ಯಾವ ಜನ್ಮದ ನಂಟೋ ಕಾಣೆ ನಾನು

ಯಾವ ಜನ್ಮದ ನಂಟೋ ಕಾಣೆ ನಾನು

ಕವನ

 


ಪ್ರೀತಿಗೂ ಮುಂಗಾರಿಗೂ ಎಂಥ ಮಧುರ ಸಂಬಂಧ 
ಬಿಡಿಸಲಾಗದಂತದ್ದು ಸಡಿಲಿಸಲಾಗದಂತದ್ದು,
ಬಿಡಿಸಿದರೆ ಮತ್ತೆ ಸೇರಿಸಲಾಗದಂತದ್ದು,
ಅದೆಂಥಾ ನಂಟು ಈ ಮುಂಗಾರಿಗೆ?!!

ಇನಿಯನ ನೆನಪಾಗುವುದು ಮುಂಗಾರಿನಲ್ಲೇ,
ಪ್ರೀತಿಯ ಕೊಂಡಿ ಬೆಸೆಯುವುದು, ಬೆಸೆದದ್ದು;
ಗಟ್ಟಿಯಾಗುವುದು ಮುಂಗಾರಲ್ಲೇ.
ಅದೆಂಥಾ ಮಾಯೆ ಈ ಮುಂಗಾರಲ್ಲಿ?!!!

ಎಲ್ಲೋ ಹೋದಾಗ ಎಂದೋ ನೋಡಿದ 
ಅಪರಿಚಿತ ಮುಖವೊಂದು ಪರಿಚಿತವಾಗಿ;
ಪರಿಚಯ ಸ್ನೇಹ/ಪ್ರೇಮವಾಗುವುದು ಮುಂಗಾರಿನಲ್ಲೇ,
ಅದೆಂಥಾ ಶಕ್ತಿ ಈ ಮುಂಗಾರಿಗೆ?!!!!

ಬೋರೆಂದು ಸುರಿವ ಮಳೆಯಲ್ಲಿ 
ಇನಿಯನ ತೋಳ್ತೆಕ್ಕೆಯಲ್ಲಿ ಬಂದಿಯಾಗಿ 
ಬೆಚ್ಚನೆಯ ಪ್ರೀತಿ ಪಡೆವುದು ಮುಂಗಾರಲ್ಲಿ 
ಆಹಾ! ಎಂಥಾ ಸುಖ ಈ ಮುಂಗಾರು ಮಳೆಯಲ್ಲಿ ?!!!!!

 

Comments