ನನ್ನ ನಾ ಅರಿಯಲಾಗದಿಹುದೇಕೆ?!

ನನ್ನ ನಾ ಅರಿಯಲಾಗದಿಹುದೇಕೆ?!

ನನ್ನ ನಾ ಅರಿಯಲಾಗದಿಹುದೇಕೆ?!

ಹತ್ತಾರು ದಿನಗಳಾದವಲ್ಲಾ
ನಾನೇನನ್ನೂ ಬರೆದಿಲ್ಲವಲ್ಲಾ
ತಲೆಯೊಳಗೆ ಮನದೊಳಗೆ
ವಿಷಯಗಳು ಇಲ್ಲವೆಂದೇನಲ್ಲ
ಆದರೂ ಅಲ್ಲೆಲ್ಲೋ ಒಳಗೇ
ವಿರೋಧಾಭಾಸಗಳ ನಡುವೆ
ಮಡುಗಟ್ಟಿರುವಂತಿವೆ ಎಲ್ಲಾ

ನನ್ನ ಬಂಧುಗಳ ಬಗ್ಗೆ ಬರೆಯಲೇ
ನನ್ನ ಸ್ನೇಹಿತರ ಬಗ್ಗೆ ಬರೆಯಲೇ
ಸುತ್ತಲಿನ ಸಮಾಜದ ಬಗ್ಗೆ ಬರೆಯಲೇ
ಹೊಲಸು ರಾಜಕೀಯದ ಬಗ್ಗೆ ಬರೆಯಲೇ
ಭಂಡ ಭ್ರಷ್ಟಾಚಾರಿಗಳ ಬಗ್ಗೆ ಬರೆಯಲೇ
ಗೋಮುಖವ್ಯಾಘ್ರರ ಬಗ್ಗೆ ಬರೆಯಲೇ
ಬೆನ್ನಲ್ಲಿ ಇರಿಯುವವರ ಬಗ್ಗೆ ಬರೆಯಲೇ

ಛೇ ಬೇಡ! ಅನ್ಯರ ಮಾತು ನನಗೇಕೆ
ಅನ್ಯರ ಅವಲಂಬನೆ ನನಗೆ ಬೇಕೇಕೆ
ಅವರಿವರ ಬಗ್ಗೆ ತಲೆ ಕೆಡಿಸಿಕೊಳ್ಳಲೇಕೆ
ನನ್ನನ್ನೇ ನಾನೊಮ್ಮೆ ಅರಿಯಬಾರದೇಕೆ
ನಾನರಿತ ನನ್ನ ನಾ ಬಿಡಿಸಿಡಬಾರದೇಕೆ
ನನ್ನ ಬಗ್ಗೆಯೇ ನಾನಿಲ್ಲಿ ಬರೆಯಬಾರದೇಕೆ
ಆದರೆ…
ನನ್ನನಿನ್ನೂ ನಾ ಅರಿಯಲಾಗದಿಹುದೇಕೆ?!
*******************

Rating
No votes yet

Comments