ಇಂಕ್ ಸ್ಕೇಪ್ (Inkscape) ಉಪಯೋಗಿಸಿ.

ಇಂಕ್ ಸ್ಕೇಪ್ (Inkscape) ಉಪಯೋಗಿಸಿ.

ನಮ್ಮೆಲ್ಲರಲ್ಲೂ ಕ್ರಿಯಾತ್ಮಕತೆ ಇದೆ. ಬಣ್ಣದೊಡನೆ ಆಡುವ ಮನಸಿದೆ..ಕಲ್ಪನೆಯನ್ನು ಚಿತ್ರರೂಪಕ್ಕಿಳಿಸುವ ಇಚ್ಛೆಯಿದೆ.. ಆದರೆ ನಿಜ ಬಣ್ನಗಳ ಸಹವಾಸವನ್ನು ಯಾವ್ಯಾವುದೋ ಕಾರಣಕ್ಕೆ ದೂರ ಇಟ್ಟಿದ್ದೇವೆ. ಇಷ್ಟಾಗಿಯೂ ಕಲೆಯ, ಕಲಾವಿದರ ಬಗ್ಗೆ ಯಾವಾಗಲೂ ನಮಗೊಂದು ಸುಂದರ ಅಸೂಯೆ!. 

ಬನ್ನಿ ನಮ್ಮೀ  ಅಸೂಯೆಯನ್ನು ಹರಿಯ ಬಿಡಲು ಒಂದು ದಾರಿ ಕಂಡುಕೊಳ್ಳೋಣ..ಪಿ.ಸಿ ಯನ್ನು ಉಪಯೋಗಿಸಿ ಬಣ್ಣಗಳ ಅಟವಾಡೋಣ..ಕಲ್ಪನೆಯನ್ನು ಹರಿಯಬಿಡೋಣ. ಇಲ್ಲಿ  ಇಂಕ್ ಸ್ಕೇಪ್ ತತ್ರಾಂಶ ಉಪಯೋಗಿಸಿ ನಾನು ಬಿಡಿಸಿದ ಕೆಲವು ಚಿತ್ರಗಳನ್ನು ಕೊಟ್ಟಿದ್ದೇನೆ.   ಇಂಕ್ ಸ್ಕೇಪ್ ಒಂದು ಒಪನ್ ಸೋರ್ಸ ತತ್ರಾಂಶ. ಬಳಸಲು ನೀವು ಹಣ ಕೊಡಬೇಕಾಗಿಲ್ಲ. ಇದು ನಾವು ಹಣ ಕೊಟ್ಟು ಕೊಳ್ಳ ಬೇಕಾದ ಕೊರೆಲ್ ಡ್ರಾ, ಇಲ್ಲಸ್ಟ್ರೇಟರ್ ತತ್ರಾಂಶಗಳಿಗೆ ಸಮಾನವಾದದ್ದು. ಆರಂಭದಲ್ಲಿ ಸ್ವಲ್ಪ ಗೊಂದಲ ಎನಿಸಿದರೂ, ಹತ್ತು ದಿನಗಳಲ್ಲಿ ನೀವು ಇಂಕ್ ಸ್ಕೇಪ್ ಅಂಗಳದಲ್ಲಿ ಆಟವಾಡಲು ಸುರು ಮಾಡುತ್ತೀರಿ. ನಿಮಗಿದನ್ನು ಕಲಿಸುವ ನಿಟ್ಟಿನಲ್ಲಿ ನೆಟ್ ನಲ್ಲಿ ಬೇಕಾದಷ್ಟು ಚಿತ್ರಸಮೇತ ಪಠ್ಯಗಳಿವೆ.

ಟ್ರೈ ಮಾಡಿ :). 

ಇಂಕ್ ಸ್ಕೇಪ್ ನ್ನು ಇಳಿಸಿಕೊಳ್ಳಲು ಕೊಂಡಿ.

http://inkscape.org/

butterfly

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 ( ಮೇಲಿನ ಚಿತ್ರಗಳು ನನ್ನ ಮೌಸಕುಂಚದಿಂದ ಬಂದಂತವು..ಬೆಸಿಕ್ ಚಿತ್ರಗಳಿವು. ಸುಮಾರು ಇಪ್ಪತ್ತರಿಂದ-ಮೂವತ್ತು ನಿಮಿಷಗಳಲ್ಲಿ ಮುಗಿಸಬಹುದಾದಂತವು. ಒಮ್ಮೆ ನೀವು ಇಂಕ ಸ್ಚೇಪ್ ನಲ್ಲಿ ಕೊಂಚ ಪಳಗಿದ ಮೇಲೆ, ಸ್ವಲ್ಪ ತಾಳ್ಮೆ ಮತ್ತು ಸಮಯ ಬೇಡುವಂತಹ ಈ ಕೆಳಗಿನ ಚಿತ್ರದಂತವುಗಳನ್ನು ಬಿಡಿಸಬಹುದು. ಕೆಳಗಿನ ಚಿತ್ರ ಬನವಾಸಿಯ ಮಧುಕೇಶ್ವರ ದೇವಾಲಯದ್ದು. )

 

Rating
No votes yet

Comments