ನೀ ಯಾಕೆ ಬದಲಾಗಲ್ಲ...?

ನೀ ಯಾಕೆ ಬದಲಾಗಲ್ಲ...?

ಕವನ

 


  ಅಮ್ಮ ನೀ ಯಾಕೆ ಬದಲಾಗಲ್ಲ


  ನಿನಗೂ ಆಸೆ-ಆಮಿಷಗಳಿವೆ


  ಬದುಕನ್ನು ಆಸ್ವಾಧಿಸುವ ಹಕ್ಕಿದೆ


  ಆದರೂ ಗಂಡ ಮಕ್ಕಳೇ ಸರ್ವಸ್ವವೆನ್ನುವ ಧೋರಣೆ ಯಾಕೆ?


 


  ನಾ ಅತ್ತಾಗ ಅತ್ತು, ನಕ್ಕಾಗ ನಗುವ ನಿನಗೆ ಸ್ವಂತಿಕೆ ಇಲ್ವಾ?


  ಸಂಸಾರದ ಗೂಡೊಳಗೆ ಎಷ್ಟು ದಿನದ ಗುಲಾಮಗಿರಿ ನಿನ್ನದು?


  ಬಡಾಯಿ ಕೊಚ್ಚಿಕೊಳ್ಳುವ ಗಂಡ, ಬದಲಾಗುವ ಮಕ್ಕಳೊಂದಿಗೆ


  ನಿನ್ನ ದಿನಚರಿಯನ್ನೇ ಕಳೆದು ಬಿಡುವೆಯಲ್ಲಾ


  ನಿನ್ನ ಬದುಕಿನ ನೊಗ ದಣಿಯೋದೆ ಇಲ್ವಾ?


 


  ತ್ಯಾಗಮಯಿ ಅಂತ ನಿನಗ್ಯಾರು ಹೆಸರಿಟ್ಟರು?


  ಕೊನೆವರೆಗೂ ನಿನ್ನೆಲ್ಲಾ ಆಸೆಗಳಿಗೆ ತಿಲಾಂಜಲಿ ಇಡಲೆಂದಾ?


  ನನ್ನೆಲ್ಲಾ ಪ್ರಶ್ನೆಗಳಿಗೆ ನೀ ಕೊಡುವ ಉತ್ತರ ನಗುವೊಂದೆ ಅಲ್ವಾ?


 


  ನೀ ಬದಲಾಗುವ ದಿನಕ್ಕೆ ನಾ ಕಾಯುತಿರುವೆ


  ನಿನ್ನ ಬಣ್ನ ಕಳೆದುಕೊಂಡ ಬದುಕು ಹೊಳೆಯಬೇಕಿದೆ


  ಕಣ್ಣಂಚಿನಲ್ಲಿರುವ ಕನಸು ಮತ್ತೆ ಚಿಗುರೊಡೆಯಬೇಕಿದೆ


  ತುಟಿಯ ಮೇಲೊಂದು ಮಾಸದ ನಸುನಗು ಹಾಗೇ ಇರಲಿ


 

Comments