ಒಡೆಯನ ವಡೆ !!

ಒಡೆಯನ ವಡೆ !!

ಕುರುಕ್ಷೇತ್ರ ಯುದ್ದ ಮುಗಿದು ದುರ್ಯೋಧನನೂ ಕೆಳಗುರುಳಿದ ಸಮಯ..... ಶೂನ್ಯನಾಗಿ ಸಂಜಯನನ್ನು ಕೇಳುತ್ತಾನೆ "ಇಷ್ಟೆಲ್ಲ ಹೇಗಾಯ್ತು?".

ಸಂಜಯ ಏನು ಹೇಳುತ್ತಿದ್ದನೋ ಏನೂ, ನಾನು ಹೀಗೆ ಹೇಳುವೆ:-

ಒಡೆಯ
ಕುರುಕುಲದ ಒಡೆಯ
ನೀ ಕುರುಡೊಡೆಯ
ಪುತ್ರಮೋಹದ ಕುರುಡೊಡೆಯ

ಆ ನಿನ್ನ ಕಿರಿಯ ಒಡೆಯ
ತುಳಿಸಿದ್ದ ದ್ವೇಷದ ಹೆಡೆಯ
ಒಡ್ಡಿದ್ದ ಪ್ರಗತಿಗೆ ತಡೆಯ
ಕೊಡದೆ ಕೇಳಿದಷ್ಟು ಎಡೆಯ
ಎಳೆಸಿದ್ದ ಬೆಂಕಿಯ ಜಡೆಯ
ತಟ್ಟಿದ್ದ ಕೊಬ್ಬಿದ ತೊಡೆಯ
ಕಡೆವರೆಗೆ ಬಿಡದೆ ಭಿಡೆಯ
ಕಳಿಸಿದ್ದ ಯೋಧರ ಪಡೆಯ

{ಕವನದ ಗಂಭೀರತೆ ಉಳಿಸಿಕೊಳ್ಳಲು, ತಿಳಿ ಹಾಸ್ಯವನ್ನು ತೆಗೆದು ಹಾಕಿದ್ದೇನೆ ...}

Comments