ಪಶ್ಚಾತಾಪ

ಪಶ್ಚಾತಾಪ

ಕವನ

 


                                                  ಪಶ್ಚಾತಾಪ.


 


 ತಿಳಿದಿರಲಿಲ್ಲ ನನಗೆ, ತಿಳಿದೇ ಇರಲಿಲ್ಲ ಜೀವನದ ನಿಜಾ ರೂಪ.....


 ಕಾಲೇಜಿನಲ್ಲಿ ಮಜಾ ಮಾಡಿರುವುದೊಂದೇ ನಾನು ಮಾಡಿದ ಪಾಪ;


 ಪಾಠ ಕೇಳಲಿಲ್ಲ ಗುರುಗಳಿಗೆ ವನ್ದಿಸಲಿಲ್ಲ ಬಿಡಲೂ ಇಲ್ಲ ಅವರುಗಳ ನೋವಿನ ಶಾಪ;


ಗೆಳಯರೇ ಎಲ್ಲಾ...ಎಂದುಕೊಂಡಿದ್ದ ನಾನಾದೆ, ಕೂಪದಲ್ಲಿರುವ ಮಂಡೂಕ;


 ಪರೀಕ್ಷೆಯಲ್ಲಿ ನನಗೆ ಲಬಿಸಿತ್ತು ಅತೀ ಕಡಿಮೆ ಅಂಕ;


 ಅದರ ಪ್ರಮಾಣ ಪತ್ರ ಇಡಿದು ನಾನು ಅಲೆದೆ, ಹಲವು ಕಛೇರಿಗಳ ತನಕ;


 ನನಗೆ ಎಲ್ಲಿಯೂ ಲಭಿಸಲಿಲ್ಲ ಕಾಯಕ;


 ಎಲ್ಲೆಲ್ಲಿಯೂ ಅವಮಾನಗಳ ಜಳಕ;


 ತಿಳಿದಿದೆ,ತಿಳಿದಿದೆ ನನಗಿಂದು ಜೀವನದ ನಿಜಾ ರೂಪ,


 ಮಾಡಿದ ತಪ್ಪಿಗೆ ಪಡುಥಿರುವೆನು ಇಂದು ಪಶ್ಚಾತಾಪ.


 



                                                

Comments