ಪುಟಾಣಿ ಪಾಠ
ಪುಟ್ಟ ಮಕ್ಕಳು ನಮ್ಮ ಶಿಕ್ಷಕರೂ ಆಗುತ್ತಾರೆ. ಮಕ್ಕಳಿಂದ ಕಲಿಯುವುದು ಬೇಕಷ್ಟು ಇದೆ ಎಂದು ನಮಗೆ ತಿಳಿದಿದ್ದರೂ ಅದರ ಕಡೆ ಗಮನ ಕೊಡದೆ, ಅವರನ್ನು ನಿಗ್ರಹಿಸುವುದರಲ್ಲಿ, ಯಜಮಾನಿಕೆ ಮಾಡುವುದರಲ್ಲಿ ನಿರತರಾಗಿ ಬಿಡುತ್ತೇವೆ. ಮಕ್ಕಳು ನಮಗೆ ಈ ಮೂರು ಗುಣಗಳನ್ನು ಹೇಳಿಕೊಡುತ್ತವಂತೆ;
೧. ಯಾವುದೇ ವಿಶೇಷ ಕಾರಣವಿಲ್ಲದೆ ಸಂತೋಷದಿಂದಿರುವುದು.
೨. ಯಾವಾಗಲೂ ಏನನ್ನಾದರೂ ಮಾಡುತ್ತಾ ಬ್ಯುಸಿ ಆಗಿರುವುದು, ಮತ್ತು
೩. ತಮಗೆ ಬೇಕಾದ್ದನ್ನು, ಇಷ್ಟವಾದ್ದನ್ನು ಹೇಗೆ ಪಡೆಯಬೇಕು ಎನ್ನುವುದರ ಸ್ಪಷ್ಟ ಕಲ್ಪನೆ ಇಟ್ಟು ಕೊಂಡಿರುವುದು.
ಮೇಲಿನ ಮಾತುಗಳು ವಿಶ್ವ ಪ್ರಸಿದ್ಧ, ಬ್ರೆಜಿಲ್ ಮೂಲದ ಬರಹಗಾರ “ಪವ್ಲು ಕುವೆಲ್ಯು” (paulo coelho) ಅವರದು.
ಈ ಬರಹಗಾರನ ಹೆಸರನ್ನು ಹೇಗೆ ಉಚ್ಛರಿಸುವುದು ಎಂದು ಹಲವು ವೆಬ್ ತಾಣ ನೋಡಿದ ನಂತರ ಬರೆದಿದ್ದೇನೆ.
ಚಿತ್ರ: ನನ್ನ ಮಗಳು 'ಇಸ್ರಾ' ಳದು, ಕ್ಯಾಮರ ಮೊಬೈಲ್ ನಿಂದ.
Rating
Comments
ಉ: ಪುಟಾಣಿ ಪಾಠ
In reply to ಉ: ಪುಟಾಣಿ ಪಾಠ by prasannakulkarni
ಉ: ಪುಟಾಣಿ ಪಾಠ
ಉ: ಪುಟಾಣಿ ಪಾಠ
ಉ: ಪುಟಾಣಿ ಪಾಠ
ಉ: ಪುಟಾಣಿ ಪಾಠ
ಉ: ಪುಟಾಣಿ ಪಾಠ