ಹೆಣ್ಣೆಂದರೆ-------
ಕವನ
ಸಹನೆ---
ಮುಟ್ಟಿನ ಮುಜುಗರವ
ಋತುಪ್ಯಾಡಿನೊಳಗೆ ಹುದುಗಿಸಿಟ್ಟು,
ಕಿಬ್ಬೊಟ್ಟೆ ಸೆಳೆತ, ಹೊಟ್ಟೆನೋವು,
ತೊಡೆಸಿಡಿತಗಳ
ಗಂಡ ಮಕ್ಕಳ ಊಟದ ಡಬ್ಬಿಗೂ
ಅಷ್ಟಿಷ್ಟು ಹಂಚಿಬಿಟ್ಟು
ಹೊಸಿಲು ದಾಟಿದವಳ ಮುಖದ ಮೇಲೆ
ಒಂದು ಕೇರ್ ಫ್ರೀ ಹೂ ನಗೆ!
ಅಸೂಯೆ---
ತಮ್ಮದೇ ಕರುಳಕುಡಿಯ
ಅತಿಮುದ್ದುಗೈವ
ಗಂಡನ ಮೇಲೆ ಬಲು ಸಿಟ್ಟು-
ಇವಳಪ್ಪ
ಇವಳ ಮುದ್ದಿಸಿರಲಿಲ್ಲ ಇಷ್ಟೂ!
ಕ್ಷಮೆ---
ನೂರು ತಪ್ಪಿಗೂ
ಮುರುಯುವುದಿಲ್ಲ ನಂಟು
ಒಂದು, ಎರಡು, ಮೂರು--
ಎಂದು ಹಾಕುವುದಿಲ್ಲ
ಲೆಕ್ಕದ ಗಂಟು.
Comments
ಉ: ಹೆಣ್ಣೆಂದರೆ-------
In reply to ಉ: ಹೆಣ್ಣೆಂದರೆ------- by asuhegde
ಉ: ಹೆಣ್ಣೆಂದರೆ-------