ಮೇಘವರ್ಷಿಣಿ

ಮೇಘವರ್ಷಿಣಿ

ಕವನ

ಧೋ ಎಂದು ಸುರಿಯುತ್ತಿರುವ ವರ್ಷಧಾರೆಯಲಿ

ಸೂರಿಗಾಗಿ ಓಡಿ ಬರುತ್ತಿದ್ದ ನಾ ಕಂಡೆ ನಿನ್ನನು

ಸುರಿವ ಮಳೆಯ ಲೆಕ್ಕಿಸದೆ ತೋಯುತ ನಿಂತೆ

 

ನೀ ಹಿಡಿದ ಕಪ್ಪು ಕೊಡೆಯು ಮರೆಮಾಚುತ್ತಿತ್ತು

ನಿನ್ನ ಸುಂದರ ಶುಭ್ರ ಶ್ವೇತ ವದನವ 

ಕಾತರ ತಾಳಲಾಗದೆ ನಾ ನಿಂತಿದ್ದೆ ನಿನ್ನ ವದನವ ನೋಡಲು

 

ಜೋರಾಗಿ ಬೀಸಿದ ಗಾಳಿಗೆ ಕೊಡೆಯು ಹಿಂದಕ್ಕೆ

ಸರಿಯಲು ಮಿಂಚೊಂದು ಹೊಡೆದ ಅನುಭವವಾಯಿತು

ಏನದು ಅಂದ ಏನದು ಚೆಂದ ಚೆಲುವೆ...

 

ಮಳೆಯ ಹನಿಯು ನಿನ್ನ ವದನದ ಮೇಲೆ ಬಿದ್ದಾಗ

ನೀ ಬೀರಿದ ಮಂದಹಾಸಕೆ ಸೋತು ಶರಣಾದೆ ನಾ

ಮಳೆಯ ಹನಿಗೆ ನೀ ಕೈ ಚಾಚಿ ನಲಿದಾಗ ಮರೆತೇ ನನ್ನ ನಾ...

 

ಇಂದ್ರನ ಮಗಳ ನೀ, ಗಂಧರ್ವ ಕನ್ಯೆಯ ನೀ

ಬೇಲೂರು ಶಿಲಾಬಾಲಿಕೆಯಾ ನೀ, ಅಪ್ಸರೆಯ ನೀ

ಮರುಳಾಗಿ ಹೋದೆ ನಾ ನಿನ್ನ ಸ್ನಿಗ್ಧ ಸೌಂದರ್ಯಕೆ... 

ಚಿತ್ರಕೃಪೆ : ಅಂತರ್ಜಾಲ

Comments