ಒಮ್ಮೊಮ್ಮೆ ಹೀಗೂ ಆಗುವುದು...........
ಆ ವ್ಯಕ್ತಿ ,
ಅವನಿಗೆ ಹೆಸರಿಲ್ಲ, ಅವನೊಬ್ಬ ನಮ್ ನಿಮ್ಮಂತೆ -ನಮ್ ನಿಮ್ಮೊಳಗೆ ಒಬ್ಬ ಅಂದ್ಕೊಳ್ಳಿ.
ಇದಕ್ಕಿಂತ ಮೊದಲು ಅದೆಸ್ಟೋ ಸಾರಿ ಅವನು ಮನಸ್ಸಿಗೆ ಶಾಂತಿ ಇಲ್ಲ, ನೆಮ್ಮದಿ ಇಲ್ಲ, ಅದು ಅಲ್ಲಿ ಸಿಗಬಹುದು ಇಲ್ಲಿ ಸಿಗಬಹುದು ಅಂತ, ಕುಡಿತ, ಜೂಜು, ಕಾಡು- ಅಲೆದು ಋಷಿಯಂತೆ ಧ್ಯಾನಿಸ ಹೋಗಿ ಕಾಡು ಮೃಗ-ಖಗಗಳಿಗಂಜಿ ಎದ್ದೆನೋ-ಬಿದ್ದೆನೋ ಅನ್ತೋಡಿ ನಾಡಿಗೆ ಬಂದಿದ್ದ!
ಯಾರ್ಯಾರ ಅಭಿಪ್ರಾಯ ಕೇಳಿದರೂ ಒಬ್ಬೊಬ್ಬರದು ಒಂದೊಂತರ ಚಿತ್ರ ವಿಚಿತ್ರ ವಿವರಣೆ , ಈ ಶಾಂತಿ- ನೆಮ್ಮದಿ ಬಗ್ಗೆ ಇರುತ್ತಿತ್ತು. ಈ ನಮ್ಮ ಕಥಾ ನಾಯಕನಿಗೋ ಗೊಂದಲವೋ ಗೊಂದಲ! ಒಬ್ಬ ಹೇಳ್ತಾನೆ ದಂ ಹೊಡಿ ಕಿಕ್ಕ್ ಸಿಗ್ತೆ ಅಂತ. ಟ್ರೈ ಮಾಡ ನವರನ್ದ್ರಗಳಿಂದ ಕೆಮ್ಮು ಕಿತ್ಕಂಡ್ ಬಂದು ಶ್ವಾಸಕೊಶವೇ ಬಂದ್ ಆಗೀ ಪ್ರಾಣವೇ ಹೋದಂತಾಯ್ತು!
ಇನ್ನೊಬ್ಬ ಹೇಳಿದ ಗುಂಡುಹಾಕು ನೆಮ್ಮದಿ ಸಿಗುತ್ತೆ .
ಇದನ್ನು ನಮ್ಮ ಕಥಾ ನಾಯಕ ಟ್ರೈ ಮಾಡಿದ ಒಂದು ಗುಟುಕಿಗೆ ಕಾರ್ಕೋಟಕ ವಿಷವೇ ಗಂಟಲಲ್ಲಿ ಹುಯ್ ಹಾಗೆ ಆಯ್ತು!
ಆಟ-ಊಟ-ಹೋರಾಟ-ಹಠ -ಚಟ ಅವಂಗೆ ನೆಮ್ಮದಿ ಕೊಡದೆ ಶಾಂತಿ ಸಿಗದೇ ಕೆಲ ದಿನಗಳ ಮಟ್ಟಿಗೆ ವಿಶ್ರಾಂತಿ ತೆಗೆದುಕೊಳ್ಳೋಣ ಅಂತ ಮನೇಲೆ ಇದ್ದು , ಅದೊಮ್ಮೆ ಹೊರಗಡೆ ಬಂದು ಸುತ್ತ-ಮುತ್ತಲಿನ ರಸ್ತೆ ಅದರ ಮಳೆ ಓಡಾಡುವ ಜನ, ಅವರ ಹಾವ -ಭಾವ, ಚಲನವಲನ,
ತಂ ಮನೆ ಹಿಂಬದಿ ಕೊಳೆಗೇರಿ ಶೆಡ್ಡಿನ ಜನರ ಬಯಲು ಹಂದಿ ಉರಿಯುವಿಕೆ , ಆ ಹಂದಿ ಉರಿಯುವಿಕೆಯನ್ನೇ ಜೊಲ್ಲು ಸುರಿಸುತ್ತ ನೋಡ್ತಿರುವ ಕೊಳಗೇರಿ ಚಿಳ್ಳೆ-ಪಿಳ್ಳೆಗಳು ಇರುವ ಕಸ್ಟದಲ್ಲೇ, ಇದ್ದುದನ್ನೇ ಹಂಚಿಕೊಂಡು ತಿಂದುಂಡು ಬದುಕುವ ಅವರ ರೀತಿ , ರಾತ್ರಿಂದ ಬೆಳಗ್ಗೆ ಗಂಟ ನಿಶೆ ಇಳಿವರ್ಗೆ ತನ್ ಗಂಡನಿಂದ ಹಿಗ್ಗ- ಮಗ್ಗ ಥಳಿಸಿಕೊಂಡ ಪತ್ನಿ ಬೆಳಗ್ಗೆ ಅದೇನೂ ಆಗಿಲ್ಲವೆಂಬಂತೆ ನಗು ನಗುತ ಗಂಡನಿಗೆ ತಿಂಡಿ ಕೊಡೋದ್ ನೋಡಿದ ಮೇಲೆ
ನಮ್ ಕಥಾ ನಾಯಕನಿಗೆ ಈ ಜೀವನವೇ ಒಂಥರಾ ಸೋಜಿಗ ಅನ್ಸ್ತು.ನಮ್ ಕಥಾ ನಾಯಕನ ಮನದ ಜಿಜ್ಞಾಸೆಗೆ ಒಂದು ಪರಿಹಾರವೂ ಸಿಕ್ತು ಮನವೂ ನಿರಾಳವಾಯ್ತು .ಇಲ್ಲದುದುದಕ್ಕೆ ಕೊರಗೋದು ಬಿಟ್ಟು ಇದ್ದುದರಲ್ಲಿ ತೃಪ್ತಿ ಪಡಬೇಕು ಅನ್ನೋ ಜ್ಞಾನೋದಯವಾಯ್ತು.
Comments
ಉ: ಒಮ್ಮೊಮ್ಮೆ ಹೀಗೂ ಆಗುವುದು...........
In reply to ಉ: ಒಮ್ಮೊಮ್ಮೆ ಹೀಗೂ ಆಗುವುದು........... by partha1059
ಉ: ಒಮ್ಮೊಮ್ಮೆ ಹೀಗೂ ಆಗುವುದು...........
ಉ: ಒಮ್ಮೊಮ್ಮೆ ಹೀಗೂ ಆಗುವುದು...........
In reply to ಉ: ಒಮ್ಮೊಮ್ಮೆ ಹೀಗೂ ಆಗುವುದು........... by bhalle
ಉ: ಒಮ್ಮೊಮ್ಮೆ ಹೀಗೂ ಆಗುವುದು...........