ಮನದಲ್ಲಿನ ಮೌನ ಮುಕಾದ ಮೇಲೆ,ಕಣ್ಣೀರ ಹನಿಯ ಯೋಗ
ಮನದಲ್ಲಿನ ಮೌನ ಮುಕಾದ ಮೇಲೆ,ಕಣ್ಣೀರ ಹನಿಯ ಯೋಗ
ಒಂದೊಂದು ನೆನಪು,ಎದೆಯಲ್ಲಿ ಕುಳಿತು,ನೊವಿಂದ ತಾನೇ ರಾಗ
ನಿನ್ನ ಪ್ರತಿ ಕಣ್ಣರೆಪ್ಪೆಯ ಬಡಿತ,ನೊಂದ ಹೃದಯದಲಿ ಕೋಲಾಹಲ
ನನ್ನಿಂದ ದೂರವಾಗುವ ಘಳಿಗೆ,ನನ್ನ ಸಾವಿಗಿಂತ ಬಹುಪಾಲು ಘೋರ
ಕನಸೊಂದು ಕಂಡ ಕಣ್ಣಿಗೆ ಕಣ್ಣೀರು ಸಿಹಿಯಾಯಿತೆ
ನಿನ್ನೊಂದಿಗೆ ನಲಿದ ಮನಕೆ,ನಿನ್ನ ನೆನಪುಗಳೇ ಸವಿಗಾಥೆ
ನೋವೊಂದೆ ಸಾಕು ಈ ಜನುಮಕೆ,ಒಲವೊಂದು ಯಾಕೆ ಬೇಕು
ಸೋತುಹೊದ ಮನಕೆ, ನೊವಲ್ಲಿ ಮಿಂದು ನಿನ್ನ ಕಣ್ಣ ಕಾಡಿಗೆಯಾಗಬೇಕು
ಏನಾದರೇನು ,ನನ್ನ ತೊರೆದು ಹೋಗು ನನ್ನ ತಿರುಗಿ ನೋಡಬೇಡ
ನೀನೊಂದು ತೀರ ನಾನೊಂದು ತೀರ ನಮ್ಮ ಬದುಕಿಗೊಂದೆ ಹಾಡು
ಮನದಲ್ಲಿನ ಮೌನ ಮುಕಾದ ಮೇಲೆ,ಕಣ್ಣೀರ ಹನಿಯ ಯೋಗ
ಒಂದೊಂದು ನೆನಪು,ಎದೆಯಲ್ಲಿ ಕುಳಿತು,ನೊವಿಂದ ತಾನೇ ರಾಗ
ದೂರದ ಬೆಟ್ಟದ ತುದಿಯಲ್ಲಿ ನಮ್ಮಿಬ್ಬರ ಹೆಸರಿನ್ನೂ ಜೊತೆಯಾಕೆ?
ನಿನ್ನ ಮನದಲ್ಲಿ ನನ್ನ ನೆನೆದು ನಿಟ್ಟುಸಿರು ಬಿಡುತಿರುವೆ ಏಕೆ ?
ನಮಗಾಗಿ ವಿಧಿ ಬರೆದ ಪಾಠ ಓದಿ ಮುಂದೆ ಮುಂದೆ ಸಾಗಬೇಕು
ಹೊಸದೊಂದು ಬದುಕು, ಹೊಸದೊಂದು ಹಣತೆ ಹಚ್ಚಿ ನಗುವಾಗಿ ಬೆಳಗಬೇಕು
ನಾನೊಂದು ಜೀವ ನೀನೊಂದು ಜೀವ ಬೇರೆ ಬೇರೆಯಾದರೇನು?
ನಿನ್ನಿಂದ ನಾನು , ನನ್ನಿಂದ ನೀನು ಈ ಜಗವು ಮರೆಯುವುದೇನು ?
ಮನದಲ್ಲಿನ ಮೌನ ಮುಕಾದ ಮೇಲೆ,ಕಣ್ಣೀರ ಹನಿಯ ಯೋಗ
ಒಂದೊಂದು ನೆನಪು,ಎದೆಯಲ್ಲಿ ಕುಳಿತು,ನೊವಿಂದ ತಾನೇ ರಾಗ
ನಿನ್ನ ಪ್ರತಿ ಕಣ್ಣರೆಪ್ಪೆಯ ಬಡಿತ,ನೊಂದ ಹೃದಯದಲಿ ಕೋಲಾಹಲ
ನನ್ನಿಂದ ದೂರವಾಗುವ ಘಳಿಗೆ,ನನ್ನ ಸಾವಿಗಿಂತ ಬಹುಪಾಲು ಘೋರ
ಸ್ನೇಹದಿಂದ
ಮಹಾಂತೇಶ(ಮಾನು)