ಭ್ರಷ್ಟಾಚಾರ ಹೋರಾಟದ ಹಾದಿ ತಪ್ಪಿಸದಿರಿ ......
ಸ್ನೇಹಿತರೆ ದೇಶದಲ್ಲೆಲ್ಲ ಭ್ರಷ್ಟಾಚಾರದ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡುತ್ತಿದೆ, ಅದನ್ನು ಬೇರು ಸಹಿತ ಕಿತ್ತೊಸೆಯಲು ಸಾದ್ಯವಾಗದಿದ್ದರು ಅದನ್ನು ಸಾಕಷ್ಟು ಕಡಿಮೆ ಮಾಡಲು ಸಿಕ್ಕಿರುವ ಕಡೆಯ ಅವಕಾಶ ಇದು ಎಂದು ಇಡೀ ಭಾರತವೇ ನಂಬಿದೆ, ಭ್ರಷ್ಟಾಚಾರದ ವಿರುದ್ದದ ಈ ಸಮರ ನಿಜವಾಗಿಯೂ ಒಂದು ಒಳ್ಳೆಯ ಬೆಳವಣಿಗೆ. ಸಾಕಷ್ಟು ಜನರು ಇದರಲ್ಲಿ ಅವರದೇ ಆದ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ನಾವೆಲ್ಲರೂ ಭ್ರಷ್ಟಾಚಾರದ ವಿರುದ್ದ ಎತ್ತಿರುವ ಈ ಕೂಗು ನಮ್ಮ ಸರಕಾರಕ್ಕೆ ಒಂದಲ್ಲ ಒಂದು ದಿನ ಮುಟ್ಟುತ್ತದೆ ಎಂಬ ನಂಬಿಕೆ ನಮಗಿದೆ, ನಮ್ಮ ಈ ಕೂಗನ್ನು ಸರಕಾರಕ್ಕೆ ಮುಟ್ಟಿಸಲೇ ಬೇಕು ಎಂದು ಪಣ ತೊಟ್ಟಿರುವ ನಮ್ಮ ಅನೇಕ ಬ್ರಷ್ಟಾಚಾರ ವಿರೋಧಿ ನಾಯಕರಲ್ಲಿ ಅಣ್ಣ ಹಜಾರೆಯವರು ಹಿರಿಯರು ಮತ್ತು ಮೊದಲಿಗರು.
ಸತತ 42 ವರ್ಷಗಳಿಂದ ಸದ್ದಿಲ್ಲದೇ ನೆಡೆಯುತ್ತಿರುವ ಈ ಹೋರಾಟದ ತೀವ್ರತೆ ಈಗಷ್ಟೇ ಹೆಚ್ಚುತ್ತಿದೆ, ಅದರ ಬಲ ಈಗಷ್ಟೇ ಹಿಗ್ಗುತಿದೆ, ಹೋರಾಟಕ್ಕೆ ನಾಡಿನ ಹಿರಿಯರು, ಚಿಂತಕರು,ವಿದ್ಯಾರ್ಥಿಗಳು, ಕಾರ್ಮಿಕರು,ರೈತರು ಇನ್ನೂ ಅನೇಕ ವರ್ಗದ ಜನರು ತಮ್ಮನು ತಾವು ತೊಡಗಿಸಿಕೊಂಡು ಹೋರಾಟಕ್ಕೊಂದು ಬಲವನ್ನು ತಂದಿದ್ದಾರೆ. ಇಂತಹ ಸಂದರ್ಭದಲ್ಲಿ, ನಾವು ನಮ್ಮ ಹೋರಾಟದ ವಿಷಯದ ಬಗ್ಗೆ ಚರ್ಚಿಸಬೇಕು, ಹೋರಾಟದ ಹಾದಿಯ ಬಗ್ಗೆ ಯೋಚಿಸಬೇಕು,ಹೋರಾಟದ ಬಗ್ಗೆ ತಗೆದುಕೊಳ್ಳುವ ನಿಲುವುಗಳ ಬಗ್ಗೆ ಗಮನ ಹರಿಸಬೇಕೆ ಹೊರತು ಹೋರಾಟದಲ್ಲಿ ಪಾಲ್ಗೊಂಡಿರುವ ನಾಯಕರ ಯೋಗ್ಯತೆಯ ಬಗ್ಗೆ ಕೀಳುಮಟ್ಟದ ಚರ್ಚೆಗೆ ಇಳಿಯಬಾರದು. ಹೋರಾಟದಲ್ಲಿ ಭಾಗಿಯಾಗಿರುವ ಸಾಮಾಜಿಕ ಕಾರ್ಯಕರ್ತರ ಯೋಗ್ಯತೆಯನ್ನು ಪ್ರಶ್ನಿಸುವ ಮೊದಲು ಸಾಕಷ್ಟು ಬಾರಿ ಯೋಚಿಸಲೇ ಬೇಕು ಮತ್ತು ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. " ಈ ಹೋರಾಟವನ್ನು ನಾನೇ ಆರಂಬಿಸಿರುವು, ನಾನೇ ಇದರ ನಾಯಕ, ನೀವೆಲ್ಲ ನನ್ನ ಆಜ್ಞೆಗಳನ್ನು ಪಾಲಿಸಲೇಬೇಕು " ಎಂದು ಅಣ್ಣ ಹಜಾರೆಯವರು ಯಾವತ್ತೂ ಹೇಳಿಲ್ಲ. ಅಣ್ಣ ಅವರ ಯೋಗ್ಯತೆಯನ್ನು ಅರಿತ ನಾವು ಅವರನ್ನು ಗೊತ್ತಿಲ್ಲದಂತೆ ಅವರನ್ನು ನಮ್ಮ ನಾಯಕರೆಂದು ಒಪ್ಪಿಕೊಂಡು, ನಮ್ಮ ಮನದಲ್ಲೇ ಇದ್ದ ಬಹುದಿನದ ಕೂಗಿಗೆ ಅವರನ್ನು ದ್ವನಿಯಾಗಿಸಿಕೊಂಡಿದ್ದೇವೆ.
ದೃಶ್ಯ ಮಾಧ್ಯಮಗಳು ಮತ್ತು ಪತ್ರಿಕಾ ಮಾಧ್ಯಮಗಳು ಹೆಚ್ಚು ವಿಷಯಾಧಾರಿತ ಚರ್ಚೆಗಳಿಗೆ ಹೊತ್ತು ನೀಡಬೇಕೆ ಹೊರತು ವ್ಯಕ್ತಿಗತ ಚರ್ಚೆಗಳಿಗೆ ಅವಕಾಶ ಕೊಡಬಾರದು. ಕೆಲವು ಬುದ್ದೀಜೀವಿಗಳು, ಚಿಂತಕರು ಕೂಡ ಅಣ್ಣ ಅವರ ಯೋಗ್ಯತೆಯನ್ನು ಪ್ರಶ್ನಿಸುವುದರ ಬದಲಾಗಿ ಹೋರಾಟದ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು, ತಮ್ಮ ಚಿಂತನೆಯಿಂದ ಹೋರಾಟಗಾರರಿಗೆ ಮಾರ್ಗದರ್ಶಕರಾಗಬೇಕು.ಈ ಹೋರಾಟದಲ್ಲಿ ಬ್ರಷ್ಟಾಚಾರವೆಂಬ ವಿಷಯವಷ್ಟೆ ಮುಖ್ಯವಾದದ್ದು, ನಾವು ಅದರ ಕಡೆ ಗಮನ ಹರಿಸಬೇಕೆ ಹೊರತು ಅದರ ಸ್ವರೂಪ ಮತ್ತು ಭಾಗಿಯಾದವರ ವಯ್ಯಕ್ತಿಕ ವಿಚಾರಗಳನ್ನು ಚರ್ಚಿಸಿವುದರಿಂದ ಹೋರಾಟದ ಹಾದಿ ಬದಲಾಗುವುದು ಮತ್ತು ಈ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಿರುವ ರಾಜಕೀಯ ಪಕ್ಷಗಳಿಗೆ ನಾವೇ ಹೋರಾಟವನ್ನು ಅತ್ತಿಕ್ಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ನಿಜ ನಾವು ಒಪ್ಪುತ್ತೇವೆ ನಾಯಕರು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳು ಮತ್ತು ನಿಲುವುಗಳು ನೂರಕ್ಕೆ ನೂರರಷ್ಟು ಸರಿಯಾಗಿರಬೇಕೆಂದೇನಿಲ್ಲ, ಅವುಗಳನ್ನು ನಾವು ಒಪ್ಪಲೇ ಬೇಕೆಂದು ಕೂಡ ಎಲ್ಲಿಯೂ ಇಲ್ಲ, "ಇವನ್ನೇ ಒಪ್ಪಿ" ಎಂದು ಯಾವ ನಾಯಕರು ನಮಗೆ ಹೇಳುವಂತೆಯೂ ಇಲ್ಲ, ಸ್ವಾತಂತ್ರ ಪೂರ್ವದಲ್ಲೂ ಮಹಾತ್ಮ ಗಾಂಧೀಜಿಯವರ ನಿಲುವುಗಳನ್ನು ವಿರೋದಿಸುವವರಿದ್ದರು, ಸ್ವಾತಂತ್ರದ ನಂತರ ನೆಡೆದ ಜಯಪ್ರಕಾಶ್ ನಾರಾಯಣರ ಹೋರಾಟಕ್ಕೂ ಸಾಕಷ್ಟು ವಿರೋಧಿಗಳು ಕೂಡ ಇದ್ದರು. ಹಾಗಾಗಿ ನಾಯಕರುಗಳ ನಿರ್ಧಾರಗಳನ್ನು ಮಾದ್ಯಮಗಳು ಮತ್ತು ಜನರು ಸರಿಯಾಗಿ ಚರ್ಚಿಸಿ, ಸಾಕಷ್ಟು ಅವಲೋಕಿಸಿ, ತಮ್ಮ ತಮ್ಮ ನಿಲುವುಗಳನ್ನು ನಾವು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಯಬೇಕೆ ಹೊರತು ಮನಬಂದಂತೆ Twitter,Facebook,TV ಮಾಧ್ಯಮಗಳಲ್ಲಿ ನಾಯಕರ ಬಗ್ಗೆ ಮತ್ತು ಅವರ ಯೋಗ್ಯತೆ ಬಗ್ಗೆ ಚರ್ಚಿಸಬಾರದು. ಬುದ್ದೀಜೀವಿಗಳು, ಚಿಂತಕರು,ರಾಜಕೀಯ ನಾಯಕರು ಬೇಜಾವಾಬ್ದಾರಿಯಿಂದ ನೀಡುವ ವ್ಯಕ್ತಿಗತ ಹೇಳಿಕೆಗಳು, ವಿಚಾರಗಳನ್ನು ತಮ್ಮ ಬುದ್ದಿ ಮಟ್ಟಕ್ಕೆ ತಾವು ಅರ್ಥೈಸಿಕೊಂಡು ಹಾಡುವ ಒಂದೊಂದು ಮಾತುಗಳು, ಮಾಡುವ ಒಂದೊಂದು ಅಪಪ್ರಚಾರಗಳು ಸಮಾಜಕ್ಕೆ ಕೆಟ್ಟ ಸಂದೇಶಗಳನ್ನು ರವಾನಿಸುತ್ತವೆ. ಹಾಗಾಗಿ ಇಲ್ಲಿ ವಿಷಯದ ಬಗ್ಗೆ, ಹೋರಾಟದ ವಿಚಾರದ ಬಗ್ಗೆ, ಹೋರಾಟಕ್ಕೆ ಬಳಸಿಕೊಂಡಿರುವ ದಾರಿಯ ಬಗ್ಗೆ, ಮುಂದಿನ ಕಾರ್ಯತಂತ್ರಗಳ ಬಗ್ಗೆ, ಹೋರಾಟದ ಬಗ್ಗೆ ಜಾಗೃತಿ ಮೂಡಿಸುವುದರ ಬಗ್ಗೆ ಚರ್ಚೆಯಾಗಲಿ, ವ್ಯಕ್ತಿಗಳ ಬಗ್ಗೆ ಚರ್ಚೆಗಳು ಬೇಡವೇ ಬೇಡ.
ನಿಮಗಾಗಿ.......
ನಿರಂಜನ್
Comments
ಉ: ಭ್ರಷ್ಟಾಚಾರ ಹೋರಾಟದ ಹಾದಿ ತಪ್ಪಿಸದಿರಿ ......
In reply to ಉ: ಭ್ರಷ್ಟಾಚಾರ ಹೋರಾಟದ ಹಾದಿ ತಪ್ಪಿಸದಿರಿ ...... by makara
ಉ: ಭ್ರಷ್ಟಾಚಾರ ಹೋರಾಟದ ಹಾದಿ ತಪ್ಪಿಸದಿರಿ ......