ಧೊಂಡಿಯ ವಾಘನ ಖಡ್ಗ
ಭಾರತ ಆಂಗ್ಲರ ಗುಲಾಮಗಿರಿಗೆ ಒಳಗಾಗಿದ್ದ ಕಾಲದ ಘಟನೆಯಿದು. ಕರ್ನಾಟಕವೂ ಸಹ ಆಂಗ್ಲರ ಆಡಳಿತಕ್ಕೆ ಅಷ್ಟು ಸುಲಭವಾಗಿ ಪ್ರತಿರೋಧವಿಲ್ಲದೆ ಒಳಪಟ್ಟಿರಲಿಲ್ಲ. ಇಂತಹ ಪ್ರತಿರೋಧ ಒಡ್ಡಿ ಬ್ರಿಟಿಷರ ನಿದ್ದೆಗೆಡಿಸಿದವರಲ್ಲಿ ಧೊಂಡಿಯ ವಾಘ್ ಸ್ಮರಿಸಬೇಕಾದ ಹೆಸರು. ಹಿಂದಿನ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿರುವ ಚನ್ನಗಿರಿಯವನು ಧೊಂಡಿಯವಾಘ. ಕಟ್ಟುಮಸ್ತಾದ ದೇಹಧಾರ್ಢ್ಯ ಹೊಂದಿದ್ದ ಇವನು ೧೭೯೪ರಲ್ಲಿ ಟಿಪ್ಪುಸುಲ್ತಾನನ ಸೈನ್ಯಕ್ಕೆ ಸೇರಿದ. ಪರಧರ್ಮಸಹಿಷ್ಣು ಎಂದು ಬಣ್ಣಿಸಲಾಗುತ್ತಿರುವ ಮೈಸೂರು ಹುಲಿ ಟಿಪ್ಪುಸುಲ್ತಾನ್ ಇವನನ್ನು ಮುಸ್ಲಿಮನಾಗಿ ಮತಾಂತರ ಹೊಂದಲು ಒತ್ತಾಯಿಸಿದರೂ, ಪ್ರಲೋಭನೆಗಳನ್ನು ಒಡ್ಡಿದರೂ ಒಪ್ಪದ ಇವನನ್ನು ಬಲವಂತವಾಗಿ ಮತಾಂತರಿಸಲಾಯಿತು. ಆದರೂ ಸ್ವಧರ್ಮ ಬಿಡಲು ಒಪ್ಪದ ಇವನನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿರಿಸಿದರು. ಟಿಪ್ಪು ಹತನಾಗುವವರೆಗೆ ಅಂದರೆ ೧೭೯೯ರವರೆಗೆ ಸೆರೆಮನೆಯಲ್ಲೇ ಸುಮಾರು ೫ ವರ್ಷಗಳ ಕಾಲ ಕಳೆದಿದ್ದ ಧೊಂಡಿಯ ನಂತರ ಅಲ್ಲಿಂದ ಪಾರಾಗಿ ಬಿದನೂರಿಗೆ ಬಂದು ತನ್ನದೇ ಒಂದು ಸೈನ್ಯ ಕಟ್ಟಿದ. ನೌಕರಿಯಿಂದ ತೆಗೆಯಲ್ಪಟ್ಟ ಸ್ವಾಭಿಮಾನಿ ನೌಕರರು, ಸೈನಿಕರು, ಬ್ರಿಟಿಷರ ಆಳ್ವಿಕೆಯಿಂದ ಬೇಸರಗೊಂಡಿದ್ದ ಯುವಕರು ಅವನೊಂದಿಗೆ ಸೇರಿಕೊಂಡರು.
ಬಿದನೂರು - ಶಿಕಾರಿಪುರ ಪ್ರದೇಶದಿಂದ ೧೮೦೦ರ ಸುಮಾರಿನಲ್ಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಬಾವುಟ ಹಾರಿಸಿದ ಇವನೊಂದಿಗೆ ಸುತ್ತಮುತ್ತಲಿನ ರಾಜರುಗಳು ಕೈಜೋಡಿಸಿದ್ದರು. ಕರಾವಳಿ ಪ್ರದೇಶದಲ್ಲಿ ಜಮಾಲಾಬಾದ್ನಿಂದ ಸೋದೆಯವರೆಗೆ ಮತ್ತು ಘಟ್ಟ ಪ್ರದೇಶದ ಮೇಲೆ ಬೆಳಗಾಮ್, ರಾಯಚೂರಿನವರೆಗೆ ಸಹ ಆತನ ಕ್ರಾಂತಿಯ ವ್ಯಾಪ್ತಿ ವಿಸ್ತರಿಸಿತ್ತು. ಧೊಂಡಿಯ ವಾಘ್ನನ್ನು ಮಣಿಸುವುದು ಆಂಗ್ಲರಿಗೆ ಸುಲಭವಾಗಿರಲಿಲ್ಲ. ಗೆರಿಲ್ಲಾ ಮಾದರಿಯಲ್ಲಿ ಹೊಂಚುಹಾಕಿ ಆಂಗ್ಲ ಸೈನಿಕರ ಮೇಲೆ ದಾಳಿ ಮಾಡಿ ಸಾಕಷ್ಟು ಕಷ್ಟ-ನಷ್ಟ ಉಂಟುಮಾಡಿ ಅವರು ಎಚ್ಚೆತ್ತು ತಿರುಗಿ ಬೀಳುವ ವೇಳೆಗೆ ಕಣ್ಮರೆಯಾಗುತ್ತಿದ್ದ ಅವನನ್ನು ಹಿಡಿಯುವ ಸಲುವಾಗಿಯೇ ಲಾರ್ಡ್ ವೆಲ್ಲೆಸ್ಲಿ ಸೈನಿಕರ ಒಂದು ಪ್ರತ್ಯೇಕ ತಂಡವನ್ನೇ ನಿಯೋಜಿಸಿದ್ದ. ಒಂದೊಮ್ಮೆ ಈರೀತಿಯ ಹೋರಾಟ ಮಾಡಿದ ಸಂದರ್ಭದಲ್ಲಿ ಆಂಗ್ಲ ಸೈನಿಕರಿಂದ ತಪ್ಪಿಸಿಕೊಳ್ಳಲು ಹರಿಯುತ್ತಿದ್ದ ದೊಡ್ಡ ಹಳ್ಳವನ್ನು ತನ್ನ ಕುದುರೆಯನ್ನು ಹುರಿದುಂಬಿಸಿ ಹಾರಿಸಿದ ಧೀರನವನು. ಇಂತಹುದೇ ಮತ್ತೊಂದು ಸಂದರ್ಭದಲ್ಲಿ ಶಿಕಾರಿಪುರದ ಹುಚ್ಚರಾಯಸ್ವಾಮಿ (ಭ್ರಾಂತೇಶ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಆಂಜನೇಯ) ದೇವಾಲಯದಲ್ಲಿ ಅಡಗಿ ರಕ್ಷಣೆ ಪಡೆದಿದ್ದು, ರಕ್ಷಿಸಿದ್ದಕ್ಕೆ ಕೃತಜ್ಞತೆಯಾಗಿ ತನ್ನ ಖಡ್ಗವನ್ನು ದೇವರಿಗೆ ಸಮರ್ಪಿಸಿದ್ದ ಧೊಂಡಿಯ ವಾಘ.
'ಎರಡು ಲೋಕಗಳ ಒಡೆಯ' ಎಂಬ ಬಿರುದು ಸಂಪಾದಿಸಿದ್ದ ಹುಲಿಯಂತೆಯೇ (ವಾಘ್ = ಹುಲಿ) ಹೋರಾಡಿದ ಅವನನ್ನು ಆಂಗ್ಲರು ಶಿವಮೊಗ್ಗದ ಸಮೀಪ ಸುತ್ತುವರೆದಾಗ ಅಲ್ಲಿಂದ ತಪ್ಪಿಸಿಕೊಂಡು ಉತ್ತರ ಕರ್ನಾಟಕಕ್ಕೆ ಹೋದಾಗ ಮರಾಠಾ ಸೇನಾಪತಿ ಗೋಖಲೆಯಿಂದಲೂ ಪ್ರತಿರೋಧ ಎದುರಿಸಬೇಕಾಯಿತು. ಅಲ್ಲಿಂದಲೂ ತಪ್ಪಿಸಿಕೊಂಡು ಜೂನ್, ೧೮೦೦ರಲ್ಲಿ ತುಂಗಭದ್ರಾ - ಮಲಪ್ರಭಾ ನದಿಗಳ ನಡುವಿನ ಪ್ರದೇಶಕ್ಕೆ ಬಂದ ಇವನು ನಂತರದಲ್ಲಿ ಹೊಂಚು ಹಾಕಿ ೧೦೦೦೦ ಕುದುರೆ ಸವಾರರು, ೫೦೦೦ ಕಾಲ್ದಳ, ೮ಫಿರಂಗಿಗಳನ್ನು ಹೊಂದಿದ್ದ ಪ್ರಬಲ ಮರಾಠಾ ಸರದಾರ ಗೋಖಲೆಯನ್ನು ಎದುರಿಸಿ ಕೊಂದುಹಾಕಿದ್ದು ಆತನ ಧೈರ್ಯದ ಪ್ರತೀಕವೇ ಸರಿ. ಲಾರ್ಡ್ ವೆಲ್ಲೆಸ್ಲಿ ಧೊಂಡಿಯನನ್ನು ಮಲಪ್ರಭಾ ಬಲದಂಡೆಯ ಸಮೀಪಕ್ಕೂ ಬಂದು ಬೆನ್ನಟ್ಟಿದಾಗ ತನ್ನ ಸಾಮಗ್ರಿಗಳು, ಆನೆಗಳು, ಕುದುರೆಗಳನ್ನು ಬಿಟ್ಟು ಪುನಃ ತಪ್ಪಿಸಿಕೊಂಡು ಶಿರಹಟ್ಟಿಗೆ ಬಂದ. ನಿಜಾಮನ ಸೀಮೆ ತಲುಪಿದ ಇವನನ್ನು ಅಲ್ಲಿಯೂ ಬೆನ್ನಟ್ಟಿದ ಆಂಗ್ಲರು ಕೋಣಗಲ್ಲು ಎಂಬಲ್ಲಿ ಸುತ್ತುಗಟ್ಟಿದಾಗ ಧೊಂಡಿಯವಾಘ ೧೦-೦೯-೧೮೦೦ರಲ್ಲಿ ವೀರಮರಣ ಹೊಂದಿದ. ಅವಕಾಶ ಸಿಕ್ಕಿದ್ದರೆ ಧೊಂಡಿಯವಾಘ ಎರಡನೆಯ ಹ್ಶೆದರಾಲಿ ಆಗುತ್ತಿದ್ದ ಎಂಬುದು ಪ್ರಸಿದ್ಧ ಇತಿಹಾಸಕಾರ ಎಡ್ವರ್ಡ್ ಥಾರ್ನ್ಟನ್ನನ ಉದ್ಗಾರ. ಕುಟಿಲತೆಗೆ ಹೆಸರಾದ ಬ್ರಿಟಿಷರು ಕೇವಲ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹದಿಂದ ಬೆದರಿ ದೇಶ ಬಿಟ್ಟು ಹೋದರು ಎಂಬುದು ಸರಿಯಲ್ಲ ಮತ್ತು ವಾಸ್ತವತೆಗೆ ಮಾಡಿದ ಅಪಚಾರವಾಗುತ್ತದೆ. ಧೊಂಡಿಯವಾಘನಂತಹ ಅಸಂಖ್ಯಾತ ಹೋರಾಟಗಾರರ ಪಾಲು ಮಹತ್ವದ್ದಾಗಿದ್ದು ಅವರೆಲ್ಲರ ಸಾಮೂಹಿಕ ಹೋರಾಟದ ಫಲವೇ ಸ್ವಾತಂತ್ರ್ಯ. ಅಂತಹವರನ್ನು ಗುರುತಿಸಿ ಗೌರವಿಸುವುದು, ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಧೊಂಡಿಯವಾಘ್ ಶಿಕಾರಿಪುರದ ಹುಚ್ಚರಾಯಸ್ವಾಮಿಗೆ ಅರ್ಪಿಸಿದ್ದ ಖಡ್ಗ ಈಗಲೂ ದೇವಾಲಯದಲ್ಲಿದೆ. ವಿಜಯದಶಮಿಯಂದು ಈ ಖಡ್ಗದಿಂದಲೇ ಬನ್ನಿ ಕಡಿಯುವ ಸೌಭಾಗ್ಯ ಶಿಕಾರಿಪುರದ ತಾಲ್ಲೂಕು ದಂಡಾಧಿಕಾರಿಯವರಿಗೆ ಸಿಗುತ್ತದೆ. ಎರಡು ವರ್ಷಗಳು ಈ ಖಡ್ಗವನ್ನು ಹಿಡಿಯುವ ಮತ್ತು ಬನ್ನಿ ಕಡಿಯುವ ಪುಣ್ಯ ನನಗೆ ಸಿಕ್ಕಿತ್ತು. ಬ್ರಿಟಿಷರನ್ನು ನಡುಗಿಸಿದ ಧೊಂಡಿಯವಾಘನ ಖಡ್ಗವನ್ನು ನಾನು ಹಿಡಿದು ಬಾಳೆಯ ಕಂದನ್ನು ಕಡಿಯುವಾಗ ಹೆಮ್ಮೆಯಿಂದ ಉಬ್ಬಿದ್ದು ಸುಳ್ಳಲ್ಲ. ಆ ಕ್ಷಣಗಳನ್ನು ನೆನೆಸಿಕೊಂಡು ಈಗಲೂ ಪುಲಕಿತನಾಗುತ್ತಿರುತ್ತೇನೆ.
*************************
-ಕ.ವೆಂ.ನಾಗರಾಜ್.
(ಆಧಾರ: ಜ್ಞಾನಗಂಗೋತ್ರಿ -ಕಿರಿಯರ ವಿಶ್ವಕೋಶ-ಸಂಪುಟ-೭)
ಧೊಂಡಿಯವಾಘನ ಖಡ್ಗ
ಶಿಕಾರಿಪುರದ ಹುಚ್ಚರಾಯಸ್ವಾಮಿ
Comments
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by sathishnasa
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by ಭಾಗ್ವತ
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by Jayanth Ramachar
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by ಗಣೇಶ
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by makara
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by manju787
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by RAMAMOHANA
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by partha1059
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by makara
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by santhosh_87
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by gopaljsr
ಉ: ಧೊಂಡಿಯ ವಾಘನ ಖಡ್ಗ
ಉ: ಧೊಂಡಿಯ ವಾಘನ ಖಡ್ಗ
In reply to ಉ: ಧೊಂಡಿಯ ವಾಘನ ಖಡ್ಗ by Chikku123
ಉ: ಧೊಂಡಿಯ ವಾಘನ ಖಡ್ಗ