನಾಟಕ ಸರಕಾರದ ಜಾಹೀರಾತು)
POSCO
Comments
ಉ: ಈ ಮಣ್ಣು ನಮ್ಮದು..ಈ ಭೂಮಿ ನಮ್ಮದು..