ನಾನಾಗಿರದ ನಾನು,ನಾನಾಗಿದ್ದು!

ನಾನಾಗಿರದ ನಾನು,ನಾನಾಗಿದ್ದು!

ಕವನ
(ಒಬ್ಬ ಉತ್ತಮ ಮನುಷ್ಯರಾಗಬೇಕಾದರೆ,ತಂದೆ-ತಾಯಿಯರ,ಗುರು-ಹಿರಿಯರ,ಗೆಳೆಯರ,ಬಂದುಗಳ ಸಲಹೆ ಸಹಕಾರ ಬೇಕೇ ಬೇಕು.ಇವರ ಒಡನಾಟದಿಂದ ಸಾಮಾನ್ಯನೊಬ್ಬ ಒಬ್ಬ ಮನುಷ್ಯ ಹೇಗಾಗ ಬಲ್ಲ ಎಂಬುದನ್ನು ಈ ಕವಿತೆಯಲ್ಲಿ ಹೇಳಲು ಪ್ರಯತ್ನಿಸಿದ್ದೇನೆ.) ಇಂದು ನಾನು,ನಾನಾಗಿರುವೆನೆಂದರೇ ಅದು ನಿಮ್ಮಿಂದ. ಇಂದು ನಾನು ನನ್ನದೇ ಎಂದು ಕೊಂಡಿರುವುದೆಲ್ಲ ನಿಮ್ಮದೇ. ಅಂದು ನಾನು ನಾನಾಗಿರದ ಕಾಲದಲ್ಲಿ ನಾನಲ್ಲದ ನನ್ನನ್ನು 'ನಾನು' ಎಂದಾಗಿಸಿದ್ದು ನೀವು. ನಾನು ನಾನಾಗಲು ನೀವು ಅಂದು ಏನೆಲ್ಲಾ ಮಾಡಿದಿರಿ. ನೀವು ನಿಮ್ಮ ಅನುಭವವ ನನ್ನದಾಗಿಸಿದಿರಿ. ಹೋಗಲಾರೆನೆಂದರೂ ಏಳೆದುಕೊಂಡು ಹೋಗಿ ಅಕ್ಷರ ಕಲಿಸಿದಿರಿ. ಜಗದಚ್ಚರಿಯ ಕಂಡು ಬೆರಗುಗೊಂಡ ಕಣ್ಣಿಗೆ ಉತ್ತರವಾದಿರಿ. ನೀವೂ ಬರೆದಿರಿ,ಹಾಡಿದಿರಿ,ಬಿಡಿಸಿದಿರಿ, ಎಲ್ಲವ ತೆರೆದಿಟ್ಟಿರಿ. ನೀವು ಕಣ್ಣಾದಿರಿ,ಕಿವಿಯಾದಿರಿ,ಮನವೇ ಆದಿರಿ. ನಾನು ನೀವಾಗುವ ಬರದಲ್ಲಿ ನೀವು ನಾನಾಗಿ,ಕೊನೆಗೆ ನಾನು ನಾನಾಗುವಂತೇ ಮಾಡಿದಿರಿ.

Comments