ಮಾಯೆ

ಮಾಯೆ

ಕವನ

 

ಮಾಯೆ, ಮಾಯೆ೦ಬ

ಮಾಯೆ

ಹೆಣ್ಣೋ ಗ೦ಡೋ 

ಅವೆರಡೂ ಒಟ್ಟೊಟ್ಟಿಗೆ ಇದ್ದೂ ಇಲ್ಲದ ಮನವೋ   

 

    

ಪದ ಪದದರ್ಥ

ಪದ ಅದರರ್ಥ ಸವಕಲಾಗಿವೆ 

ಪದಾರ್ಥವಾಗಿವೆ!

ಭಾವನೆಗಳಿಲ್ಲದೆ ಪದ ಅನಾಥವಾಗಿವೆ

 

 

ಇದ್ದೂ ಇಲ್ಲದ ಇರವು

ಗೊತ್ತಿದ್ದೂ ಗೊತ್ತಿಲ್ಲದ೦ತಹ ಮರವು

....ಹೀಗೆ ನಿಲ್ಲದ ಮಾಯಾಜಾಲ 

ಸಾಗುತ್ತಲೇ ಇದೆ

ಬದುಕು ಹರಿಯುತ್ತಲೇ ಇದೆ 

ಮಾಯೆಯಿ೦ದ ಮಾಯೆ 

ಬೆಳಯುತ್ತಲೇ ಇದೆ

 

 

 

 

 

 

 

 

 

 

 

 

 

 

 

 

Comments