ಮಳೆ ಬಂದರೇನು...ಬಾ...!

ಮಳೆ ಬಂದರೇನು...ಬಾ...!

ಮಳೆ ಬಂದರೇನು...ಬಾ...!

ಹಗಲಿರುಳು ನಾನು ಕಾದರೂ
ಬರುತ್ತಿಲ್ಲ, ಸಖೀ, ನೀ ಮನೆಯಿಂದಾಚೆಗೆ
ಮಳೆಯ ಸಬೂಬು ನೀಡಿ
ಕೂತಿಹೆ ಯಾಕೋ ಒಳಗೇ ನೀ ಬೆಚ್ಚಗೆ

ಮಳೆಗಾಲದ ಈ ಬವಣೆಯಿಂದ
ಬಚಾವಾಗಲು ಇಲ್ಲಿದೆ ಉಪಾಯ,
ನನ್ನ ಮಾತ ನೀ ಕೇಳಿದರೆ
ಒಂದಿಷ್ಟೂ ನೆನೆಯದೆಮ್ಮ ಕಾಯ;

ಎತ್ತರದ, ಹೂಂ... ಎಲ್ಲಕ್ಕಿಂತಲೂ
ಎತ್ತರದ ಮೇಘಗಳ ಮೇಲೇರಿ,
ಎಲ್ಲರ ಕಣ್ ತಪ್ಪಿಸಿ ನಾವು
ಮಾಡೋಣ ಪುಕ್ಕಟೆ ಸವಾರಿ!
********

Rating
No votes yet

Comments