ಮೇಲು - ಕೀಳು

ಮೇಲು - ಕೀಳು

ಕವನ

ನಾನು-ನೀನು ಎಂಬ ಖಡು ಜಂಬವೇಕಯ್ಯಾ

ನಮ್ಮಲ್ಲರಿಯುವುದು ಒಂದೇ ರಕ್ತವಯ್ಯಾ

ನನ್ನದು-ನಿನ್ನದು ಎಂಬ ಜಗಳವೇಕಯ್ಯಾ

ಇದೆಲ್ಲವೂ ಆ ಪರಮನ ವರದಾನವಯ್ಯಾ

 

ಪರರ ನಿಂದಿಸಿ ನಕ್ಕು ನಲಿಯುವ ಮ್ರಗನಾದರೆ

ನಿನ್ನ ಪಾಡೇನೆಂದು ಅರಿತಿರುವೆಯಾ 

ಉಪಕಾರಿಯಾಗದೆ ನಯವಂಚಕ ಜೀವಿಯಾದರೆ

ನಿನಗೇನು ಕಾದಿದೆಂದು ಯೋಚಿಸಿರುವೆಯಾ 

 

ಬಡತನದಿ ಬೇಯುತ್ತಿರುವ ಸಹೋದರನೆದುರು

ನಿನ್ನ ಆಸ್ತಿಗೆ ಮೌಲ್ಯವೇನಯ್ಯಾ 

ಬಳಲಿ ಸೋತುಹೋದ ನೆರೆಯವನೆದುರು

ನಿನ್ನ ಸವಿ ನುಡಿಗಳಿಗೆ ಅರ್ಥವೇನಯ್ಯಾ 

 

ಜನರನ್ನು ಓಲಿಸಿ ಕೈ ಮುಗಿದು ಗೆದ್ದರೆ

ನಿನ್ನ ಜವಾಬ್ದಾರಿಯೇನೆಂದು ಅರಿತಿರುವೆಯಾ 

ದೇಶವಾಳುವ ನಾಯಕನೇ ಭಕ್ಶಕನಾದರೆ

ಜನರ ಶಾಪದ ಕಿಡಿಯನ್ನು ಊಹಿಸಿರುವೆಯಾ 


ಜಾತಿ-ಮತದ ಹೆಸರಲ್ಲಿ ದೇಶ ಒಡೆದರೆ

ನಿನ್ನ ಮಂತ್ರ ಪಟಣಕ್ಕೆ ಫಲವೇನಯ್ಯಾ 

ಮಂದಿರ-ಮಸೀದಿಯನ್ನು ಹೊಡೆದುರುಳಿಸಿದರೆ

ಪರಮನ ಕಾಣಲು ಹೋಗುವುದೆಲ್ಲಯ್ಯಾ

Comments