ಮಣ್ sons
ಬೆಳ್ಳಂ ಬೆಳ್ಳಿಗೆ ಒಳ್ಳೆ ನಿದ್ರೆ ಹತ್ತಿರ್ಬೇಕಾದ್ರೆ ತಿರುಗುತ್ತಿದ ಸಿಲಿಂಗ್ ಫ್ಯಾನ್ ಎದೆ ಮೇಲೆ ಬಿದ್ದಂಗೆ ಆಯ್ತು ಪಾಪಣ್ಣನಿಗೆ , ಅವರ ಮನೆ ಫೋನ್ನಿಂದ ಆ ತರಹ ಶಬ್ದ ಬಂತು.
ಸಾಹೇಬರು : ಏನಯ್ಯ ಇನ್ನಾ ಮಲಗಿದ್ಯ ಸ್ಟೇಷನ್ ಗೆ ಹೋಗು ಒಂದು ಲಿಸ್ಟ್ ಬಂದಿದೆ ಮಂತ್ರಿಗಳ ಕಡೇಯಿಂದ, ಹೋಗಿ ಎಲ್ಲಾ ಬಡ್ಡಿ ಮಕ್ಕಳನ್ನ ಎತ್ತಾಕೊಂಡು ಬಾ...
ಪಾಪಣ್ಣ : ಸರಿ ಸಾರ್
(ಪಾಪಣ್ಣ ದಪ್ಹೆದ್ದಾರ್ ಸಾಹೇಬರು ಆಗಿದ್ದ, ಉರಿನಲ್ಲಿ ಇರೋವ್ರ ಶಾಪ ಅವನನ್ನ ಕಾಯುತ್ತ ಇತ್ತು. ಅಲ್ಲಿ ಜನ ಹೇಳೋವ್ರು
"ಆನ್ನ ಹುಟ್ಟಿಸಿಕೊಳೋಕ್ಕೆ ಏನ್ ಇಲ್ಲದೆಇದ್ರು ಪರವಾಗಿಲ್ಲ . ಒಂದು ಖಾಕಿ ಡ್ರೆಸ್ಸು ಅದ್ರ ಮೇಲೆ ಮೂರು ಬಾಣಕಾರದ ಪಟ್ಟಿ ಇದ್ರೆ ಸಾಕು , ಎಲ್ಲಾ ಓಸಿ " ಅನ್ನೋರು ಪಾಪಣ್ಣನ ನೋಡಿ. ಹೆಂಡ್ತಿ ಖಾಲಿ ಬ್ಯಾಗ್ ಕೊಟ್ಟರೆ ಬರೋವಾಗ ಅದರ ತುಂಬಾ ತರಕಾರಿ ಹಣ್ಣು ಎಲ್ಲಾ ಇರ್ತಿತ್ತು. ಅವರ ಮಕ್ಕಳು ಓಸಿ ತಿಂದು ತಿಂದು ಕಾಡ್ ಹಂದಿ ತರಹ ಇದ್ರು,ಅವರ ಹೆಂಡ್ತಿ ಒಳ್ಳೆ ಆಯುಧ ಪೂಜೆ ಮಾಡಿರೋ ಲಾರಿ ತಾರಾ ಇದ್ಲು , ಇರೋ ವಡವೆನೆಲ್ಲ ಹಾಕ್ಕೊಂಡು ೩ ಮಳಾ ಓಸಿ ಮಲ್ಲಿಗೆ ಮುಡ್ಕೊಂಡು ಬಡ್ಡಿ ವಸೂಲಿಗೆ ಹೊರಟ್ ಬಿಡೋಳು ಬೆಳ್ಳಿಗ್ಗೆ).
ಸ್ಟೇಷನ್ನಲ್ಲಿ
ಕಾನ್ಸ್ಟೇಬಲ್ ಮುನಿ ಚೌಡಪ್ಪ ಲಿಸ್ಟ್ ಹಿಡ್ಕೊಂಡು ಪಾಪಣ್ಣನಿಗೆ ಕಾಯುತ್ತಿದ್ದ.
ಚೌಡಪ್ಪ: ಸರ್ ಲಿಸ್ಟು ....
ಪಾಪಣ್ಣ: ಗೊತ್ತಾಯ್ತು ! ನಡೀರಿ ಹೋಗೋಣ ( ಅಂತ ಹೇಳಿ ೪ PC ಗಳ ಜ್ಯೋತೆ ಹೊರಟ)
ಲಿಸ್ಟ್ನಲ್ಲಿ ಇರೋವ್ರ್ನೆಲ್ಲ ಹಿಡಿದು lockup ನ housefull ಮಾಡಿದ್ರು. ಎಲ್ಲಾರು ಯಾಕ್ ಸರ್ ನಮ್ಮನ್ನ ಒಳಗೆ ಹಾಕಿದೀರ ಅಂದ್ರೆ , "ದೊಡ್ಡ ಸಾಹೇಬರು ಹೇಳವ್ರೆ ಅದ್ದಿಕ್ಕೆ , ಜಾಸ್ತಿ ಮಾತಾಡಿದ್ರೆ ಏರೋಪ್ಲೇನ್ ಹತ್ತಿಸ್ತೀನಿ" ಅಂತಿದ್ದ ಪಾಪಣ್ಣ.
ಪಾಪಣ್ಣ: ಏನ್ರೋ ! ಯಾಕೆ ನಿಮ್ಮನ್ನ ಎತ್ತಾಕೊಂಡು ಬಂದಿರಬಹುದು ನಾವು ?
ಒಬ್ಬ : ಸರ್ ಅದು ನಿಮಗೆ ಗೊತ್ತು ಸರ್, ದಯಾ ತೋರಿಸದೆ ಹೀಗೆ ಏಕೆ ಎಳ್ಕೊಂಡು ಬಂದ್ರಿ ಸರ್? ಮುನಿಯ ತೊಳ್ಕೊಳಕ್ಕು ಬಿಟ್ಟಿಲ್ಲ ನಿಮ್ಮ PC ಗಳು. ಈಗ ನಮಗೆ ಒಳಗೆ ಇರೋಕ್ಕೆ ಆಗ್ತಿಲ್ಲ , ದಯಮಾಡಿ ಅವನೋಬ್ಬನಾದ್ರು ಬಿಡಿ ಸಾರ್, ಇಲ್ಲದೆ ಇದ್ರೆ ನಾವೆಲ್ಲಾ ಇಲ್ಲೇ ಉಸಿರು ಗಟ್ಟಿ ಸಾಯ್ತೀವಿ , ಆಮೇಲೆ ಲಾಕಪ್ ಡೆತ್ ಆಗಿ ನಿಮ್ಮಮೇಲೆ ಬರೋತ್ತೆ .
ಪಾಪಣ್ಣ ನಿಗೆ ಸ್ವಲ್ಪ ದಿಗಲ್ ಆಯ್ತು , ಮುನಿಯನೋಬ್ಬನನ ಈಚೆ ಬಿಟ್ಟ.
ಪಾಪಣ್ಣ: ಮಗನೆ ತೊಳಕೊಂಡು ವಾಪಸ್ ಬಾ , ಇಲ್ಲದೆ ಇದ್ರೆ ಮುಂದೆ ತೊಳೆಯೋಕ್ಕೆ ಆಗ್ಧಂಗೆ ಮಾಡ್ತೀನಿ !. ಅದ್ಸರಿ ! ನೀವೆಲ್ಲ ಏನ್ ಕೆಲಸ ಮಾಡ್ ತೀರೋ !
( ಅಂತ ಉಳಿದವರನ್ನ ಕೇಳಿದ)
ಎಲ್ಲಾರು : ಸರ್ ನಾವು ಡ್ರೈವರ್ ಕೆಲಸ ಮಾಡೋರು ಸರ್.
ಪಾಪಣ್ಣ: ಲೇ ಮಕ್ಳಾ ! ನಿಮ್ಮನ್ನ ಮಂತ್ರಿಗಳ ಕಾರ್ ಡ್ರೈವ್ ಮಾಡೋಕ್ಕೆ ಸೆಲೆಕ್ಟ್ ಮಾಡ್ತಾರೆನೋ ? ಅದ್ದಿಕ್ಕೆ ನಿಮ್ಮನೆಲ್ಲ ಎಳ್ಕೊಂಡು ಬರೋಕ್ಕೆ ಸಾಹೇಬರು ಹೇಳಿದ್ದು ಅನ್ನಿಸುತ್ತೆ . ಮಂತ್ರಿಗಳ ಡ್ರೈವರ್ , ಮನೆ ಕೆಲಸದವಳ ಜ್ಯೋತೆ ಓಡಿ ಹೋದ ಅಂತ ಪೇಪರ್ನಲ್ಲಿ ಓದಿದ್ದು ಜ್ಞಾಪಕ !
ಅನ್ತಿದ್ದಹಾಗೆ , ಸಾಹೇಬರು ಜೀಪ್ ನಿಂದ ಇಳಿದು ಬಂದ್ರು.
ಸಾಹೇಬರು : ಎಲ್ಲಾರ್ನು ಹಿಡ್ಕೊಂಡು ಬಂದ್ರಾ?
ಚೌಡಪ್ಪ : ಒಬ್ಬನ್ನ ಈಚೆ ಬಿಟ್ಟಿದಿವಿ ಸರ್ ಅವ್ನು ತೊಳ್ಕೊಂಡುಇರ್ಲಿಲ್ಲ !
ಸಾಹೇಬರು : ವಾಟ್ ?
ಪಾಪಣ್ಣ: ಏನಿಲ್ಲ ಸರ್ ಬಂದು ಬಿಡ್ತಾನೆ, ಸರ್ ಇಷ್ಟು ಜನನ್ನ ಹೇಗೆ ಸೆಲೆಕ್ಟ್ ಮಾಡ್ತೀರ ?
ಸಾಹೇಬರು : ಏತಕ್ಕೆ ?
ಪಾಪಣ್ಣ: ಸರ್ ನೀವು ಇವರಲ್ಲಿ ಒಬ್ರಿಗೆ ಮಂತಿಗಳ ಕಾರ್ ಡ್ರೈವರ್ ಕೆಲಸ ಕೊಡಿಸ್ತೀರಾ ಅಲ್ವ?
ಸಾಹೇಬರು : ಲೇ ಗೂಬೆ ! ನಾನ್ ಏನ್ emplyoment ಆಫೀಸೆರ್ ಅನ್ನಕೊಂಡಿದ್ಯಾ ? ಇವರೆಲ್ಲ JCB ಓಡಿಸೊವ್ರು, ಅದೇ bulldozer , ಮಣ್ಣು ಎತ್ತಿ ಹಾಕೊತ್ತಲ್ವ ಅದು.
ಪಾಪಣ್ಣ: ಅದ್ಸರಿ ಸರ್ ! ಮಣ್ಣು ಹೊರೋರ್ನ ಯಾಕೆ ಎತ್ತಾಕೊಂಡು ಬರೋಕ್ಕೆ ಹೇಳಿದ್ರಿ ?
ಸಾಹೇಬರು : ಮಂತ್ರಿಗಳ ಮೇಲೆ ಅಕ್ರಮ ಗಣಿಗಾರಿಕೆ ತನಿಖೆ ಶುರುವಾಗಿದೆ ಆಲ್ವಾ, ಆ ಭೂಮಿನ ಆಗಿತ ಇರೋರ್ ಈ ನನ್ಮಕ್ಕಳು ಅಲ್ವಾ ! ಇವರು ಏನಾದ್ರೂ ಬಾಯಿ ಬಿಟ್ರೆ ಅಂತ, ಮುಂಜಾಗೃತಾ ಕ್ರಮ. ತನಿಖೆ ಮುಗಿಯೋ ತನಕ ಬಿಡಬೇಡ ಇವರ್ನೆಲ್ಲಾ ? ಗೊತ್ತಾಯಿತ ?
ಪಾಪಣ್ಣ: ಸರ್ ! ಆ ಹ ಹ ! ಸರ್ ನಿಮ್ಮ ತಲೆ ಶಕುಂತಲೆ (ಶಕುನಿ ತಲೆ ) ಸರ್ !
Comments
ಉ: ಮಣ್ sons
ಉ: ಮಣ್ sons
In reply to ಉ: ಮಣ್ sons by gopaljsr
ಉ: ಮಣ್ sons