ಸುಖ-ದುಃಖದ ಮಾಯೆ (ಶ್ರೀನರಸಿಂಹ-3)

ಸುಖ-ದುಃಖದ ಮಾಯೆ (ಶ್ರೀನರಸಿಂಹ-3)

ಸುಖ ದುಃಖ ಗಳೆರಡು

ಮನಸಿನ ಕಲ್ಪನೆಯು

ತನ್ನಂತೆ ನಡೆದಾಗ ಅದನೆ

ಸುಖವೆಂದೆಣಿಸಿ, ನಡೆಯದಿರೆ

ಮನ ಅದನೆ ದುಃಖವೆಂದೆಣಿಪುದು

 

ಸುಖ ದುಃಖಗಳನುಭವಿಸುವವ ಭೋಗಿ

ಸಮಚಿತ್ತದಲಿ ನೋಡುವನು ಯೋಗಿ

ಜೀವನದ ಪಥದಲ್ಲಿ ಆಗು ನೀಯೋಗಿ

ಇದಕಾಗಿ ಶರಣಾಗಲೇ ಬೇಕು ನೀ

ಶ್ರೀ ನರಸಿಂಹನಿಗೆ ಶಿರಬಾಗಿ
Rating
No votes yet

Comments