ಓರ್ವ ಸನ್ಯಾಸಿನಿಯೂ ಮತ್ತು ಆಕೆಯ ಪ್ರಿಯಕರನೂ...
ಚಿತ್ರದುರ್ಗದ ಮರುಘರಾಜೇಂದ್ರ ಸ್ವಾಮಿಗಳ ಮಠದ ಶಿರಸಿ ಶಾಖಾ ಪ್ರಮುಖೆ ಪೀಠಾಧ್ಯಕ್ಷೆ ನಿವೇದಿತಾರನ್ನು ಟಿ.ಎಸ್. ಚೇತನ್ ಎನ್ನುವ ಯುವಕ ೨೦೧೦ ರ ಜುಲೈ ೮ ರಂದು ಮದುವೆಯಾಗಿದ್ದ ವಿಷಯ ಪತ್ರಿಕೆಯಲ್ಲಿ ದಾಖಲಾಗಿತ್ತು. ಈಗ ಆತ ನಾ ಪತ್ತೆಯಾಗಿದ್ದಾನೆಂದು ಪ್ರಜಾವಾಣಿ ಪತ್ರಿಕೆ ವರದಿಮಾಡಿದೆ. ೩ ತಿಂಗಳ ಹಿಂದೆ ಸತಿಪತಿಯರ ಮಧ್ಯೆ ಘರ್ಷಣೆಯಾಗಿತ್ತು. ಚೇತನ ನ ತಾಯಿ ರತ್ನಮ್ಮ ತಮ್ಮ ಮಗನನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ಆದರೆ ಮಂಗಳವಾರ ಮಧ್ಯಾನ್ಯ ಆತ ಕಾಣೆಯಾಗಿದ್ದಾನೆ. ಇದು ಪೋಲಿಸ್ ಗೆ ರತ್ನಮ್ಮನವರು ಕೊಟ್ಟ ದೂರು, ಆದಿನ ಮಧ್ಯಾನ್ಹ ೧ ಗಂಟೆಯ ಸುಮಾರಿನಲ್ಲಿ ತಮ್ಮ ಮಗ ಇಬ್ಬರು ಅಪರಿಚಿತರ ಹತ್ತಿರ ಮಾತಾಡುತ್ತಿದ್ದ. ಸ್ವಲ್ಪಹೊತ್ತೆನಲ್ಲೇ ಅವನು ಕಾಣಿಸಲಿಲ್ಲ. ಅವನ ಮೊಬೈಲ್ ಕೂಡ ಬಂದ್ ಆಗಿದೆ. ಬುಧವಾರವೂ ಅವನ ಪತ್ತೆಯಿಲ್ಲ. ತಮ್ಮ ಮಗನನ್ನು ಬೇಗ ಹುಡುಕಿಕೊಡಿ ಎಂದು ಪೋಲಿಸರಿಗೆ ಮನವಿಮಾಡಿದ್ದಾರೆ. ತಮ್ಮ ದೂರಿನಲ್ಲಿ ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿರುತ್ತಾರೆ. ಇ ಘಟನೆಯಿಂದ ಅವನ ತಾಯಿಯ ಮನಸ್ಥಿತಿಯನ್ನು ಅರಿಯ ಬಹುದಾಗಿದೆ.
-೨೧, ಜುಲೈ, ೨೦೧೧ ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿರುವ ಸುದ್ದಿ.
ಸುದ್ದಿ ವಿಶ್ಲೇಷಣೆ :
ಮದುವೆಯಾದ ಒಂದೇ ವರ್ಷದಲ್ಲೇ ಅಪಸ್ವರ. ಎಲ್ಲಾ ಮದುವೆಗಳಲ್ಲೂ ಇದು ಸರ್ವೇ ಸಾಮಾನ್ಯ. ಹಲವಾರು ಹೊಂದಾಣಿಕೆಗಳಿಗೆ ಹೊಸ ವೈವಾಹಿತರು ಎದುರಿಸಬೇಕಾಗುತ್ತದೆ. ಪ್ರೀತಿ ಪ್ರೇಮದ ಕಾಂತಿ ನಿಧಾನವಾಗಿ ಬತ್ತಿದಮೇಲೆ ಇವೆಲ್ಲಾ ಆಗುವುದು ಸಹಜ.
ಆದರೆ ಆಗಲೇ ಪ್ರೌಢೆಯಾಗಿದ್ದ ಸನ್ಯಾಸಿನಿ ನಿವೇದಿತಾ, ತಮ್ಮ ಹಿತಕ್ಕಾಗಿ ಅವರಿಗಿನ್ನ ಚಿಕ್ಕ ಪ್ರಾಯದ ಚೇತನ್ ನನ್ನು ಆರಿಸಿ ಮದುವೆಯಾದರು.ಇನ್ನೂ ಪ್ರಪಂಚದ ಅರಿವಿಲ್ಲದ ಚೇತನ್ ತನ್ನ ತಾಯಿಯವರ ಆಶೆಗೆ ವಿರುದ್ಧವಾಗಿ ಮದುವೆಯಾದನು. ಇದಲ್ಲದೆ ವಯಸ್ಸಿನಲ್ಲಿ ಏರುಪೇರು ಅವರ ವೈವಾಹಿಕ ಜೀವನದಲ್ಲಿ ಬಿರುಕುಕಾಣಿಸಿಕೊಳ್ಳಲು ಶುರುವಾಯಿತು. ಮಗನ ಹಿತಚಿಂತಕಳಾದ ತಾಯಿ ಸಹಜವಾಗಿಯೇ ಇದನ್ನು ಒಪ್ಪಲಿಲ್ಲ. ಹೊರಗಿನ ಬಲಪ್ರಯೋಗದಿಂದ ಚೇತನ್ ಕಾಣೆಯಾಗಿರುವುದು ಮತ್ತೂ ಸಂಶಯಕ್ಕೆ, ಗೊಂದಲಕ್ಕೆ ಕಾರಣ.
ಈ ಪ್ರಸಂಗದಿಂದ ನಮಗೆ ಸಿಗುವ ಪಾಠ :
ಯಾವುದೇ ಜಾತಿಯ, ಪೀಠಾಧಿಪತಿಯೇ ಆಗಲಿ ಮೊದಲು ಬಾಲ್ಯಾವಸ್ಥೆಯಲ್ಲೇ ಆ ಸ್ಥಾನದಲ್ಲಿ ಕುಳಿತುಕೊಂಡಾಗ ತನಗೆ ಪ್ರಪಂಚದ ಅರಿವಿರುವುದಿಲ್ಲ. ಕೇವಲ ಪ್ರವಚನ ಮಾಡಿದ/ಮಾಡಿದಳೂ ಎಂದಾಕ್ಷಣ ಅವರು ಆ ಸ್ಥಾನಕ್ಕೆ ಯೋಗ್ಯರು ಎಂದು ಭಾವಿಸುವುದು ಮೂರ್ಖತನ. ಈಗಾಗಲೇ ಅಂತಹ ಸನ್ಯಾಸಿಗಳನ್ನು ನಾವು ಕಂಡಿದ್ದೇವೆ. ಮುಂದೆ ಅಪಾರ ಧನ, ಪ್ರತಿಷ್ಠೆ ಮತ್ತು ಸ್ತ್ರೀ ಸನ್ನಿಧಿ ದೊರಕಿದಾಗ ಜೀವನವನ್ನೇ ಅರಿಯದ ಅವರು ಎಡವುವುದು ಆಶ್ಚರ್ಯವೇನಲ್ಲ !
ಹೆಣ್ಣಿನ ಆಕರ್ಷಣೆಗೆ ಮಾರಿಹೋದ ಚೇತನ್ ಗೆ ಈಗ ಪರಿಸ್ಥಿತಿಯ ಅರಿವಾಗಿದೆ. ಪೊಳ್ಳು ಧ್ಯೇಯ ಆದರ್ಶಗಳು ದಿನಗಳೆದಂತ ಕೊಚ್ಚಿ ಹೋಗಿ ನೈಜತೆ ತನ್ನ ಮುಂದೆ ಬಂದಾಗ ಎಲ್ಲವೂ ಗಾಳಿಯಪಾಲಾಗುತ್ತದೆ.
ಇನ್ನಾದರೂ ನಮ್ಮ ಜನ ಧೈರ್ಯದಿಂದ ಮುಂದೆ ಬಂದು ಚೇತನ್ ಅಥವಾ ನಿವೇದಿತರಂತಹ ಬಲಿಪಶುಗಳ ಜೀವನವನ್ನು ಉತ್ತಮಗೊಳಿಸಲು ನೆರವಾಗುವರೇ ?? ಶತಮಾನಗಳ ಮೌಢ್ಯದಿಂದ ಎಚ್ಚೆತ್ತುಕೊಳ್ಳುವರೇ ??
-Venkatesh