ಸಾಗು ಮುಂದೆ
ಕವನ
ಬೆಳ್ಳಿ ಚುಕ್ಕಿಗೇನು ಕೆಲಸ
ನೆತ್ತಿ ಸುಡೋ ಬಿಸಿಲಲಿ?
ಹಾಡು ಹಕ್ಕಿಗೇನು ಕೆಲಸ
ಜಡಿಮಳೆಯ ನಡುವಲಿ?
ಚುಕ್ಕಿ ನೀನು ಕಾಣೋದಿಲ್ಲ
ಸೂರ್ಯನುರಿವ ಸಮಯದಿ!
ಹಕ್ಕಿ ನಿನ್ನ ಕೇಳೋರಿಲ್ಲ
ಕಪ್ಪೆ ಕೂಗೋ ಕಾಲದಿ!
ಕಣ್ಣ ನೀರಿಗಿಲ್ಲ ಬೆಲೆಯು
ಈ ಯಾಂತ್ರಿಕ ಜಗದಲಿ!
ಸಣ್ಣ ನಗುವ ಚೆಲ್ಲಿ ನೀನು
ಸಾಗು ಮುಂದೆ ಬದುಕಲಿ!
- Log in to post comments
Comments
ಉ: ಸಾಗು ಮುಂದೆ