ಮೇರಿ ಲಯನ್ (Mary Lyon) ಮತ್ತು ಎಕ್ಸ್ ವರ್ಣತಂತುವಿನ ಯಾದೃಚ್ಛಿಕ ನಿಷ್ಕ್ರಿಯತೆ

ಮೇರಿ ಲಯನ್ (Mary Lyon) ಮತ್ತು ಎಕ್ಸ್ ವರ್ಣತಂತುವಿನ ಯಾದೃಚ್ಛಿಕ ನಿಷ್ಕ್ರಿಯತೆ

೧೯೨೫ರಲ್ಲಿ ಹುಟ್ಟಿದ ಮೇರಿ ಲಯನ್ ಬ್ರಿಟಿಶ್ ವಿಜ್ಞಾನಿ. ಕಾಂಬ್ರಿಜ್ಜಿನಲ್ಲಿ ಅವರು ಪದವಿ ಪೂರೈಸಿದಾಗ ಮಹಿಳೆಯರಿಗೆ ಪದವಿ ನೀಡುವ ಪದ್ಧತಿಯಿರಲಿಲ್ಲ. ಮುಂದೆ ಅವರು ಕಾಂಬ್ರಿಜ್ಜಿನಲ್ಲಿಯೇ ಆರ್ ಎ ಫಿಷರ್ ಅವರ ಮಾರ್ಗದರ್ಶನದಲ್ಲಿ ಡಾಕ್ಟೊರೇಟ್ ಅನ್ನು ಪಡೆದರು.
ಈಗ್ಗೆ ಐವತ್ತು ವರ್ಷಗಳ ಹಿಂದೆ ೧೯೬೧ರಲ್ಲಿ ಹೆಸರಾಂತ 'ನೇಚರ್' ಪತ್ರಿಕೆಯಲ್ಲಿ ಮೇರಿ ಲಯನ್ ಅವರು 'ಎಕ್ಸ್ ವರ್ಣತಂತುವಿನ ಯಾದೃಚ್ಛಿಕ ನಿಷ್ಕ್ರಿಯತೆ' ಸಿದ್ಧಾಂತವನ್ನು ಪ್ರಕಟಿಸಿದರು. ಈ ಸಿದ್ಧಾಂತವು ಅನುವಂಶೀಯ ಕ್ಷೇತ್ರದಲ್ಲಿ ಬಹಳ ಮಹತ್ವದ್ದಾಗಿದ್ದು, ಇದಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಸಹ ಮನ್ನಣೆಯಿದೆ. ಚಿಕ್ಕದಾಗಿ ಹೇಳುವುದಾದರೆ, ಈ ಸಿದ್ಧಾಂತದ ಪ್ರಕಾರ ಎರಡು ಎಕ್ಸ್ ವರ್ಣತಂತುಗಳಿರುವ ಜೀವಕೋಶಗಳಲ್ಲಿ ಒಂದು ಎಕ್ಸ್ ವರ್ಣತಂತು ಮಾತ್ರ ಕಾರ್ಯಶೀಲವಾಗಿರುತ್ತದೆ. ಇದನ್ನು 'ಲಯನೈಸೇಶನ್' ಎಂದೇ ಕರೆಯಲಾಗುತ್ತದೆ.

ಈ ಕುರಿತು ಇನ್ನಷ್ಟು ಬರೆಯವ ಮನಸ್ಸಿದೆ. ಪ್ರತಿಕ್ರಿಯೆಗಳನ್ನು ಆಧರಿಸಿ. :-) ಈ ಹಿಂದೆ ಸಹ ಕೆಲವು ಲೇಖನಗಳನ್ನು ಹೀಗೆ ಆರಂಭಿಸಿ, ಮುಂದುವರೆಸಲು ಸಾಧ್ಯವಾಗಿಲ್ಲ; ಈ ಸಲ ಏನಾಗುತ್ತೆ ನೋಡೋಣ!

Comments