ಶ್ರೀ ನರಹರಿಯ ಮಾಯೆಯ ಆಟ-2

ಶ್ರೀ ನರಹರಿಯ ಮಾಯೆಯ ಆಟ-2

ಶ್ರೀನರಹರಿಯ ಮಾಯೆಯ ಆಟ

ನೀ ನೋಡುತಿಹ ಈ ಜಗದ ನೋಟ

ನಡೆಯುತಿಹ ಎಲ್ಲದಕೂ ಅವನೇ ಕಾರಣನು

ಬಡತನವ ಸಿರಿತನವ ಅವನೇ ನೀಡುವನು

 

ಬಡತನ ಬಂತೆಂದು ದೇವನನು ಜರಿಯದೆಲೆ

ಸಿರಿತನ ಬಂದಾಗ ಗರ್ವದಲಿ ಮೆರೆಯದೆಲೆ

ಬಾಳ್ವೆಯ ನಡೆಸಿದರೆ ನೀ ಇರುವತನಕ

ಬಿಡದೆ ಸಲಹುವನು ಶ್ರೀ ನರಸಿಂಹ ಜನಕ
Rating
No votes yet

Comments