ನನ್ ಕಗ್ಗ

ನನ್ ಕಗ್ಗ

ಕವನ

 ಹಿರಿತನವು ಕಿರಿತನವು ಭೇದವೆಣಿಸಲುಬೇಡ

ಎಲ್ಲ ತನುಗಳಿಗಿಂದು ಮನುತನವು ಒಳಿತು|
ನಗುನಗುತ ಲೋಕದೊಳ್ ಬೆರೆವ ತಾ ಹಿರಿಯನು
ಒಂಟಿ ಗೂಬೆಯೆ ಕಿರಿಯ ಮೂಢ ಗುರುವೇ|| 
 
ಹೊಸನೀರು ಬರಲಲ್ಲಿ ಹಳೆನೀರು ಹರಿವಂತೆ
ಹೊಸ ಚಿಗುರು ಹುಟ್ಟಲು ಹಳೆ ಗರಿಯು ಬೀಳ್ವಂತೆ.|
ಹೊಸಭಾವ ಹೊಸಬದುಕು ನಸುನಗುತ ಬರುತಿರಲು
ಹಳೆ ಮೌಢ್ಯ ತೊರೆಯೋ ನೀ ಮೂಢಗುರುವೇ..||