ಟಿವಿಯೋರ ಕಸ್ಟ, ನಿಮಗೆ ಗೊತ್ತಾ ಸಾಮಿ - ಸಿದ್ದೇಸ ಟಿವಿ

ಟಿವಿಯೋರ ಕಸ್ಟ, ನಿಮಗೆ ಗೊತ್ತಾ ಸಾಮಿ - ಸಿದ್ದೇಸ ಟಿವಿ

ಈಗ ರಾಜ್ಯದ ರಾಜಕೀಯ ಬದಲಾವಣೆಯಿಂದಾಗಿ ನಮ್ಮ ಸಿದ್ದೇಸ ಟಿವಿ ಸಾನೇ ಫೇಮಸ್ ಆಗೈತೆ. ಜನ ತಮ್ಮ ಮನೆ ಟಿವಿ ಆಫ್ ಮಾಡಿ ಪಕ್ಕದ ಮನೆ ಟಿವಿಯಲ್ಲಿ "ಸಿದ್ದೇಸ ಟಿವಿ" ನೋಡ್ತಾ ಇದಾರೆ ಅಂದ್ರು ಬಾಸು. ಯಾಕೆ ಸಾ, ವರದಿಗಾರ ಕಿತ್ತು ಹೋಗಿರೋ ಡಬ್ಬ ತರಾ ಅವ್ನೆ ಅದಕ್ಕೆ ಅಂದ್ರು ಅಂದ ಬಾಸು. ಒಟ್ಟು ನೋಡ್ತಾರಲ್ಲಾ ಅದಕ್ಕೆ ಖುಸಿ ಪಡಿ ಅಂದ ಸಂಭು, ಸಾ ಮತ್ತೆ ನನ್ನ ಸಂಬಳ. ತಡಿಯಪ್ಪಾ, ಮುಂದೆ ಯಾರು ಮುಕ್ಕಮಂತ್ರಿ ಆಗ್ತಾರೆ ಅನ್ನೋದನ್ನ ನೋಡ್ಕಂಡು ನಿನ್ನ ಸಂಬಳ ಜಾಸ್ತಿ ಮಾಡ್ತೀನಿ ಅಂದ್ರು ಬಾಸು. ಯಾಕೆ ಸಾ ಅಂದ ಸಂಭು, ಡೀಲ್ ಮಾಡಕ್ಕೆ, ಏಥೂ. ನಾನು ನಿಸ್ಟಾವಂತ ವರದಿಗಾರ ಅಂದ ಸಂಭು. ಅದು ಸರಿ ನಾಳೆ ಬಿಜೆಪಿ ಪಕ್ಸದಾಗೆ ಸಾನೇ ಚೇಂಜಸ್ ಆಯ್ತದೆ, ಎಲ್ಲಾ ಕಡೆ ಕವರ್ ಮಾಡ್್ಬೇಕಲಾ ಅಂದೆ,. ನೋಡ್ಲಾ ಟಿವಿಎಸ್ ಬಿಟ್ಟು ಯಾವುದಾದರೂ ಗೇರ್ ಗಾಡಿ ಕೊಡಿಸು, ಅಂಗೇ ಮೊಬೈಲ್್ಗೆ ಕರೆನ್ಸಿ ಹಾಕ್ಸು ಅಂದ. ಯಾಕ್ಲಾ, ಲೇ ನನ್ನ ದುಡ್ಡೆಲ್ಲಾ ಕರೆನ್ಸಿಗೆ ಹೋಯ್ತಾ ಐತೆ ಕಲಾ, ಮನ್ಯಾಗೆ ಅಕ್ಕಿ ತರಕ್ಕೂ ಕಾಸಿ ಇಲ್ಲ ಅಂದ ಸಂಭು. ನೋಡಪ್ಪಾ, ಅದೇನೋ ಗೊತ್ತಿಲ್ಲ, ಒಟ್ಟಲ್ಲಿ ನಮಗೆ ಫ್ಲಾಸ್ ನ್ಯೂಸ್ ಬೇಕು ಆಟೆಯಾ ಅಂದೆ. ಹೂಂ ಕಲಾ,ಟ್ರೈ ಮಾಡ್ತೀನಿ ಅಂದ ಸಂಭು.

 

 

ಸರಿ ಬೆಳಗ್ಗೆ ಸುರುವಾತು ರಾಜಕೀಯ ಚಟುವಟಿಕೆ. ಲೇ ಸಂಭು ಎಲ್ಲಲಾ ಇದೀಯಾ, ಲೇ ಯಡೂರಪ್ಪನ ಮನೆತಾವ ಇದೀನಿ ಕಲಾ ಅಂದ.  ಈಗ ನಮ್ಮ ಇಸೇಸ ವರದಿಗಾರ ಮುಕ್ಕಮಂತ್ರಿ ಯಡೂರಪ್ಪನ ಮನೆತಾವ ಅವ್ರೆ, ಅವರಿಂದ ಬ್ರೇಕಿಂಗ್ ನ್ಯೂಸ್ ಏನು ಬರುತ್ತೆ ಅಂತ ನೋಡುವಾ, ಹೇಳಿ ಸಂಭು ಅಲ್ಲಿನ ಇತ್ತೀಚಿಗಿನ ಬೆಳವಣಿಗೆ,

ನೋಡಿ ಕೋಮಲ್, ಇದೀಗ ಯಡೂರಪ್ಪ ಕೆರೆತಾವ ಹೋಗಿದಾರೆ ಅಂತ ಬಲ್ಲ ಮೂಲಗಳು ತಿಳಿಸಿದೆ. ಹಾಗೇ ರೇಣುಕಾಚಾರ್ಯ ಹಾಗೂ ಸಚಿವ ಸೋಮಣ್ಣ ಹೊರಗೆ ಬಂದು ಹೇಳಿದ್ದು ಇಸ್ಟು,. ಲೋಕಾಯುಕ್ತ ವರದಿ ಏಕ ಪಕ್ಸೀಯವಾಗಿ ಇದೆ. ಹಾಗಾಗಿ ನಮ್ಮ ನಾಯಕರನ್ನಾಗಿ ಯಡೂರಪ್ಪನವರನ್ನೇ ಮುಂದು ವರೆಸಬೇಕೆಂದು ಹೇಳುತ್ತಿದ್ದಾರೆ.

ಲೇ ವಿಸ್ಯುಯಲ್ಸ್ ಎಲ್ಲಲಾ ಅಂದೆ. ಲೇ ಕೆಮೆರಾದೋನು ಹಿಂದೆ ಅವ್ನೆ ಕಲಾ, ದರಿದ್ರ ಇಂಗ್ಲೀಸ್ ಅಂಗೇ ಹಿಂದಿ ಚಾನಲ್್ನೋರು ದಾನ್ಲೆ ಸಾನೇ ಆಗೈತೆ ಅಂದ. ಲೇ ಅವನಿಗೆ ಹೈ ಹೀಲ್ಡ್ ಬೂಟು ಕೊಡಸ್ಲಾ ಅಂದ ಬಾಸು. ಯಾವನೋ ನನ್ಮಗ ನಮ್ಮ ಮೈಕ್ ಹೊಡಕಂಡು ಹೋಗಿದಾನೆ ಅಂದ, ಏಥು,. ಸರಿ ಬುಡ್ಲಾ ತಕ್ಸಣ, ಅಸೋಕ ಹೋಟೆಲ್್ಗೆ ಹೋಗಲಾ ಅಂದೆ, ಏನು ಹೆಲಿಕಾಪ್ಟರ್ ಕೊಟ್ಟಿದೀರಾ, ಮಗನೇ ಅಲ್ಲಿಗೆ ಹೋಗಕ್ಕೆ ಅರ್ಧ ಗಂಟೆ ಬೇಕು, ಅದೂ ಅಲ್ಲದೆ ಸಾನೇ ಟ್ರಾಫಿಕ್ ಐತೆ ಕಲಾ, ಅದೂ ಅಲ್ಲದೆ ನಿಂಗನ ತಾವ ಡ್ರೇವಿಂಗ್ ಲೇಸೆನ್ಸ್ ಇಲ್ಲಾ ಅಂದ. ಲೇ ಈಗ ಅಸೋಕ ಹೋಟೆಲ್ ತಾವ ಬಂದೆ, ಆದರೆ ಮತ್ತೆ ಎಲ್ಲಾರೂ ಬಸ್ನಾಗೆ ಸಿಎಂ ಮನೆ ತಾವ ಹೋಗಿದಾರಂತೆ, ಹಿಂಗೆ ಪೆಟ್ರೋಲ್ ಹಾಕಿಸ್ಕಂಡು ಹೋಯ್ತೀನಿ ಅಂದ. ಲೇ ಕೆಮೆರಾಮನ್ ನಿಂಗ ಎಲ್ಲಲಾ, ಲೇ ಅವನಿಗೆ ಸಾನೇ ಯೂರಿನ್ ಪ್ರಾಬ್ಲಮ್, ಇಲ್ಲೇ ಯಾವುದೋ ಓಣಿಯಲ್ಲಿ ಇದಾನೆ ಕಲಾ ಅಂದ ಸಂಭು. ಏಥೂ.
ಪಾಪ ಸಂಭು, ಯಡೂರಪ್ಪನ ಮುಂದೆ ಇರೋ, ಬೇರೆ TV ಯೋರಿಗೆ ಏನಾದ್ರೂ ಇಸೇಸ ಸುದ್ದಿ ಇದ್ರೆ ಪೋನ್ ಮಾಡ್ರಪ್ಪಾ ಅಂದಿದ್ನಂತೆ, ಅದಕ್ಕೆ ಅವರು ಯಾಕೆ ಹೇಳು, ನಮ್ಮ ಟಿಆರ್್ಪಿ ಕಮ್ಮಿ ಆಗ್ತದೆ ಅಂದು ಉಗದವ್ರೆ, ಲೇ ಇದೇ ಏನ್ಲಾ ಮಾಧ್ಯಮ ಮಿತ್ರರು ಅಂದ್ರೆ ಅಂದಾ, ಬುಡ್ಲಾ ಇದು ವೃತ್ತಿ ಸ್ಪರ್ಧೆ ಅಂದೆ. ಇದೀಗ ನಮ್ಮ ಸಂಭು ಸಿಎಂ ಮನೆತಾವ ಮತ್ತೆ  ಅವ್ರೆ, ಹೊಸಾ ಸುದ್ದಿ ಏನು ಅಂತಾ ಕೇಳುವಾ, ನೋಡ್ಲಾ, ನಮ್ಮನ್ನ ಒಳಿಕ್ಕೆ ಬಿಟ್ಟಿಲ್ಲ ಅಂದ್ ಮ್ಯಾಕೆ, ಇವರ ಸುದ್ದಿ ಯಾಕೆ ಬೇಕ್ಲಾ, ಇವರೇನು ದೇವರಾ, ನಾವು ಆರಿಸಿ ಕಳಿಸಿರೋದು ಕಲಾ ಅಂದ ಸಂಭು.ಮಗನೇ ಕತೆ ಹೇಳ್ಬೇಡಾ, ಸುದ್ದಿ ಹೇಳಲಾ ಅಂದೆ. ನಾವು ಮುಂದಕ್ಕೆ ಹೋದ್ರೆ ಪೊಲೀಸ್ನೋರು ತಡಿತಾರೆ, ಏನಾದ್ರೂ ಕೇಳಿದ್ರೆ, ಹುಚ್ಚುಚ್ಚಾಗಿ ಹೇಳ್ತಾರೆ, ಇವರನ್ನು ಕಟ್ಕಂಡು ನಮಗೇನು ಆಗೇಬೇಕು ಅಂದ ಸಂಭು. ಅಂಗಲಲ್ಲಾ ಟಿಆರ್್ಪಿ ಕಲಾ ಅಂದ್ ಮ್ಯಾಕೆ. ನೋಡಿ ಬಿಜೆಪಿ ರಾಜ್ಯಾಧ್ಯಕ್ಸ ಈಸ್ವರಪ್ಪನೋರು ರೇಣುಕಾಚಾರ್ಯ ಹುಡುಗ, ಹಾಗಾಗಿ ಏನೇನೋ ಹೇಳ್ತಾ ಇದಾರೆ. ಅವರಿಗೆ ಪಾರ್ಲಿಮೆಂಟ್ ಡಿಸಿಸನ್ ಅಂಗೇ ಹೈಕಮಾಂಡ್ ಅಂದ್ರೇ ಗೊತ್ತಿಲ್ಲ. ನಮ್ಮ ನಾಯಕರನ್ನ ಹೈ ಕಮಾಂಡ್ ತೀರ್ಮಾನ ಮಾಡ್ತಾರೆ ಅಂದ್ರು ಕಲಾ ಅಂದ. ಲೇ ಯಡೂರಪ್ಪನ ಕಡೆಯೋರು ರಾಸ್ಟ್ರ ನಾಯಕರಿಗೆ ಸ್ಟೇಟ್ ಮೆಂಟ್ ಕೊಟ್ಟು ಬಸ್ಸಲ್ಲಿ ಎಲ್ಲಿ ಹೋದ್ರಲಾ ಅಂದೆ, ಇದೀಗ ಬಸ್ಸು ಪೆಟ್ರೋಲ್ ಬಂಕ್್ಲ್ಲಿ ನಿಂತು ಪೆಟ್ರೋಲ್ ಹಾಕಿಸ್ತಾ ಅವ್ರೆ, ಆಮ್ಯಾಕೆ ಕ್ಲೀನರ್ ಕಟ್ಟಿಗೆ ಕಿಸ್ನ ಬೀಡಿ ಸೇದ್ತಾ ಅವ್ರೆ, ಆಮ್ಯಾಕೆ ಬಸ್ಸು ಯಡೂರಪ್ಪನ ಮನಗೆ ಹೊಂಟೈತೆ ಅಂದ ಸಂಭು. ಅಂಗಾರೆ ಇನ್ನೂ ಅಲ್ಲಿಗೆ ಬಂದಿಲ್ಲ ಅನ್ನು. ಇದೇನ್ಲಾ ನ್ಯೂಸು ಅಂದೆ. ಲೇ ಲೈವ್ ಅಂತಿಯಾ, ಇನ್ನೇನ್ಲಾ ಹೇಳಬೇಕು ಅಂದ.

ಈಗ ಎರಡು ನಿಮಿಸಿದ ಕೆಳಗೆ ಎಲ್ಲಾ ಹೇಳಿದೀನಿ , ಮತ್ತೆ ಫ್ಲಾಸ್ ನ್ಯೂಸ್ ಅಂದ್ರೆ ಇದೇ ಕಲಾ ಅಂದ,.ಲೇ ಯಡೂರಪ್ಪನ ಮಗ ರಾಘವೇಂದ್ರ  ಏನು ಹೇಳಿದ್ರಲಾ ಅಂದೆ. ಕೇಳ್ತೀನಿ ತಡಿಯಲಾ ಅಂದ ಸಂಭು, ಯಡೂರಪ್ಪ ರಾಜಿನಾಮೆ ಕೊಡಕ್ಕಿಲ್ಲಾ ಅಂದ್ರು ಅಂದ ಸಂಭು, ಲೇ ಯಾರ್ಲಾ ಹೇಳಿದ್ದು, ಲೇ ಹಿಂದಿ ಚಾನಲ್್ನೋರು ಹೇಳಿದ್ದು ಕಲಾ ಅಂದ. ಲೇ ಕನ್ನಡ ಚಾನಲ್್ಗೆ ಕೇಳಲಾ ಅಂದೆ.ಯಾಕ್ಲಾ, ಲೇ ಅವರು ನಮ್ಮನ್ನ ಮಂಗ ಮಾಡ್ತಾರೆ ಅಂದೆ. ಲೇ ಕನ್ನಡದೋರು ಹೇಳ್ತಾ ಇಲ್ಲಾ ಕಲಾ ಅಂದ. ಯಾಕ್ಲಾ, ಟಿ.ಆರ್.ಪಿ ಡವನ್ ಆಯ್ತದೆ ಅಂತಾ.

ಸರಿ ಒಂದು ಕೆಲಸ ಮಾಡು, ಯಡೂರಪ್ಪನ ಮನೆ ಹಿಂದೆ ಇರೋ ಗೋಡೆ ಹಾರಿ, ಒಳಿಕ್ಕೆ ಹೋಗಿ ಫ್ಲಾಸ್ ನ್ಯೂಸ್ ಕೊಡ್ಲಾ ಅಂದೆ. ಪಾಪ ಸಂಭು, ಖಾದಿ ಪ್ಯಾಂಟು, ಅಂಗೇ ಜುಬ್ಬ ಹಾಕ್ಕಂಡು ಗೋಡೆ ಹಾರಿ ಹೋಗವ್ನೆ, ಮಗಂಗೆ ಕೈ ಕಾಲು ತರುಚಿತ್ತು, ಯಾಕ್ಲಾ, ಲೇ ಕಾಂಪೌಂಡಿಗೆ ಗಾಜಿನ ಚೂರು ಹಾಕವ್ರಲಾ ಅಂದ. ಯಾರೋ ನಮ್ಮ ಪಾಲ್ಟಿ ಕಾರ್ಯಕರ್ತ ಅಂತ ಎಲ್ಲಾ ಸುಮ್ನಿದಾರೆ.  ಫುಲ್ ಫ್ಲಾಸ್ ನ್ಯೂಸ್, ಅಲ್ಲಿ ಈಸ್ವರಪ್ಪನೋರಿಗೆ, ಅನಂತು ಬಗ್ಗೆ ಮಾತಾಡಿದ್ದನ್ನು  ಲೈವ್ ಕೊಟ್ಟಿದ್ದ, ಆಮ್ಯಾಕೆ ಸಾನೇ ತಿನ್ನದನ್ನು ಲೈವ್ ಕೊಟ್ಟಿದ್ದ. ಜನ ಎಲ್ಲಾ ಟಿವಿ ಆಫ್ ಮಾಡಿ ಸಿದ್ದೇಸ ಟಿವಿ ನೋಡಕ್ಕೆ ಸುರು ಮಾಡಿದ್ರು, ಇದರಿಂದ ಬೇರೆ ಟಿವಿಯೋರಿಗೆ ಡೌಟು ಬಂದು ಒಳಿಕ್ಕೆ ಇದ್ದೋರಿಗೆ ಪೋನ್ ಮಾಡವ್ರೆ. ಮಗಾ ಆಗಲೇ ಅಲ್ಲಿಂದ ಎಸ್ಕೇಪ್ ಆಗಿ, ಅಸೋಕ ಹೋಟೆಲ್್ನಲ್ಲಿ ಮಾಣಿ ಆಗಿ ದೆಹಲಿ ವರಿಷ್ಠರ ಟೀಮಿಗೆ ತಿಂಡಿ ಸಪ್ಲೆ ಮಾಡೋ ತರಾ ಇದ್ದು, ಅಲ್ಲಿಂದಲೂ ಸಾನೇ ಸುದ್ದಿ ಕೊಟ್ಟಿದ್ದ, ಆಮ್ಯಾಕೆ ಬಿಜೆಪಿ ಕಚೇರಿಗೆ ಮಂಡ್ಯದ ಕಾರ್ಯಕರ್ತ ಅಂತ ಹೇಳಿ ಒಳಿಕ್ಕೆ ಹೋಗಿದ್ದ.
ಜನ ಎಲ್ಲಾ ಜಾಹಿರಾತು ಬೇಡ ನ್ಯೂಸ್ ಬೇಕು ಅನ್ನೋವು. ನಾನು ಫುಲ್ ಖುಷ್ ಆಗಿ, ಮುಕ್ಕಮಂತ್ರಿ ರಾಜಿನಾಮೆ ಕೊಡಲೆಬೇಕು ಅಂತ ಹೇಳಿದ್ದೇ ಹೇಳಿದ್ದು. ಇರೋಧ ಪಕ್ಸದೋರು ಪೋನ್ ಮಾಡಿ ಸಾನೇ ಹೊಗಳಿದ್ದೇ ಹೊಗಳಿದ್ದು, ಆಮ್ಯಾಕೆ ನಿಮಗೂ ಐತೆ ಹಬ್ಬ ಅಂದ್ ಮ್ಯಾಕೆ ಪೋನ್ ಕಟ್ಟು ಮಾಡೋರು. ಮತ್ತೇನಾದರೂ ಇಸೇಸ ಸುದ್ದಿ ಐತೇನ್ಲಾ ಅಂತ ಸಂಭುಗೆ ಪೋನ್ ಮಾಡ್ದೆ, ನೋಡ್ಲಾ ಇಲ್ಲಿ, ಈಸ್ವರಪ್ಪ ಅಂಗೇ ಜಗದೀಸ ಸೆಟ್ಟರು ಮಾತಾಡ್ತಾ ಅವ್ರೆ ಅಂತಿದ್ದಾಗೆನೇ ದಬು, ದುಬು ಅಂತ ಹೊಡೆಯೋ ಸವಂಡ್ ಬಂತು, ನಾನು ಮೈಕ್ ಪ್ರಾಬ್ಲಮ್ ಆಗಿರಬೇಕು ಅಂತ ಕಟ್ ಮಾಡಿದೆ.
ನೋಡಿದ್ರೆ, ಯಾವನಿಗೋ ಇವನು ಟಿವಿ ವರದಿಗಾರ ಅಂತಾ ಡೌಟ್ ಬಂದು ಸಾನೇ ಜಬ್ಬಿದ್ರು, ಮಗಂದು ಮುಖ ಅನ್ನೋದು ಜಖಂ ಆಗಿರೋ ಬಸ್ ಇದ್ದಂಗೆ ಇತ್ತು. ಆಫೀಸಿಗೆ ಸಂಭು ಬಂದ, ಯಾರಪ್ಪಾ ನೀನು ಅಂದ ನಮ್ಮ ಬಾಸು, ನಾನು ಸಾ ಇಸೇಸ ವರದಿಗಾರ ಅಂದ. ಯಾವುದಕ್ಕೂ ಡಿಎನ್್ಎ ಟೆಸ್ಟ್ ಮಾಡಿಸಿ ಕನ್್ಫರ್ಮ್ ಮಾಡ್ಕಳ್ಳಿ ಅಂದ ನಮ್ಮ ಗುಬಾಲ್ ಬಾಸು. ಟಿವಿ ಟೇಸನ್ನಿಗೆ ಕಾರ್ಯಕರ್ತರು ಯಾವಾಗ ಬೇಕಾದರೂ ಬರಬಹುದು ಎಂದು ಪೊಲೀಸ್ ಹಾಕಿಸ್ಕಂಡಿದ್ವಿ. ರೀ ಮುಕ್ಕಮಂತ್ರಿಗೆ ಪೊಲೀಸ್ನೋರು ಕಮ್ಮಿ ಆಗವ್ರೆ, ಇನ್ನು ನೀವು ಬೇರೆ ಅನ್ನೋವು ಪೊಲೀಸ್ನೋರು, ಕಡೆಗೆ ಬೈಟು ಮಟನ್ ಬಿರಿಯಾನಿ ತರಿಸಿದ ಮ್ಯಾಕೆ ಸುಮ್ಕಾದ್ರು.
ಈಗ ಎಲ್ಲೇ ಲೈವ್ ಇದ್ರೆ ಸಂಭು ಹೆಲ್ಮೆಟ್ ಹಾಕ್ಕಂಡು ಹೋಯ್ತಾನೆ. ಯಾರಿಗಾದರೂ ಡೌಟ್ ಬಂದರೆ, ಜನರು ಮಧ್ಯೆ ಹೋಗಿ ನಿಂತ್ಕಂತಾನೆ. ಹಂಗೇ ಆಂಬುಲೆನ್ಸ್ ನಂಬರ್ ಯಾವಾಗ್ಲೂ ಡಯಲ್ ಮಾಡಕ್ಕೆ ರೆಡಿ ಮಾಡ್ಕಂಡಿರ್ತಾನೆ. ಏನಾದರೂ ಉಲ್ಟ ಮಾತಾಡಿ ಸಿಕ್ಕಂಡರೆ, ತಕ್ಸಣ ಇರೋಧ ಪಕ್ಸದೋರು ಹೆಸರು ಹೇಳ್ತಾನೆ ಬಡ್ಡೆ ಐದ.
ಈಗ ಮುಂದಿನ ಕಾರ್ಯಕ್ರಮ ಯೋಗಾಸನದಲ್ಲಿ ಉಸಿರಾಡುವುದು ಹೇಗೆ, ನಡೆಸಿಕೊಡಲಿದ್ದಾರೆ ಇಲ್ಲೇ ಹತ್ತಿರದಲ್ಲಿರುವ ಮಠದ ಶ್ರೀ ಶ್ರೀ ಶ್ರೀ ಚಂಗೂಲಿ ಸಾಮಿ ಅಲಿಯಾಸ್ ರೌಡಿ ಸೀನ.