ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
ಸನ್ಮಾನ್ಯ ಡಾ ಎಚ್ ಎಸ್ವೀಯವರ ಅಭ್ಯಾಸ ೧೩- ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಮೈಸೂರಿನಲ್ಲಿ.
ಸನ್ಮಾನ್ಯ ನರಹಳ್ಳಿಯವರು ರಸಋಷಿಯ " ರಾಮಾಯಣ ದರ್ಶನಮ್" ಸ್ವತ ಅರೆದು ಕುಡಿದಂತೆ ನಿರರ್ಗಳವಾಗಿ ನಮಗೆಲ್ಲರಿಗೂ ಅದರ ನಿಜವಾದ ದರ್ಶನಮ್ ಮಾಡಿಸಿದ್ದರು. ಪರಂಪರೆಯನ್ನು ಆಳವಾಗಿ ಅಭ್ಯಸಿಸುವ ರೀತಿ ಗುರುಕುಲದ ಪರಿಕಲ್ಪನೆಯನ್ನು ತಂದ ಈ ನಮ್ಮೆಲ್ಲರ ಮೆಚ್ಚಿನ ಅಭ್ಯಾಸದ ಬಗ್ಗೆ ನರಹಳ್ಳಿಯವರು ಅಭ್ಯಾಸದ ಗುರುಗಳಾದ ನಮ್ಮೆಲ್ಲರ ಜನಪ್ರೀತಿಯ ಕವಿ ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರನ್ನೂ ಮತ್ತು ಈ ಸಾಹಿತ್ಯ ಪರಂಪರೆಯ ರಸಾಭ್ಯಾಸ ಮಾಡುತ್ತಿರುವ ಅಭ್ಯಾಸಿಗಳನ್ನೂ ಅಭಿನಂದಿಸಿದರು.
ವ್ವೈದಿಕ, ಭೌದ್ಧ, ಜೈನ, ಜಾನಪದ ಮುಂತಾದ ರಾಮಾಯಣದ ಏಕ ಮುಖೀ ಪರಂಪರೆಯನ್ನು ಬಿಟ್ಟು ಕುವೆಂಪುರವರು ಬಹು ಮುಖೀ ಪರಂಪರೆಯನ್ನುಳ್ಳ ಮಹಾ ಕಾವ್ಯವನ್ನು ಸೃಷ್ಟಿಸಿದ್ದ ಕಾರಣವನ್ನು ಹಂತ ಹಂತವಾಗಿ ವಿವರಿಸುತ್ತ, ರಾಮಾಯಣವನ್ನೂ ಜನಸಾಮಾನ್ಯರ ಬದುಕಿನ ಭಾಗವಾಗಿಯೇ ಈ ದರ್ಶನಮ್ ನಲ್ಲಿ ಚಿತ್ರಿಸಿ ಜನ ಸಾಮಾನ್ಯರ ಪ್ರಾಮುಖ್ಯತೆಯನ್ನು ಮೆರೆದರೆಂದರು. ರಾಮಾಯಣ ದರ್ಶನಮ್ ಮಾನವನ ವೈವಿಧ್ಯಮಯವಾದ ಸ್ವಭಾವಗಳನ್ನು ಅವುಗಳ ನಿಜ ಮೌಲ್ಯಗಳನ್ನು ಬಿಂಬಿಸುವ ಕಥೆಯಾದರೆ ಮಹಾಭಾರತ ಮೌಲ್ಯಗಳ ವೈರುಧ್ಯ ಬಿಂಬಿಸುವಂತಹದ್ದು ಎಂದರು.
ಕೊಂದ ಕತದಿಂದೇಂ
ಪೆರ್ಮನಾದನೇ ರಾಮನಾ ಮಾತನುಳಿ : ಪಗೆಯೇ
ತೆಗೆ ತೆಗೆ ಪೆರ್ಮೆ ಗೊಲ್ಮೆಯೇ ಚಿನ್ಹೆ ಮಹತ್ತಿಗೇಂ
ಬೆಲೆಯೇ ಪೇಳ್ ಕೊಲೆ? ದೈತ್ಯನಂ ಗೆಲಿದ ಕಾರಣಕಲ್ತು
ತನ್ನ ದಯಿತೆಯನೊಲಿದ ಕಾರಣಕೆ , ಗುರು ಕಣಾ
ರಾಮಚಂದ್ರಂ.
ದೇಶೀ - ಅರಮನೆ ಸಂಸ್ಕೃತಿಯ ನಿರಾಕರಣೆ ಮತ್ತು ಮಾರ್ಗ( ವನ ಸಂಸ್ಕೃತಿ) ಯ ಪೂರ್ಣ ದರ್ಶನ ಪ್ರೀತಿಯ ಎಲ್ಲಾ ಸ್ತರಗಳನ್ನೂ ಬಲ್ಲ ಅವರ ಯುದ್ಧ ವಿರೋಧೀ ನೆಲೆಯನ್ನು ಪ್ರತಿ ಹಂತದಲ್ಲೂ ಪ್ರತಿಪಾದಿಸುತ್ತದೆ ಎಂದರು.
ಸಾಮ್ರಾಜ್ಯ ಶಾಹೀ ಮನೋಭಾವದ ನಿರಾಕರಣೆಯೇ ಜೀವಾಳ ವಾಗಿದ್ದ ಈ ಮಹಾಕಾವ್ಯದಲ್ಲಿ ಆರ್ಯ ದೃಆವಿಡ ಧ್ವೇಷ, ಘರ್ಷಣೆ ಯಲ್ಲೂ ಈ ಮಹಾ ಕಾವ್ಯದಲ್ಲಿ ನರಹಳ್ಳಿಯವರಿಗೆ ಮೂರಕ್ಕೂ ಮೇಲಿನ ನೆಲೆಗಳು ಕಾಣುತ್ತವೆ
೧. ಪ್ರೀತಿಯ ಅನೇಕ ಸ್ತರಗಳ ಬಿಂಬ
೨. ಬಹುಮುಖೀ ಸಂಸ್ಕೃತಿಯ ನೆಲೆ ಉದಾ: ವಾಲಿ, ಮಂಥರೆ, ಅನಲೆ ಮತ್ತು ಕುಂಭ ಕರ್ಣ, ಮಾರೀಚ, ರಾವಣ
೩. ವಸಾಹತೋತ್ತರ ಚಿಂತನೆಯ ನೆಲೆ : ಸಾಮ್ರಾಜ್ಯ ವಿಸ್ತರಣಾ ವಿರೋಧೀ ನೆಲೆ
ಈ ದಿಸೆಯಲ್ಲಿ ಆದಿ ಪುರಾಣ ಮತ್ತು ಯಶೋಧರ ಚರಿತೆ ಭೋಗವನ್ನೂ ವಿಕೃಮಾರ್ಜುನವಿಜಯ ಅಧಿಕಾರವನ್ನೂ ಉಳ್ಳ ನೆಲೆಗಳ ಬಿಂಬವಾಗಿವೆ ಎಂದರು.
ಭೋಜನಾನಂತರ ಉಳಿದ ಅಭ್ಯಾಸದ ಕಾಲವನ್ನು ಈ ಸಾರಿ ಸಮಯಾಭಾವದಿಂದ ಗುರುಗಳು ಕಡಿಮೆ ಸಮಯ ತೆಗೆದುಕೊಂಡರು ರಾಮಾಯಣ ದರ್ಶನಮ್ ನಲ್ಲಿ ಮಾನ್ಯ ಕುವೆಂಪುರವರು ರಾಜ ರಾಣಿಯರನ್ನೂ ಜನಸಾಮಾನ್ಯರನ್ನಾಗಿ ಚಿತ್ರಿಸಿದುದನ್ನು ನಮ್ಮೆಲ್ಲರ ಕಣ್ಣೆದುರಿಗೆ ದೃಶ್ಯಾವಳಿಗಳಲ್ಲಿ ತಂದಿಟ್ಟರು,
ದಾರಿಯೆಡೆ ರಾಮನೊಟ್ಟಿದ ತರಗೆಲೆಯ ಮೇಲೆ
ಸೀತೆ ದೊಪ್ಪನೆ ಕುಳಿತ್ತುಸ್ಸೆನುತ್ತೊರಗಿದಳ್
ಮರಕೆ, ಮುಚ್ಚಿದುವಕ್ಷಿ ತಾಳಲಾರದ ಸೇದೆಯಿಂ
ಬೀರವಿರ್ವರುಮೆಚ್ಚೆಗೆಟ್ಟು ಮರವಟ್ಟರೆನೆ
ಕುಳ್ತರೆದೆತಣ್ತು! ನೀರಳ್ಕೆಯಂ ಸನ್ನೆಯಿಂ
ಸೂಚಿಸಿ ತರಳೆ ನರಳೆ, ಬೇಗದಿಂದೋಡಿದನ್
ಊರ್ಮಿಳಾ ಸ್ವಾಮಿ, ಪಳುವಂ ನುಗ್ಗಿ, ದರಿಯಿಳಿದು,
ಸರುವಿಂಗೆ, ತಳಿರ ತೊಂಗಲ ಬಿಜ್ಜಣಿಕೆಯಿಕ್ಕಿ
ಮೆಲ್ಗಾಳಿವೀಸಿ ದಾಶರಥಿ ಸವಿಮಾತಿನಿಂ
ತನ್ನ ತಳೋದರಿಯನೋವಿದನ್.
ಈ ಸುಂದರ ವಿವರಣೆಯುಳ್ಳ ಭಾಗವನ್ನು ವಿವರಿಸುತ್ತಾ ಗುರುಗಳು ಈ ಮಹಾ ಕಾವ್ಯವನ್ನು ಗಟ್ಟಿಯಾಗಿಯೇ ಓದಬೇಕು, ಆಗಲೇ ಇದರ ಸವಿಯು ಚಿತ್ರಣವಾಗಿ ನಮ್ಮ ಮನದಾಳಕ್ಕಿಳಿಯುವುದು ಎಂದರು.
ಪಸಿ ಸೌದೆಯಿಂ
ಪೊಗೆಯಲ್ಲದುರಿದೋರಲೊಲ್ಲದಿರೆ, ಧರಣಿಸುತೆ
ಮುಳಿದೊಲೆಯ ಮೋರೆಯಂ ತಿವಿದು ಕಟ್ಟಿಗೆಯಿಂದೆ,
ಕಣ್ಣೊರಸಿ ಮೂಗೊರಸಿ, ಮೊಗಮೆಲ್ಲ ಮಸಿಯಾಗೆ
ಮಿಂದುಟ್ಟ ಮಡಿಮಾಸೆ, ಸಿಗ್ಗೇರ್ದು ಸಿಡುಕುತಿರೆ,
ವಜ್ರರೋಮಾಶ್ರಮದಿನಧ್ಯಯನಂ ಮುಗಿಸಿ
ರಾಮನೈತಂದನಲ್ಲಿಗೆ. ಕರೆದನರ್ಧಾಂಗಿಯಂ,
ಕಾಣದಿರೆ, ಹೊಗೆಯ ಹೊಟ್ಟೆಯಳಿರ್ದು ಓಕೊಂಡೊಳಂ
ಕುರಿತು ಬಿನದಕೆ: ಪಸಿದೆನ್ ಆನುಣಲ್ ವೇಳ್ಕುಮೆನೆ;
ಮಡದಿ: ಪಸಿಸೌದೆಯಿಂದಡುಗೆಯೆಂತಪ್ಪುದೈ?
ಪೊಗೆಯನುಣಿಮೆನೆ; ರಾಮನಾಕೆಯಂ ಬಳಿಸಾರ್ದು,
ಮಸಿಯಿಡಿದು ನಲ್ಮೊಗಂ ಮುಸುಡಿಯವತಾರಮಂ
ತಾಳ್ದಿರ್ದುದಂ ಕಆಂಡು ನಗೆ ತಡೆಯಲಾರದೆಯೆ
ಹೊರಗೆ ಬಂದಳ್ಳೆ ಬಿರಿವಿರಿಯೆ ನಗೆ ತೊಡಗಿದನ್
ಬಂದ ಲಕ್ಷ್ಮಣನಣ್ಣನಾ ಪರಿಗೆ ಬೆರಗಾಗಲಾ
ರಾಮನೆಂದನ್: ನೋಡು ನಡೆ ಒಳಗೆ, ಅತ್ತಿಗೆಗೆ
ಬದಲೋರ್ವ ವಾನರಿಯ..." ಎಂದರ್ದ ವಾಕ್ಯದೊಳೆ
ಗಹಗಹಿಸಿ ನಗುತಿರೆ, ಸುಮಿತ್ರಾತ್ಮಜಂ ನಡೆದು
ನೋಡಿದನ್: ನಗಲಿಲ್ಲವನ್! ನಗೆಗೆ ಮೀರಿರ್ದುದಾ
ಧೂಮದೃಶ್ಯಂ! " ಕ್ಷಮಿಸಿಮೆನ್ನಂ ಪದ್ಸಿಯ ಸೌದೆಯಂ
ತಂದೆನಪರಾಧಿಯಂ" ಎನುತ್ತೊಣಗು ಪುಳ್ಳಿಯಿಂ
ತಂದಡಕಿ, ಸತಿಯಂ ನೆನೆಯುತೂದಿದನ್. ಅಗ್ನಿ
ಧಗ್ಗನೆಯೆ ಚಿಮ್ಮಿದನ್ ಧೂಮತನುವಿಂ ಬುಗ್ಗೆಯೋಲ್.
ಚಿಮ್ಮಿದುದು ಸಂತೋಶ ಕಾಂತಿ ಚಿಂತಾಮ್ಲಾನ
ಮೈಥಿಲಿಯ ಮುಖಪದ್ಮದಿಂ
ಇಂತಹಾ ಮಹತ್ತರ ವರ್ಣನೆ ಸಾಮಾನ್ಯರ ದಿನ ನಿತ್ಯದ ಬದುಕಿನ ಒಂದು ಭಾಗವಾಗದೇ ಇನ್ನೇನು. ಇಂತಹ ಸಾವಿರಾರು ನಿತ್ಯ ಹರಿದ್ವರ್ಣನೆಯುಳ್ಳ ಈ ಮಹಾ ಕಾವ್ಯವನ್ನು ತಾನು ಕ್ರಾಫ್ಟ್ ಟೀಚರ್ ಆಗಿರುವಾಗ ( ೧೯೬೫) ಮೂರು ರುಪಾಯಿಗೆ ಕೊಂಡದ್ದ್ದನ್ನೂ ಈ ಕಾವ್ಯ ಪ್ರತಿ ನಿತ್ಯದ ವಾಚನ ಕಾರ್ಯಭಾಗವಾಗಿದ್ದುದನ್ನೂ ಗುರುಗಳು ಜ್ಞಾಪಿಸಿಕೊಂಡರು.
ಈ ಸಾರಿಯ ಅಭ್ಯಾಸಕ್ಕೆ ಅಭ್ಯಾಸಿಗಳಿಗೆ ಬೋಸಸ್, ಬಂಪರ್ ಎಲ್ಲಾ ದೊರೆತಿದ್ದು ಮುಂದಿನ ತಿಂಗಳ ೨೦ ನೇ ತಾರೀಖಿನವರೆಗೆ ಉಳಿಯುವ ಹ್ಯಾಂಗ್ ಓವರ್ ನಂತಾಗಿತ್ತು.
ನಿಜ ಈ ಸಾರಿಯ ಅಭ್ಯಾಸ ಮೈಸೂರಿನ ಶ್ರೀಯುತ ಮಹೇಶ್ ರವರ ಮನೆಯಲ್ಲಿ .
ಶ್ರೀಮಾನ್ ಪ್ರಭುಶಂಕರರ ಕುವೆಂಪುರವರ ಬಗೆಗಿನ ಕಳಕಳಿಯ, ಕಾಳಜಿ ತುಂಬಿದ ಆದರದ ರಸನಿಮಿಷದ ಕಚಗುಳಿಯಿಡುವ ಶೈಲಿಯಲ್ಲಿನ ಸ್ಮೃತಿ ಸೀಂಚನಗಳು, ನರಹಳ್ಳಿಯವರ ನೇರ ಕರಾರುವಾಕ್ಕಾದ ವಿಮರ್ಶಾ ಶೈಲಿಯ ರಾಮಾಯಣ ದರ್ಶನಮ್ ನ ನೇರ ದರ್ಶನ ರಸ ಧಾರೆ, ಸನ್ಮಾನ್ಯ ಎಚೆಸ್ವೀಯವರ ಎಂದಿನ ತಮ್ಮ ಪ್ರೀತಿ ತುಂಬಿದ ದನಿಯಲ್ಲಿನ ರಾಮಾಯಣ ದರ್ಶನಮ್ ರಸಋಷಿ ಯ ಮಹತ್ಕಾವ್ಯದ ಸಾಮಾನ್ಯ ಜನರನ್ನೂ ನೇರವಾಗಿ ತಲುಪುವ ಆ ಬರಹದ ರಸಾಧಾರೆಯ ದರ್ಶನ, ಬೆಂಗಳೂರಿನಿಂದ ಮೈಸೂರಿನ ವರೆಗೆ ಅಭ್ಯಾಸಿಗಳ ಉಲ್ಲಾಸದ ಉತ್ಸಾಹದ ನಿರಂತರ ಸ್ಪೂರ್ತಿ ಚಿಲುಮೆಯ ಪ್ರೇಮ ಧಾರೆಯ ಒಡನಾಟವು ಪ್ರತಿಯೋರ್ವರನ್ನೂ ಸಹ ಕುಟುಂಬ ಪರಿಸರದ ಹೊನಲಿನಲ್ಲಿ ಸಂಜೆಯವರೆಗೆ ಮುಳುಗೇಳಿಸಿತ್ತು. ಕೊನೆಯಲ್ಲಿ ಆ ವಿಶ್ವ ಮಾನವನ ಸ್ವಗೃಹ ಉದಯರವಿಯ ದರ್ಶನವಂತೂ ಆ ರಸಋಷಿಯ ಸನಿಹ ಮತ್ತು ದರ್ಶನ ಭಾಗ್ಯದ ಸ್ಮೃತಿ ಮಾನಸಿಕವಾಗಿ ಅವರನ್ನೇ ದರ್ಶಿಸಿದಂತಾಗಿತ್ತು. ನಿಜ ಅವರ ಮನೆಯಲ್ಲಿನ ಅವರ ಪೂಜಾಗೃಹ, ಅಧ್ಯಯನ ಸಾಮಗ್ರಿ, ದಿನಬಳಕೆಯ ವಸ್ತುಗಳನ್ನೂ ಎಲ್ಲದಕ್ಕೆ ಕುಂದಣವಿಟ್ಟಂತೆ ಅವರ ಮಗಳು ಶ್ರೀಮತಿ ತಾರಿಣಿ ಮತ್ತು ಅಳಿಯ ಶ್ರೀಯುತ ಚಿದಾನಂದ ಗೌಡರೂ ಅಭ್ಯಾಸ ಕಾಲದಲ್ಲಿ ನಮ್ಮ ಜತೆ ಗಿದ್ದು ಇಬ್ಬರೂ ತಮ್ಮ ತಮ್ಮ ಅನುಭವ ಹಂಚಿಕೊಂಡರು.
ರಸ ಋಷಿಯ ಉದಯ ರವಿಯ ಹಸಿರ ನೆಳಲ ಅಂಗಳದಲ್ಲಿ ಅಭ್ಯಾಸಿಗಳು
ದಿಗ್ಗಜರು
ಉದಯ ರವಿಯಲ್ಲಿನ ಒಂದು ಕೋಣೆ, ಪೂಜಾಗೃಹ, ಅಧ್ಯಯನ, ಪದ್ಮಶ್ರೀ ಫಲಕ
ಕೊಂದ ಕತೆಯಿಂ ಪೆರ್ಮನಾದನೇ ರಾಮ್: http://youtu.be/0PcAqDJGyHQ
http://youtu.be/7Phd_YgdwB4 ಭಾಷೆಯ ಬಳಕೆ: http://youtu.be/UNnKQkHa40E, ಭಾಷೆಯ ಸೌಂದರ್ಯಕ್ಕೆ ಕವಿತೆ ಗಟ್ಟಿಯಾಗಿ ಓದುವ ಅವಶ್ಯಕಥೆ:http://youtu.be/BNs4z1tAKJo
ರಸ ಋಷಿಯ ಹೊಸ ಹೊಸ ಶಭ್ದದ ಬಳಕೆ:http://youtu.be/uDP1LIPyntI ( ನಗೆಗೆ ಮೀರಿರ್ದುದಾ ಧೂಮದೃಶ್ಯಂ! )
ಚಂದಸ್ಸಿನ ವಿವರ ಸಂಪದದ ಆತ್ಮೀಯ ಆತ್ರೇಯರಿಗೆ ನರಹಳ್ಳಿಯವರ ಮಾತು :http://youtu.be/rhtHsp56DEg; ಆತ್ರೇಯರ ಕವನ http://youtu.be/pUPaUsrJh00
ಪ್ರಭು ಶಂಕರರ ಕುವೆಂಪುರವರ ಜತೆಗಿನ ರಸ ಸ್ಮೃತಿ :http://youtu.be/uZT6KpzKHl0
ನರಹಳ್ಳೀಯವರ ದರ್ಶನಮ್" ನೇರ ವಿವರಣೆ ಯ ಚೆಲುವು: http://youtu.be/Pio72-uIN34 ನೆಲೆಗಳು :http://youtu.be/o-h_XTCtVPk, ಪರಂಪರೆಯ ಸಂಸ್ಕೃತಿ http://youtu.be/juCnr1L7_ho
ಕಾವ್ಯವನ್ನು ಓದೋ ಕ್ರಮ:http://youtu.be/kGNrvC-eRpI ; http://youtu.be/4dEjAG_U700
ಚಿತ್ರ ಕೃಪೆ: ಮೊದಲಿನ ನಾಲ್ಕು ಚಿತ್ರಗಳು ಲೇಖಕರವು ಉಳಿದವು ಶ್ರೀಯುತ ಪ್ರಸನ್ನ ಕುಲಕರ್ಣಿ ಮತ್ತು ಅಶ್ವಥ್ ಶಿಕಾರಿಪುರ ಅವರವು
Comments
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
In reply to ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩ by manju787
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
In reply to ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩ by Harish Athreya
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
In reply to ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩ by BRS
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
In reply to ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩ by Chikku123
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
In reply to ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩ by prasannakulkarni
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩
In reply to ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩ by kavinagaraj
ಉ: ರಸಋಷಿ ಕುವೆಂಪುರವರ "ರಾಮಾಯಣದರ್ಶನಮ್" ಅಭ್ಯಾಸ ೧೩