ಕೊಂಕು ನೋಟದವಳ ಜಾಣ್ಮೆ
ಮೋಡಿಗೊಳಿಸುವರು ಅಮಲೇರಿಸುವರು
ಮೇಲೆ ಕಟಪಟೆಯ ಕಟಕಿಯಾಡುವರು;
ಭಯವಡಗಿಸುವರು ರಮಿಸಿ ಸುಖಿಸುವರು
ಜೊತೆಗೆ ನೀಗದಿಹ ನೋವನೂ ನೀಡುವರು;
ಜೊತೆಗೆ ನೀಗದಿಹ ನೋವನೂ ನೀಡುವರು;
ಈ ಬೆಡಗಿಯರು ತಮ್ಮ ಕೊಂಕುನೋಟದಲೆ
ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು
ಅದೇನೇನ ಮಾಡುವರು? ಏನೇನ ಮಾಡಾರು?
ಅದೇನೇನ ಮಾಡುವರು! ಏನೇನ ಮಾಡಾರು !
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ):
ಸಮ್ಮೋಹಯಂತಿ ಮದಯಂತಿ ವಿಡಂಬಯಂತಿ
ನಿರ್ಭರ್ತ್ಸಯಂತಿ ರಮಯಂತಿ ವಿಷಾದಯಂತಿ |
ಏತಾಃ ಪ್ರವಿಶ್ಯ ಸದಯಂ ಹೃದಯಂ ನರಾಣಾಮ್
ಕಿನ್ನಾಮ ವಾಮನಯನಾ ನ ಸದಾಚರಂತಿ ||
ಸಮ್ಮೋಹಯಂತಿ ಮದಯಂತಿ ವಿಡಂಬಯಂತಿ
ನಿರ್ಭರ್ತ್ಸಯಂತಿ ರಮಯಂತಿ ವಿಷಾದಯಂತಿ |
ಏತಾಃ ಪ್ರವಿಶ್ಯ ಸದಯಂ ಹೃದಯಂ ನರಾಣಾಮ್
ಕಿನ್ನಾಮ ವಾಮನಯನಾ ನ ಸದಾಚರಂತಿ ||
-ಹಂಸಾನಂದಿ
Rating