ಮಲೆನಾಡು ಈಗ ಮಳೆನಾಡು

ಮಲೆನಾಡು ಈಗ ಮಳೆನಾಡು

ಮಳೆಯ ಹಾಡಿನ ಮೋಡಿಗೆ ಭುವಿಯು ವಶವಾಗಿದೆ. ಮಳೆಯ ಹಾಡಿಗೆ ಎಲೆಯ ತುದಿ ಹನಿ ಜಿನುಗಿಸಿ ತಲೆದೂಗಿದೆ. ಮಳೆಯ ಹಾಡಿಗೆ ಕಪ್ಪೆ ಜೀರುಂಡೆವು ಹಿಮ್ಮೆಳವ ನೀಡಿದೆ. ಮಳೆಯ ಹಾಡಿಗೆ ಮಲೆನಾಡು ಮಳೆಯನಾಡಗಿದೆ. ಮಳೆಯ ಹಾಡಿಗೆ ತಂಗಾಳಿಯು ತೇಲಿ ಕುಣಿದು ಸಾಗಿದೆ. ಮಳೆಯ ಹಾಡಿನ ಮೋಡಿಗೆ ಜನಕೋಟಿ ಸಂಭ್ರಮಿಸಿದೆ. ಮಳೆಯ ಹಾಡಿನ ಮೋಡಿಗೆ ಮೋಹಕತೆಗೆ ಹಿತ್ತಲ ಹುಲ್ಲಿನ ಇಬ್ಭನಿ ಮುತ್ತಾಗಿದೆ. ಮಳೆಯ ಹಾಡಿಗೆ ಹೂವಿಗೆ ಹೊಸ ರಂಗು ಬಂದಿದೆ. ಮಳೆಯ ಹಾಡಿಗೆ ಹಕ್ಕಿಯು ಜೊತೆಯಾಗಿದೆ. ಮಳೆಯ ಹಾಡಿನ ಮೋಡಿಗೆ ಜಗವೇ ವಶವಾಗಿದೆ. ಇಲ್ಲಿ ಮಳೆಯೇ ಹಾಡಾಗಿ ಸುರಿಯುತಿದೆ.