ನಲ್ಲೆ ನಿನ್ನ ಕಣ್ಣ ಕರೆಯು

ನಲ್ಲೆ ನಿನ್ನ ಕಣ್ಣ ಕರೆಯು

ಕವನ

 

ನಲ್ಲೆ ನಿನ್ನ ಕಣ್ಣ ಕರೆಯು

ಕದಡಿತೆನ್ನ ಮನವನು

ಎದೆಯ ದುಗುಡ ೆಎಲ್ಲಾ ಮರೆತು

ಕಾಯುತಿರುವೆ ಬರವನು

 

ಬರಡು ನೆಲದ ಕುಸುಮ ನಾನು

ಅರಳಿದಾಗಲು ಫಲವು ಏನು

ಗಂಧದಾ ಕೊರಡು ನೀನು

ನಿನ್ನೊಳೇಕೊ ಬೆರೆತೆ ನಾನು

 

ಆ ವಸಂತದ ಇರುಳಲಂದು

ಕೂಗಿ ಕರೆದೆ ನಲ್ಲನೆಂದು

ತಂಪು ಗಾಳಿಯಂತೆ ಬಂದು

ಎದೆಯ ಕದವ ತೆರೆದೆ ಇಂದು

 

ಉಮೇಶ ಮುಂಡಳ್ಳಿ

( ಈ ನನ್ನ ಭಾವಗೀತೆಯು ನನ್ನ ಕನಸಿನ ಧ್ವನಿಸುರುಳಿ ಭರವಸೆಯ ಛಾಯೆಯಲ್ಲಿ ನನ್ನ ಧ್ವನಿಯಲ್ಲೆ ಹೊರಬಂದಿರುತ್ತದೆ. ಈ ಧ್ವನಿಸುರುಲಿಯನ್ನು ಕನ್ನಡದ ಹೆಸರಾಂತ ಲೇಖಕರಾದ ಚೆನ್ನವೀರ ಕಣವಿ ಮತ್ತು ಪಾಟಿಲ್ ಪುಟ್ಟಪ್ಪನವರು ಬಿಡುಗಡೆ ಮಾಡಿರುತ್ತಾರೆ.)

 

Comments