ಬಾರದಿರು ಸಖೀ, ತೆರೆದ ಆಗಸದಡಿಗೆ!

ಬಾರದಿರು ಸಖೀ, ತೆರೆದ ಆಗಸದಡಿಗೆ!

ಬಾರದಿರು ಸಖೀ, ತೆರೆದ ಆಗಸದಡಿಗೆ!

 

ಬೆಳದಿಂಗಳ ರಾತ್ರಿಯಲ್ಲಿ
ಬಾರದಿರು ಸಖೀ ನೀನು
ತೆರೆದ ಆಗಸದ ಅಡಿಗೆ,
ನಿನ್ನಂದವನ್ನು ಕಂಡು
ಕಣ್ಣು ಮಿಟುಕಿಸುತ್ತವೆ
ಆ ತಾರೆಗಳು ಅಡಿಗಡಿಗೆ;

ನಗುವನು ಆ ಚಂದಿರ
ಹೆಚ್ಚಿಸಿ ತನ್ನ ಬೆಳಕಿನಿಂದ
ನಿನ್ನ ಸೌಂದರ್ಯವನ್ನು,
ಆದರೆ ತಾರೆಗಳ ಕಣ್ಣಾಟ
ಆ ಕಳ್ಳಾಟ ಹೆಚ್ಚಿಸುತ್ತದೆ
ನನ್ನೀ ಮನದ ದುಗುಡವನ್ನು!
******

Rating
No votes yet

Comments