ಜುಲೈ 16ರ ಕಾರ್ಯಕ್ರಮ - 'ಹಂಸನಾದ' ಪುಸ್ತಕ ಬಿಡುಗಡೆ

ಜುಲೈ 16ರ ಕಾರ್ಯಕ್ರಮ - 'ಹಂಸನಾದ' ಪುಸ್ತಕ ಬಿಡುಗಡೆ

ಸಂಪದ ಪ್ರಾರಂಭಿಸಿದ ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆ ತನ್ನ ಮೊದಲ ಪುಸ್ತಕ 'ಹಂಸನಾದ' ಹೊರತರುತ್ತಿದೆ. ಈ ಪುಸ್ತಕ ಸಂಪದದವರೇ ಆದ ಹಂಸಾನಂದಿಯವರ ಕೃತಿ.

ಜುಲೈ ೧೬ರಂದು ಆಕೃತಿ ಬುಕ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಪುಸ್ತಕ ಬಿಡುಗಡೆಯಾಗಲಿದೆ.

 

ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಆದರದ ಸ್ವಾಗತ.

  

ಆ ದಿನ, ನಮ್ಮೊಂದಿಗೆ:
ಜನಾರ್ದನ ಸ್ವಾಮಿ (ಲೋಕಸಭಾ ಸದಸ್ಯರು, ಚಿತ್ರದುರ್ಗ)
ವಿಜಯಾ ಹರನ್ (ನಿರ್ದೇಶಕರು, ಮೈಸೂರು ಆಕಾಶವಾಣಿ)
ರಾಮಚಂದ್ರ ಶರ್ಮ ತ್ಯಾಗಲಿ (ಖ್ಯಾತ ವಿದ್ವಾಂಸರು)
ಜಯಲಕ್ಷ್ಮಿ ಪಾಟೀಲ್ (ರಂಗಭೂಮಿ ಹಾಗು ಕಿರುತೆರೆ ಕಲಾವಿದೆ, 'ಮುಕ್ತ ಮುಕ್ತ' ಖ್ಯಾತಿಯ ಮಂಗಳತ್ತೆ)

 

ಸಂಕ್ಷಿಪ್ತ ವಿವರ:

ದಿನಾಂಕ: ಶನಿವಾರ, ಜುಲೈ 16, 2011
ಸಮಯ: ಬೆಳಿಗ್ಗೆ 10.30ಕ್ಕೆ
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ ಪಿ ವಾಡಿಯ ರಸ್ತೆ, ಬಸವನಗುಡಿ, ಬೆಂಗಳೂರು.

ಕಾರ್ಯಕ್ರಮದ ನಿರೂಪಣೆ: ದೀಪ ರವಿಶಂಕರ್

 

ವಿ.ಸೂ: ಕಾರ್ಯಕ್ರಮದ ದಿನದಂದು ಹಂಸಾನಂದಿಯವರ ಪತ್ನಿ ಪೂರ್ಣಿಮಾರವರ ಕಥಾಸಂಕಲನದ ಬಿಡುಗಡೆ ಕೂಡ ಇದೆ.