ಅವನು ಆಗ .....ಆದರೆ ಅವಳು ಈಗ..!

ಅವನು ಆಗ .....ಆದರೆ ಅವಳು ಈಗ..!

ಕವನ

  

       "ನನ್ನವಳನ್ನು  ಈಗ  ಇಡಿಯಾಗಿ...

       ಶಬ್ಧಗಳಲ್ಲಿಯೂ  ಹಿಡಿದಿಡಲಾಗುತ್ತಿಲ್ಲ.."

 

       ಆಗ...

       ಅವಳ..ಜಡೆ...ನಾಗರ ಹಾವಿನ ಹೆಡೆ !

       ಆದರೆ ಈಗ...

       ಚೀಲದಲ್ಲಿಡಬಹುದಾದ ಛೋಟಾ ಕೊಡೆ !

       ಆಗ....

       ಅವಳ ಹುಬ್ಬು..ಕಾಮನ ಬಿಲ್ಲಿನಂತೆ ಸುಂದರ !

       ಆದರೆ ಈಗ..

       ಕಸಬರಿಗೆ ಕಡ್ಡಿಯೂ  ನಾಚುವಷ್ಟು  ಸಪೂರ

       ಆಗ...

       ಅವಳ ನಾಸಿಕ ನೀಳವಾದ ಸಂಪಿಗೆ !

       ಆದರೆ ಈಗ...

       ನೊಣವೂ ಬಳಿಸುಳಿಯುವದಿಲ್ಲ  ಅದರ ಕೆಟ್ಟ ಕಂಪಿಗೆ !

       ಆಗ...

       ಅವಳದು   ಸಿಂಹಕಟಿ, ನಡೆದರೇ..ನವಿಲಿನ ವಯ್ಯಾರದಂತೆ!

       ಆದರೆ ಈಗ..

       ಸೊಂಟ , ಗಾಳಿ ತುಂಬಿ ಉಬ್ಬಿದ ಟ್ಯೂಬಿನಂತೆ  !

      

      ಗೆಳೆಯನ ವರ್ಣನೆಗೆ ನಸು ನಕ್ಕು ನುಡಿದೆ

      " ನಿನ್ನವಳು ಬದಲಾಗಿಲ್ಲ, ಮೊದಲಿನಿಂದಲೂ ಹಾಗೆ !

       ಬದಲಾಗಿದ್ದು, ನಿನ್ನ ದೃಷ್ಟಿ, -ಆಗ ಪ್ರೇಮಕ್ಕೆ ಕಣ್ಣಿಲ್ಲ "

       ಹಾಗೆಯೇ ನಿನ್ನನ್ನೊಮ್ಮೆ  ನೋಡಿಕೊ.....

      

       ಗೆಳೆಯನ ಜಾಗ ಖಾಲಿಯಾಗಿತ್ತು

      

Comments