ಕನ್ನಡತನ

ಕನ್ನಡತನ

೧೯೪೬ ರ ಅ.ನ.ಕೃ. ಅವರ ಲೇಖನದ ಬಗ್ಗೆ ಓದುತ್ತಾ ನಾವು ಕನ್ನಡಿಗರು ಎಲ್ಲಿ ಎಡವುತ್ತಿದ್ದೇವೆ ಎಂದು ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ವಿದು ಎನಿಸುತ್ತದೆ. ಎರಡುಜನ ತಮಿಳರು ಅಥವಾ ಅನ್ಯ ಬಾಷೆಯಜನ ಮೂರನೆಯವರು ಕನ್ನಡಿಗನಾಗಿದ್ದರೂ ನಿರ್ದಾಕ್ಷಣ್ಯವಾಗಿ ಅವರ ಬಾಷೆಯಲ್ಲಿ ಮಾತಾಡಿ ಕೊಳ್ಳುತ್ತಾರೆ. ಆದರೆ ಇಬ್ಬರು ಕನ್ನಡಿಗರು ಮೂರನೆಯವ ಅನ್ಯಬಾಷಿಕ ನಾದರೆ ಒಂದೆ ಅವನ ಬಾಷೆಯಲ್ಲಿ ಮಾತಾಡುತ್ತಾರೆ ಅಥವಾ ಬರದಿದ್ದರೆ ಇಂಗ್ಲೀಷಿನಲ್ಲಿ ಮಾತಾಡಿ ತಮ್ಮ ಉದಾರತೆ ಮೆರೆದಿದ್ದೇವೆ ಎಂದು ಹೆಮ್ಮೆ ಪಡುತ್ತಾರೆ. ಇದಕ್ಕೆ ನಮ್ಮ ವಿಚಾರವಾದಿ ಗಳೆನಿಸಿ ಕೊಂಡವರು ಆಗಾಗ ಸಾರ್ವಜನಿಕ ವಾಗಿ ಉದರಿಸುವ ಅಣಿಮುತ್ತುಗಳು ಕಾರಣ ಎಂದು ನನಗನಿಸುತ್ತದೆ. ಯಾಕಂದರೆ ಇನ್ನೂ ವಿದ್ಯಾರ್ಥಿದೆಸೆಯಲ್ಲಿರುವವರಿಗೆ ಅದು ವಿಶಾಲಮನೋಭಾವದ ಸತ್ಯವಾಗಿ ಗೋಚರಿಸುತ್ತದೆ.

ಆದರೆ ನಾವು ಎಲ್ಲಿ ಎಡವುತ್ತಿದ್ದೇವೆ ಎಂದರೆ ನಾವು ನಮ್ಮ ಮಕ್ಕಳಿಗೆ ಮಾತ್ರಬಾಷಾಭಿಮಾನದ ಬಗ್ಗೆ ತಿಳಿಹೇಳುವಲ್ಲಿ ಎಡವಿದ್ದೇವೆ. ಕಾನ್ವೆಂಟನವರು ಇಂಗ್ಲೀಷಿನಲ್ಲಿ ಮಾತಾಡಬೇಕೆಂದು ಅಪ್ಪಣೆ ಕೊಡಿಸಿದ ಕೂಡಲೇ ತಂದೆ ತಾಯಿಗಳು ಮನೆಯಲ್ಲಿ ಕೂಡ ಮಗು ಒಂದೂ ಕನ್ನಡ ಮಾತಾಡ ದಂತೆ ಎಚ್ಚರ ವಹಿಸುತ್ತಾರೆ. ಇನ್ನು ಆಪುಟ್ಟ ಮಗುವಿಗೆ ಕನ್ನಡಾಭಿಮಾನ ಹೇಗೆ ಬರ ಬೇಕು. ಆದ್ದರಿಂದ ಕನ್ನಡ ತಂದೆ ತಾಯಿಗಳು ಮಗು ಶಾಲೆಯಲ್ಲಿ , ಗೆಳೆಯರೊದನೆ ಹಿತಮಿತವಾಗಿ ಅಭ್ಯಾಸಕ್ಕಾಗಿ ಇಂಗ್ಲೀಷ ಬಳಸಿದರೂ ಸಾರ್ವಜನಿಕವಾಗಿ ಕನ್ನಡ ದಲ್ಲೇ ಮಾತಾಡುವಂತೆ ಪ್ರೋತ್ಸಾಹಿಸಬೇಕು. ಯಾರಾದರೂ ಅನ್ಯರು ಅದನ್ನು ಆಕ್ಷೇಪಿಸಿದರೆ ಪ್ರತಿರೋಧ ತೋರಲು ಮಗುವಿಗೆ ತಿಳಿಸಿ ಹೇಳ ಬೇಕು. ಅನಿವಾರ್ಯ ಪ್ರಸಂಗ ಹೊರತು ಪಡಿಸಿ ಕನ್ನಡ ಮಾತಾಡಲು ಹಿಂಜರಿಯದಂತೆ ಪ್ರೊತ್ಸಾಹಿಸಬೇಕು.

ಆಗ ಮಾತ್ರ ಕನ್ನಡಾಭಿಮಾನ ನಮ್ಮ ಮುಂದಿನ ಪೀಳಿಗೆಯಲ್ಲಿ ಜಾಗ್ರತವಾಗಿ ಕನ್ನಡದ ಉಳಿವು ಬೆಳವು ಸಾಧ್ಯ.ನಾವು ಕನ್ನಡಿಗರು ಇಂದೇ ಈ ಕೆಲಸಕ್ಕೆ ಕಂಕಣ ಬದ್ಧರಾಗೋಣ.

ಅನಂತ ಪಂಡಿತ

 

Rating
No votes yet