ಹೊಸ ಬೆಳಕಿನಲಿ. . .
ಕವನ
ಭುವಿಯ ಸ್ಪರ್ಶಿಸುತಿಹ
ರವಿಯ ಎಳೆಯ ಕಿರಣಗಳ
ಕಂಡು ಮರೆಯ ಬಯಸುವೆ
ಮನದಾಳದ ನೋವುಗಳ
ಮರದ ಮರೆಯಲಿ ಕುಳಿತು
ಚಿಲಿ - ಪಿಲಿ ಎಂದು ಉಲಿಯುವ
ಹಕ್ಕಿಗಳ ಮಧುರ ರಾಗದಲಿ
ಹುಡುಕುವೆ ಹೊಸ ಹರುಷವ
ಮತ್ತೆ ಬಂದ ರವಿಯ ಕಂಡು
'ಉಲ್ಲಸಿ'ತಳಾದ 'ಭೂರಮಣಿ'ಯ
ಸಂಭ್ರಮ, ಸಡಗರದಲಿ ;
ಅರಸುವೆ ನವ ಚೇತನವ
'ಕಷ್ಟ - ಸುಖ'ಗಳ ಹಂಚಿಕೊಳಲು
ಏನೆಲ್ಲಾ ಇದೆ ಈ ಭುವಿಯಲಿ !
ಅರ್ಥ ಮಾಡಿಕೊಳ್ಳಬೇಕು ಮನದಲಿ
ಸೊಬಗ ಸವಿಯಬೇಕು ಕಂಗಳಲಿ. . .
ಹೊಸ ದಿನದ ಹೊಸ ಬೆಳಕಲಿ
ಅದೆಂತ ಸಡಗರ ಭುವಿಯಲಿ
ಪ್ರಕೃತಿಯ ಸೃಷ್ಟಿಸಿದ ಆ ದೇವನಿಗೆ
ವಂದಿಸುವೆ ನಾ ಮನದಲಿ. . .
Comments
ಉ: ಹೊಸ ಬೆಳಕಿನಲಿ. . .
In reply to ಉ: ಹೊಸ ಬೆಳಕಿನಲಿ. . . by SACHIN KRISHNA B
ಉ: ಹೊಸ ಬೆಳಕಿನಲಿ. . .