ಮಂಡ ಮೂಗಿನ ಸುಂದರ ಒಡತಿ.

ಮಂಡ ಮೂಗಿನ ಸುಂದರ ಒಡತಿ.

 ಜಗತ್ತಿನಲ್ಲಿ ನೂರಾರು ಜನ ,ತರ ತರಹದ ಮೂಗುಗಳು . ನೇರ ಮೂಗು, ಗಿಳಿ ಮೂಗು ,  ಡೊಂಕು ಮೂಗು, ಚಪ್ಪಟೆ ಮೂಗು ಇತ್ಯಾದಿ ಇತ್ಯಾದಿ .

 
ಚಿಕ್ಕಂದಿನಲ್ಲಿ ನನ್ನ ಮೂಗು ನೋಡಿದ ಸೊ ಕಾಲ್ಡ್  ರಿಲೇ ಟಿವ್ಸು '  ಏನವಾss..  ನಿನ್ನ ಮೂಗಿನ ಮ್ಯಾಲೇ ವ್ಯಾನು  ಹಾದು ಹೋಗೆದೇನು!!!?'
ಅಂತ ಚೇಷ್ಟೆ  ಮಾಡಿ ನಗ್ತಾ ಇದ್ರು. ಇನ್ನು ನಾನು ಮೂರನೇ ಕ್ಲಾಸಿನಲ್ಲಿ ಇದ್ದಗಾ ನಮ್ಮ ಟೀಚರ್ರು ನಾನೇನಾದ್ರು ತಪ್ಪು ಮಾಡಿದ್ರೆss 
' ಏ ಮುಕಡಿ  ಸುಮ್ಮ ಕೂಡು  ಹೋಗು.. ' ಅಂತ ಬೈತಿದ್ರು . 'ಮುಕಡಿ ಅನ್ನೋ ಶಬ್ದದ ಅರ್ಥಾ ತಿಳೀದೇ   ಹೋದ್ರು ಟೀಚರ್ರು ಬೈದ್ರಲ್ಲ ಅನ್ನೋ
ದುಕ್ಖಕ್ಕೆ  ತಲೆ ತಗ್ಗಿಸ್ಕೊಂಡು ತೆಪ್ಪಗೆ ಕೂತ್ಕೊತಾ ಇದ್ದೆ.
 
ಇನ್ನು.. ಮನೇ ಒಳಗೆ ನನ್ನ ಸೋದರಮಾವ  ಯಾವಾಗಲೂ  ಎಂ ಎಂ ಎಂ ಎಂ(ಮಂಡ ಮೂಗಿ) ಅಂತಾ ನನ್ನಾ ರೇಗಿಸ್ತಾss.. ಇದ್ದ  .
ನನ್ನ ಕಾಡ್ಸಿ ಕಾಡ್ಸಿ ಮಜಾ ಬೇರೆ  ತೊಗೊತಾ ಇದ್ದ .ಮೂಗಿನ ತುದಿ ಮೇಲೆ ಕೋಪದ ವಾಸ ಅಂತ ಹೇಳ್ತಾರೆ . ಇನ್ನು ನಂದಂತೂ ಮಂಡ ಮೂಗು,
ಆ ಕೋಪಕ್ಕೆ ವಾಸಮಾಡಲು ತುಂಬಾss  ಪ್ರಶಸ್ತವಾದ ಜಾಗ ......ಅದ್ಕೆ ಇರ್ಬೇಕು ಯಾವಾಗ್ಲೂ ಅವನ್ ಜೊತೆ ಜಗಳಾ ಇದ್ದೇ ಇರ್ತಿತ್ತು.
 
ಸ್ವಲ್ಪ ದೊಡ್ಡವಳಾದ ಮೇಲೆ ಯೋಚನೆ ಮಾಡಿದೆ.... ಮೂಗು ಹೇಗೇ ಇರ್ಲಿ ತನ್ನ ಕೆಲ್ಸಾ ಅಂತು ಕರೆಕ್ಟಾಗಿ  ಮಾಡ್ತಾ ಇದೆಯಲ್ಲಾ  ಅಷ್ಟು ಸಾಕು ಅಂತ
ಯಾರು ಏನೇ ಅಂದ್ರು ತಲೆ ಕೆಡಿಸಿಕೊಳ್ದೆ ' ಈ ಅಂದದ  ಮೂಗಿನ ಸುಂದರ ಒಡತಿ ನಾssನೇ  ' ಅಂದ್ಕೊಂಡು ಮನಸ್ಸು ಹಗುರ ಮಾಡ್ಕೊಂಡೆ.
 
ಈ ಎಂ ಎಂ ಪ್ರಭಾವದಿಂದಾನೋ  ಏನೋ ನನ್ನ ಮದುವೆ ಅಂದುಕೊಂಡದ್ದಕ್ಕಿಂತಾ  ಸ್ವಲ್ಪ ತಡವಾಗಿಯೇ  ಆಯ್ತು.    
ಆದರೂ ಪತಿ ಜೊತೆಗಿರೋವಾಗಾ ಈ ಎಂ ಎಂ ವಿಷಯ ಎಲ್ಲಾ ಮರ್ತೇ ಹೋಗಿತ್ತು.
ಮುಂದೆ ವರ್ಷದೊಳಗೆ ಮುದ್ದಿನ ಮಗಳು ನನ್ನ  ಮಡಿಲು ಸೇರಿದಾಗ ನನಗೆ ಮೊದಲು ಕಂಡದ್ದು ಅದೇss..  ಆ ಮಂಡ ಮೂಗು..
ಮರ್ತೇ ಹೋಗಿದ್ದ ಆ  ಹಳೇs  ಎಂ ಎಂ ಕಥೆ ಮತ್ತೆ ನೆನಪಾಯ್ತು  ಮತ್ತದೇ ಎ ಬಿ ಸಿ ಡಿ ಶುರುವಾಯಿತಲ್ಲಪ್ಪಾss   ಎಂದು ಹಣೆಯ ಮೇಲೊಂದು  
ಪುಟ್ಟ ನೆರಿಗೇನೂ ಮೂಡ್ತು .ಆದ್ರೆ ಮತ್ತೆ ನೆನಪಾಯ್ತು ಮೂಗು ಹೇಗೇ ಇರ್‍ಲಿ ತನ್ನ ಕೆಲ್ಸಾ ಅಂತೂ ಸರಿಯಾಗಿ ಮಾಡ್ತಾ ಇದೆಯಲ್ಲಾ ಅಷ್ಟು ಸಾಕು...
 
                                                                                                                         
"  ಎಷ್ಟೇ ಆದ್ರೂss ಅವಳು ನನ್ನ ಮಗಳಲ್ಲವೇ..ನಾನು ಹೆತ್ತ ಮಗಳು ಬಳುವಳಿಯಾಗಿ ಪಡೆದದ್ದು ನನ್ನ ಮೂಗಲ್ಲವೇ...!!! " ಇಷ್ಟು ಯೋಚ್ನೆ ಬಂದದ್ದೇs ತಡಾs..  
ಆ ಹಣೇ ಮೇಲೆ ಮೂಡಿದ ಹಳೇ  ನೆರಿಗೆ ಮಾಯ ಆಯ್ತು   ಹಾಗೇss ಮುಖದ ಮೇಲೆ  ಒಂದು ಪುಟ್ಟ ಹೊಸ ನಗೆ ಮೂಡಿ ಬಂತು.
 
 
   


Rating
No votes yet

Comments