ಬಳಿ ಬಂದೊಮ್ಮೆ ಹೇಳಿ ಹೋಗಿ
ಕವನ
ಮೋಡದ ಒಳಗಿರುವ ಹನಿಗಳೇ
ನೀವೆಂದು ಹೊರಗೆ ಬರುವಿರೆಂದು ಹೇಳುವಿರಾ
ಬಾನಲ್ಲಿ ವಿಹರಿಸುತ್ತಿರುವ ಮೇಘಗಳೇ
ನೀವೆಲ್ಲಾ ಒಂದಾಗಿ ವರ್ಷಧಾರೆಯನ್ನೆಂದು ಹರಿಸುವಿರಾ
ಎಲೆಗಳ ಮೇಲಿರುವ ಬಿಂದುಗಳೇ
ನೀವೆಂದು ಕೆಳಬೀಳುವಿರೆಂದು ಹೇಳುವಿರಾ
ಮಧುವನ್ನಾವರಿಸಿರುವ ದುಂಬಿಗಳೇ
ನೀವೆಂದು ಹೊರ ಹೋಗುವಿರೆಂದು ಹೇಳುವಿರಾ
ನಿಶ್ಚಲವಾಗಿರುವ ಗಾಳಿಯೇ
ನೀನ್ಯಾವಾಗ ಚಲಿಸುವೆಯೆಂದು ಹೇಳುವೆಯಾ
ಸಪ್ತವರ್ಣಗಳ ಸೂಸುವ ಕಾಮನಬಿಲ್ಲೇ
ನಿನ್ನ ಬಣ್ಣಗಳಾಟವೆಂದು ಹೇಳುವೆಯಾ
ಬಾನಂಗಳದಲ್ಲಿ ಚಿತ್ತಾರ ಬಿಡಿಸುವ ತಾರೆಗಳೇ
ನಿಮ್ಮಾಗಮನವೆಂದು ಹೇಳುವಿರಾ
ಕಾಲದ ಹಿಡಿತಕ್ಕೆ ಸಿಲುಕಿ ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳೇ
ನಿಮ್ಮ ಚಿಲಿಪಿಲಿ ನಾದವನ್ನೆಂದು ಕೇಳಿಸುವಿರಾ
Comments
ಉ: ಬಳಿ ಬಂದೊಮ್ಮೆ ಹೇಳಿ ಹೋಗಿ
In reply to ಉ: ಬಳಿ ಬಂದೊಮ್ಮೆ ಹೇಳಿ ಹೋಗಿ by partha1059
ಉ: ಬಳಿ ಬಂದೊಮ್ಮೆ ಹೇಳಿ ಹೋಗಿ
ಉ: ಬಳಿ ಬಂದೊಮ್ಮೆ ಹೇಳಿ ಹೋಗಿ
In reply to ಉ: ಬಳಿ ಬಂದೊಮ್ಮೆ ಹೇಳಿ ಹೋಗಿ by abdul
ಉ: ಬಳಿ ಬಂದೊಮ್ಮೆ ಹೇಳಿ ಹೋಗಿ