ಜನುಮ ದಿನಗಳು....!

ಜನುಮ ದಿನಗಳು....!

ಎದೆಯ ಕುಲುಮೆಯೊಳು ತಕತಕನೆ ಕುದಿಯುತಿವೆ ಭಾವಗಳು
ಹೊರಬರದೆ ಸಾಯುತಿವೆ ಹಲವು ಅಸಹಾಯಕ ನುಡಿಗಳು!

ಎಲ್ಲವನೂ ಗಳಿಸಿದ ಎಲ್ಲವನೂ ಗೆಲಿಸಿದ ಮನದ ಗೀತಗಳು,
ಗೆದ್ದಿದ್ದೇನಿಲ್ಲ ಸೋತದ್ದೇ ಎಲ್ಲವೆನ್ನುತಿರುವ ಲೌಕಿಕ ಜನಗಳು!

ಸ೦ಘರ್ಷಗಳ ನಡುವೆ ಮತ್ತೆ ಮತ್ತೆ ಬರುತ್ತಿವೆ ಈ ದಿನಗಳು
ಬರುತ್ತಲೇ ಇರಲಿವೆ ಅರ್ಥವೇ ಇಲ್ಲದ ಜನುಮ ದಿನಗಳು....!!

Rating
No votes yet

Comments